ನಾವುನೀವು ಪ್ರತಿದಿನ ಬಳಸೋ ಅಕ್ಕಿಯಲ್ಲೇ ಸೌಂದರ್ಯವನ್ನ ಇಮ್ಮಡಿಗೊಳಿಸುವ ಶಕ್ತಿ ಇದೆ ಅಂದ್ರೆ ನೀವು ನಂಬಲೇಬೇಕು. ಅನ್ನ ಮಾಡುವಾಗ, ನೀವು ಅಕ್ಕಿಯನ್ನ ತೊಳೆದ ನೀರಿನಿಂದಲೇ ನಿಮ್ಮ ತ್ವಚೆ ಮತ್ತು ನಿಮ್ಮ ಕೂದಲನ್ನು ಆರೋಗ್ಯಕರವಾಗಿಡಬಹುದು. ಇಂದು ನಾವು ಅಕ್ಕಿ ನೀರಿನಿಂದಾಗುವ ಪ್ರಯೋಜನವೇನು ಅಂತಾ ಹೇಳಲಿದ್ದೇವೆ.
ಮೊದಲನೇಯ ಟಿಪ್ಸ್, ನಾಲ್ಕು ಸ್ಪೂನ್ ಅಕ್ಕಿಯನ್ನ ಒಂದು ಚಿಕ್ಕ ಕಪ್‌ನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಅದೇ ನೀರನ್ನ ಸ್ಪ್ರೇ ಬಾಟಲಿಗೆ ಹಾಕಿ, ನಿಮ್ಮ ಮುಖಕ್ಕೆ ಮತ್ತು ಕೂದಲಿಗೆ ಸಿಂಪಡಿಸಿಕೊಳ್ಳಿ. ಅದು ಒಣಗಿದ ಬಳಿಕ ನೀವು ತಲೆಸ್ನಾನ ಮಾಡಬಹುದು. ಇದರಿಂದ ನಿಮ್ಮ ಕೂದಲು ಉದ್ದ ಬರುತ್ತದೆ. ಇದರೊಂದಿಗೆ ನೀವು ಈರುಳ್ಳಿ ರಸ ಬೆರೆಸಿ, ನಿಮ್ಮ ತಲೆ ಬುಡಕ್ಕೆ ಹಚ್ಚಿ ಮಸಾಜ್ ಮಾಡಬಹುದು. ಆದ್ರೆ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಬೇಡಿ. ಇದರಿಂದ ನಿಮ್ಮ ತಲೆಬುಡ ಗಟ್ಟಿಯಾಗುತ್ತದೆ.
ಪೆರಿ ಪೆರಿ ಪನೀರ್ ಸ್ಯಾಂಡವಿಚ್ ಪಕೋಡಾ ರೆಸಿಪಿ…
ಎರಡನೇಯ ಟಿಪ್ಸ್, ಇನ್ನು ಫರ್ಮೆಂಟೆಡ್ ರೈಸ್ ವಾಟರ್ ಜೊತೆ ಒಂದು ಸ್ಪೂನ್ ಕಾರ್ನ್ ಫ್ಲೋರ್ ಸೇರಿಸಿ. ಇದಕ್ಕೆ 2 ಡ್ರಾಪ್ಸ್ ಟೀ ಟ್ರೀ ಎಣ್ಣೆಯನ್ನ ಮಿಕ್ಸ್ ಮಾಡಿ. ಈ ಫೇಸ್‌ಪ್ಯಾಕನ್ನ ಹಾಕಿ 15 ನಿಮಿಷ ಬಿಟ್ಟು, ಕೊಂಚ ನೀರು ಹಚ್ಚಿ ಮಸಾಜ್ ಮಾಡುತ್ತ, ನಂತರ ಮುಖ ತೊಳೆಯಿರಿ. ಇದರಿಂದ ನಿಮ್ಮ ಸ್ಕಿನ್ ಸಾಫ್ಟ್ ಆಗುತ್ತದೆ.
ಮೂರನೇಯ ಟಿಪ್ಸ್, ಫರ್ಮೆಂಟೆಡ್ ರೈಸ್ ವಾಟರ್ ಜೊತೆ ರೋಸ್ ವಾಟರ್ ಬೆರೆಸಿ ನೀವು ಪದೇ ಪದೇ ಮುಖಕ್ಕೆ ಸ್ಪ್ರೇ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಮುಖ ಕಾಂತಿಯುತವಾಗುತ್ತದೆ. ಮುಖದ ಮೇಲಿರುವ ಕಲೆ ಹೋಗುತ್ತದೆ. ಸದಾ ನಿಮ್ಮ ಮುಖ ಫ್ರೆಶ್ ಆಗಿ ಕಾಣುತ್ತದೆ.
ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕು ಅಂದ್ರೆ ಈ ತರಕಾರಿ ಬಳಸಿ..
ನಾಲ್ಕನೇಯ ಟಿಪ್ಸ್, ಒಂದು ಸ್ಪೂನ್ ಓಟ್ಸ್ ಪುಡಿ ಮತ್ತು ಕೊಂಚ ಗ್ಲಿಸ್‌ರಿನ್ ಮತ್ತು 4 ಸ್ಪೂನ್ ರೈಸ್ ವಾಟರ್ ಸೇರಿಸಿ ಫೇಸ್ ಪ್ಯಾಕ್ ರೆಡಿ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡಿದ್ದಲ್ಲಿ ನಿಮ್ಮ ತ್ವಚೆ ಕ್ಲೀನ್ ಆಗಿರುತ್ತದೆ.