ಬಾಳೆಹಣ್ಣನ್ನು ಸೇವಿಸುವುದರಿಂದ ಹಲವು ಆರೋಗ್ಯಕರ ಲಾಭಗಳಿದೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ಬಾಳೆಕಾಯಿ ತಿಂದರೂ ಕೂಡ, ಎಷ್ಟೇ ಆರೋಗ್ಯಕರ ಪ್ರಯೋಜನವಿದೆ ಅಂತಾ ಹಲವರಿಗೆ ಗೊತ್ತಿಲ್ಲ. ಬಾಳೆಕಾಯಿಯನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ, ಅದು ಔಷಧಿಯಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಬಾಳೆಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಈ ದೋಸೆಯನ್ನು 15 ನಿಮಿಷದಲ್ಲಿ ತಯಾರಿಸಬಹುದು..
ಬಾಳೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ನೀವು ಬಾಳೆಕಾಯಿ ಚಿಪ್ಸ್, ಬಜ್ಜಿ ಎಲ್ಲಾ ಮಾಡಿಕೊಂಡು ತಿಂದ್ರೆ, ಅದು ನಿಮ್ಮ ಆರೋಗ್ಯವನ್ನ ಅಭಿವೃದ್ಧಿ ಮಾಡಲ್ಲ. ಬದಲಾಗಿ ಹೆಚ್ಚು ಉಪ್ಪು ಖಾರ ಹಾಕದೇ, ಸಾರು, ಸಾಂಬಾರ್, ಪಲ್ಯ ಮಾಡಿ ಸೇವಿಸಿ. ಹೃದಯ ಸಂಬಂಧಿ ಖಾಯಿಲೆ ಇದ್ದವರು, ಬಾಳೆಕಾಯಿ ಸೇವಿಸಬೇಕು.
ಇನ್ನು ಹೊಟ್ಟೆ ನೋವಿನ ಸಮಸ್ಯೆ, ಮಲಬದ್ಧತೆ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ, ಹೀಗೆ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದಲ್ಲಿ, ಬಾಳೆಕಾಯಿ ಸೇವನೆ ಮಾಡಬೇಕು. ಇದು ಆರೋಗ್ಯಕ್ಕೆ ಒಳ್ಳೆಯದಾಗಿದ್ದರು, ಅಗತ್ಯಕ್ಕಿಂತ ಹೆಚ್ಚು ತಿಂದಲ್ಲಿ, ಇದರಿಂದ ಆರೋಗ್ಯಕ್ಕೆ ಲಾಭವಾಗುವ ಬದಲು, ನಷ್ಟವಾಗುತ್ತದೆ. ಹಾಗಾಗಿ ಮಿತವಾಗಿ ತಿನ್ನಿ.
ದೋಸೆಗೆ ಈ ಚಟ್ನಿಯನ್ನ ಒಮ್ಮೆ ತಯಾರಿಸಿ ನೋಡಿ..
ನಿಮ್ಮ ತ್ವಚೆಯ ಮೇಲೆ ರಿಂಕಲ್ಸ್ ಇದ್ದಲ್ಲಿ, ನಿಮ್ಮ ತ್ವಚೆಯ ಮೇಲೆ ಗುಳ್ಳೆಗಳಾಗುತ್ತಿದ್ದಲ್ಲಿ, ನೀವು ಬಾಳೆಕಾಯಿ ಪದಾರ್ಥವನ್ನು ಸೇವನೆ ಮಾಡಿದ್ದಲ್ಲಿ, ನಿಮ್ಮ ತ್ವಚೆಯ ಸಮಸ್ಯೆ ದೂರವಾಗುತ್ತದೆ. ಇನ್ನು ನಿಮಗೆ ಬಾಳೆಕಾಯಿ ತಿಂದರೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.




