Thursday, December 4, 2025

Latest Posts

ನವಿಲು ಗರಿಯನ್ನ ಈ ರೀತಿ ಉಪಯೋಗಿಸಿ ನೋಡಿ, ನಿಮ್ಮ ಅದೃಷ್ಟವೇ ಬದಲಾಗುತ್ತದೆ..

- Advertisement -

ಹಲವರು ನವಿಲು ಗರಿಯನ್ನ ತಮ್ಮ ಪುಸ್ತಕದಲ್ಲಿ ಇಟ್ಟುಕೊಳ್ಳುತ್ತಾರೆ. ಯಾಕಂದ್ರೆ ಇದರಿಂದ ಓದಿದ್ದೆಲ್ಲ ನೆನಪಿನಲ್ಲಿರುತ್ತದೆ ಅಂತಾ. ಇದು ಎಷ್ಟು ಸತ್ಯವೋ ಅನ್ನೋದು ಯಾರಿಗೂ ಗೊತ್ತಿಲ್ಲ. ಆದ್ರೆ ನಾವಿಂದು ನವಿಲುಗರಿಯ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ. ಆ ಮಾಹಿತಿಯನ್ನ ತಿಳಿದು, ನೀವು ನವಿಲು ಗರಿಯನ್ನ ಉಪಯೋಗಿಸಿದ್ದಲ್ಲಿ, ನೆಮ್ಮದಿ, ಅದೃಷ್ಟ ನಿಮ್ಮ ಪಾಲಾಗುತ್ತದೆ. ಹಾಗಾದ್ರೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಪತಿ- ಪತ್ನಿ ಕಲಹವಿದ್ದರೆ, ನೀವು ಮಲಗುವ ಕೋಣೆಯಲ್ಲಿ ನವಿಲು ಗರಿಯನ್ನಿರಿಸಿ. ಹೀಗೆ ಇರಿಸಿದರೆ, ನಿಮ್ಮ ಮಧ್ಯೆ ನಡೆಯುವ ಕಲಹ ಕಡಿಮೆಯಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಈ ನವಿಲು ಗರಿಯನ್ನು ಮೈಲಿಗೆ ಮಾಡಬೇಡಿ. ಅಂದರೆ, ಮುಟ್ಟಿನ ಸಮಯದಲ್ಲಿ, ಸೂತಕದ ಸಮಯದಲ್ಲಿ ಇದನ್ನು ಮುಟ್ಟಬೇಡಿ. ಹೀಗೆ ಮಾಡಿದಲ್ಲಿ, ಇದರಲ್ಲಿರುವ ಸಕಾರಾತ್ಮಕ ಶಕ್ತಿ ಕುಂದಿಹೋಗುತ್ತದೆ.

ಇನ್ನು ನಿಜವಾದ ನವಿಲುಗರಿ ಮನೆಯಲ್ಲಿಟ್ಟರೆ, ಸಂಪತ್ತಿಗೆ ಬರವಿರುವುದಿಲ್ಲ. ನೀವು ಶ್ರೀಮಂತರಾಗದಿದ್ದರೂ, ನಿಮ್ಮ ಜೇಬಿನಲ್ಲಿ ದುಡ್ಡು ಎಂದೂ ಖಾಲಿಯಾಗುವುದಿಲ್ಲ. ನಿಮಗೆ ದರಿದ್ರ ಬರುವುದಿಲ್ಲ. ಮನೆಯಲ್ಲಿ ಸದಾ ನೆಮ್ಮದಿ ನೆಲೆಸಿರುತ್ತದೆ. ಆದ್ರೆ ಮನೆಗೆ ಯಾರಾದರೂ ಬಂದರೆ, ಅವರು ಆ ನವಿಲು ಗರಿಯನ್ನ ಮುಟ್ಟದಂತೆ ನೋಡಿಕೊಳ್ಳಿ.

ಮನೆಯಲ್ಲಿ ನವಿಲು ಗರಿ ಇಟ್ಟರೆ, ವಾಸ್ತುದೋಷ ಬರುವುದಿಲ್ಲ ಎನ್ನುವ ನಂಬಿಕೆ ಇದೆ. ಕೆಲವೊಮ್ಮೆ ಮನೆ ಕಟ್ಟಿದಾಗ, ವಾಸ್ತು ದೋಷವಿರುತ್ತದೆ. ಆದ್ರೆ ಮನೆ ಎಲ್ಲ ಕಟ್ಟಿ ಆದ ಬಳಿಕ, ನಿಮಗೆ ಈ ಬಗ್ಗೆ ಗೊತ್ತಾಗುತ್ತದೆ. ಆಗ ಏನೂ ಮಾಡಲು ಸಾಧ್ಯವಿಲ್ಲ. ಆ ವೇಳೆ ನೀವು ನಿಮ್ಮ ಮನೆಯಲ್ಲಿ ನಿಜವಾದ ನವಿಲು ಗರಿಯನ್ನಿರಿಸಿ. ಮತ್ತು ದೇವರಿಗೆ ತಪ್ಪದೇ, ಪ್ರತಿನಿತ್ಯ ಪೂಜೆ ಸಲ್ಲಿಸಿ. ಇದರಿಂದ ಕೊಂಚವಾದರೂ, ವಾಸ್ತು ದೋಷ ಕಡಿಮೆಯಾಗುತ್ತದೆ.

ಇಷ್ಟೇ ಅಲ್ಲದೇ, ದೃಷ್ಟಿ ಬೀಳದಿರಲು ಮನೆಯಲ್ಲಿ ನವಿಲು ಗರಿ ಇರಿಸಲಾಗತ್ತೆ. ಮತ್ತು ನವಿಲು ಗರಿಯನ್ನ ಮೈಲಿಗೆ ಮಾಡದೇ ಮನೆಯಲ್ಲಿರಿಸದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶವಾಗುವುದಿಲ್ಲ. ಬದಲಾಗಿ ಮನೆಯಲ್ಲಿ ಧನಾತ್ಮಕ ಶಕ್ತಿಯ ಬಲ ಹೆಚ್ಚಿ, ನೆಮ್ಮದಿ ಇರುತ್ತದೆ.

- Advertisement -

Latest Posts

Don't Miss