Monday, December 23, 2024

Latest Posts

ನೆನೆಸಿದ ಬಾದಾಮ್ಗಿಂತಲೂ ಆರೋಗ್ಯಕಾರಿಯಾಗಿದೆ ನೆನೆಸಿಟ್ಟ ಕಡಲೆ..

- Advertisement -

ನೆನೆಸಿದ ಬಾದಾಮ್ ತಿಂದ್ರೆ ನೆನಪಿನ ಶಕ್ತಿ ಹೆಚ್ಚತ್ತೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ನೆನೆಸಿದ ಬಾದಾಮ್ ಬದಲು ನೀವು ಕಡಿಮೆ ರೇಟಿಗೆ ಸಿಗುವ ಕಪ್ಪುಕಡಲೆಯನ್ನು ಕೂಡ ನೆನೆಸಿ ತಿನ್ನಬಹುದು. ಬಾದಾಮ್ ಸೇವನೆಯಿಂದ ಸಿಗುವ ಆರೋಗ್ಯ ಲಾಭಕ್ಕಿಂತಲೂ ಹೆಚ್ಚಿನ ಆರೋಗ್ಯ ಲಾಭವನ್ನು ನೀವು ಕಪ್ಪು ಕಡಲೆ ಸೇವನೆಯಿಂದ ಪಡೆಯಬಹುದು. ಹಾಗಾದ್ರೆ ನೆನೆಸಿದ ಕಪ್ಪು ಕಡಲೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1

ನೆನೆಸಿದ ಕಡಲೆಯಲ್ಲಿ ನೆನೆಸಿದ ಬಾದಾಮ್‌ಗಿಂತಲೂ ಹೆಚ್ಚು ಕಾರ್ಬೋಹೈಡ್ರೇಟ್‌ ಇರುತ್ತದೆ. ಮತ್ತು ಕಡಿಮೆ ಕ್ಯಾಲೋರಿ ಇರುತ್ತದೆ. ಅಲ್ಲದೇ ನೆನೆಸಿದ ಕಡಲೆಯಲ್ಲಿ ಹೆಚ್ಚು ವಿಟಾಮಿನ್ ಎ, ವಿಟಾಮಿನ್ B6, B9 ಮತ್ತು ವಿಟಾಮಿನ್ ಸಿ ಇರುತ್ತದೆ. ಹಾಗಾಗಿ ಪ್ರತಿದಿನ ಕೊಂಚ ನೆನೆಸಿದ ಕಡಲೆ ತಿಂದರೆ, ನಿಮಗೆ ಹಲವಾರು ಆರೋಗ್ಯಕರ ಲಾಭವಾಗುತ್ತದೆ. ಉತ್ತಮ ನಿದ್ದೆ ಬರಲು ಇದು ಸಹಾಯಕವಾಗಿದೆ.

ಹೃದಯ ಆರೋಗ್ಯ ಸರಿಯಾಗಿ ಇರಬೇಕು ಅಂದ್ರೆ ನೀವು ಎಣ್ಣೆ ಪದಾರ್ಥ, ಜಂಕ್ ಫುಡ್, ಬೇಕರಿ ತಿಂಡಿ ಹೆಚ್ಚು ತಿನ್ನುವುದನ್ನು ಬಡಿ. ಮತ್ತು ಅದರೊಂದಿಗೆ ನೆನೆಸಿದ ಕಡಲೆ ಸೇವಿಸಿ. ಇನ್ನು ಎನಿಮಿಯಾದಿಂದಲೂ ಕಡಲೆ ನಿಮ್ಮನ್ನು ಬಚಾಯಿಸುತ್ತದೆ. ಪ್ರತಿದಿನ ಬೆಳಿಗ್ಗೆ ನೆನೆಸಿದ ಕಡಲೆ ತಿಂದ್ರೆ, ನಿಮ್ಮ ದೇಹದಲ್ಲಿ ಶುದ್ಧ ರಕ್ತ ಹೆಚ್ಚಾಗುತ್ತದೆ.

ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 2

ಇಷ್ಟೇ ಅಲ್ಲದೇ ನೆನೆಸಿದ ಕಪ್ಪು ಕಡಲೆ ಸೇವನೆಯಿಂದ ದೇಹದಲ್ಲಿ ಕಬ್ಬಿಣಾಂಶ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಮೂಳೆ ಗಟ್ಟಿಯಾಗುತ್ತದೆ. ಕಿಡ್ನಿ ಕ್ಲೀನ್ ಮಾಡುವಲ್ಲಿಯೂ ಇದು ಸಹಕಾರಿಯಾಗಿದೆ. ಸ್ಟ್ರೆಸ್ ಕಡಿಮೆ ಮಾಡುತ್ತದೆ. ಡಯಾಬಿಟೀಸ್ ಕಡಿಮೆ ಮಾಡುತ್ತದೆ.

- Advertisement -

Latest Posts

Don't Miss