ಪ್ರತಿದಿನ ರಾತ್ರಿ ಪಾದಕ್ಕೆ ಎಣ್ಣೆಯ ಮಸಾಜ್ ಮಾಡಿ, ಸಾಕಷ್ಟು ಆರೋಗ್ಯ ಲಾಭ ಪಡೆಯಿರಿ..

ರಾತ್ರಿ ಮಲಗುವಾಗ ಪಾದವನ್ನು ಚೆನ್ನಾಗಿ ಮಸಾಜ್ ಮಾಡಿಕೊಂಡು ಮಲಗಿದ್ರೆ, ಹಲವು ಆರೋಗ್ಯಕರ ಲಾಭಗಳಿದೆ. ಈ ಆಯುರ್ವೇದದ ಪ್ರಯೋಗವನ್ನು ನೀವು ಮಾಡಿದ್ರೆ, ನಿಮ್ಮ ಆರೋಗ್ಯ ವೃದ್ಧಿಸುವುದು ಗ್ಯಾರಂಟಿ. ಹಾಗಾದ್ರೆ ರಾತ್ರಿ ಮಲಗುವಾಗ ಯಾಕೆ ಪಾದಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಊಟವಾದ ಬಳಿಕ ಸಿಹಿ ತಿನ್ನುವ ಪದ್ಧತಿ ಆರೋಗ್ಯಕ್ಕೆಷ್ಟು ಮಾರಕ ಗೊತ್ತಾ..?

ಆಚಾರ್ಯ ವಾಗ್ಭಟರ ಅನುಸಾರ ಪ್ರತಿದಿನ ರಾತ್ರಿ ಪಾದಕ್ಕೆ ಎಣ್ಣೆಯಿಂದ ಮಾಲೀಶ ಮಾಡುವುದರಿಂದ ಚಕ್ಷು ಆರೋಗ್ಯ ಉತ್ತಮವಾಗುತ್ತದೆ. ಅಂದ್ರೆ ಇದರಿಂದ ಕಣ್ಣಿನ ದೃಷ್ಟಿ ತೀಕ್ಷ್ಣವಾಗುತ್ತದೆ. ಯಾಕಂದ್ರೆ ಪಾದದಲ್ಲಿರುವ ನಾಡಿ ಕಣ್ಣಿಗೆ ಸಂಬಂಧಿಸಿದೆ. ಹಾಗಾಗಿ ಪಾದದ ಮಸಾಜ್ ಮಾಡಿದ್ರೆ, ಕಣ್ಣಿನ ಆರೋಗ್ಯ ಅಭಿವೃದ್ಧಿಯಾಗುತ್ತದೆ.

ವಾತದೋಷವಾಗಿ ಹೊಟ್ಟೆಯ ಆರೋಗ್ಯ ಹಾಳಾದಾಗ, ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ ಸಮಸ್ಯೆ ಸೇರಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಬಂದರೆ, ಪಾದಕ್ಕೆ ಎಣ್ಣೆ ಮಸಾಜ್ ಮಾಡಬೇಕು. ಹಾಗೆ ಮಾಡಿದ್ರೆ, ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತದೆ.

ಪ್ರತಿದಿನ ಒಂದೇ ಒಂದು ನೆಲ್ಲಿಕಾಯಿ ತಿಂದ್ರೆ ಆರೋಗ್ಯಕ್ಕಾಗಲಿದೆ ಹಲವು ಲಾಭ..

ರಕ್ತ ಸಂಚಾರ ಉತ್ತಮವಾಗಿದ್ರೆ ನಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡೂ ಉತ್ತಮವಾಗಿರುತ್ತದೆ. ಹಾಗೆ ನಮ್ಮ ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಬೇಕು ಅೞದ್ರೆ, ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದು ಅತ್ಯಗತ್ಯ. ಅಲ್ಲದೇ ಹೀಗೆ ಮಾಡುವುದರಿಂದ ನಿಮ್ಮ ಸ್ಕಿನ್ ಉತ್ತಮವಾಗಿದ್ದು, ನೀವು ವಯಸ್ಸಾದರೂ ಯಂಗ್ ಆಗಿ ಕಾಣುತ್ತೀರಿ.

ಕೆಲವರಿಗೆ ಏನೇ ಮಾಡಿದ್ರೂ ನಿದ್ದೆ ಬರುವುದಿಲ್ಲ. ಕೆಲಸದ ಬಗ್ಗೆ, ಮನೆಯ ಬಗ್ಗೆ ಏನೇನೋ ಟೆನ್ಶನ್ ಇರುತ್ತದೆ. ಅಂಥವರು ರಾತ್ರಿಯಿಡೀ ಏನೇನೋ ವಿಚಾರ ಮಾಡಿಕೊಂಡು, ಟೆನ್ಶನ್ ಮಾಡಿಕೊಂಡು ಒದ್ದಾಡುತ್ತಾರೆ. ಹೀಗೆ ಮಾಡಿದ್ರೆ ಆರೋಗ್ಯವೂ ಹಾಳಾಗತ್ತೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಪಾದಕ್ಕೆ ಎಣ್ಣೆ ಮಸಾಜ್ ಮಾಡಿ ಮಲಗಿ. ಉತ್ತಮ ನಿದ್ದೆಯೂ ಬರುತ್ತದೆ, ಆರೋಗ್ಯವೂ ವೃದ್ಧಿಸುತ್ತದೆ.

About The Author