Friday, June 20, 2025

Latest Posts

ಮೊಳಕೆ ಬರಿಸಿದ ಹೆಸರು ಕಾಳನ್ನು ತಿಂದರೆ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ..

- Advertisement -

ನೆನೆಸಿಟ್ಟ ಹೆಸರುಕಾಳು ತಿಂದರೆ ಆರೋಗ್ಯಕ್ಕೆ ತುಂಬಾ ಉತ್ತಮ. ಅಲ್ಲದೇ, ಹೆಸರು ಕಾಳಿನ ಪಾಯಸ, ಕೊಸೋಂಬರಿ, ಪಲ್ಯ, ಸಾಂಬಾರ್ ಕೂಡ ರುಚಿಕರದ ಜೊತೆಗೆ, ಆರೋಗ್ಯಕರ. ಹಾಗಾಗಿ ನಾವಿಂದು ಹೆಸರು ಕಾಳು ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ನಿಮ್ಮ ದೇಹದಲ್ಲಿ ಶಕ್ತಿ ತುಂಬಿರಬೇಕು. ನೀವು ಗಟ್ಟಿಮುಟ್ಟಾಗಿರಬೇಕು. ಚೈತನ್ಯದಾಯಕರಾಗಿರಬೇಕು ಅನ್ನೋದು ನಿಮ್ಮ ಆಸೆಯಾಗಿದ್ದಲ್ಲಿ, ನೆನೆಸಿ, ಮೊಳಕೆ ಬರಸಿದ ಹೆಸರುಕಾಳನ್ನು ಸೇವಿಸಬೇಕು. ಮೊಳಕೆ ಬರಿಸಿದ ಹೆಸರು ಕಾಳನ್ನು ಬೆಳಿಗ್ಗೆ ಹಾಲಿನ ಜೊತೆ ಸೇವಿಸಿದ್ದಲ್ಲಿ, ನಿಮಗೆ ಪ್ರೋಟಿನ್ , ವಿಟಾಮಿನ್, ಮಿನರಲ್ಸ್ ಎಲ್ಲವೂ ಸಿಗುತ್ತದೆ.

ಶಿವನ ದೇವಸ್ಥಾನಕ್ಕೆ ಹೋದಾಗ ಪೂರ್ತಿಯಾಗಿ ಪ್ರದಕ್ಷಿಣೆ ಯಾಕೆ ಹಾಕಬಾರದು..?

ಆದ್ರೆ ನೀವು ಹಾಲಿನೊಂದಿಗೆ ಮೊಳಕೆ ಬರಿಸಿದ ಹೆಸರು ಕಾಳನ್ನ ಸೇವಿಸಿದ್ದಲ್ಲಿ, ನಿಮಗದೂ ಸರಿಯಾಗದಿದ್ದಲ್ಲಿ,. ನೀವು ಬರೀ ಮೊಳಕೆ ಕಾಳನ್ನ ಮಾತ್ರ ಸೇವಿಸಬಹುದು. ಮೊಳಕೆ ಬರಿಸಿದ ಹೆಸರುಕಾಳನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಶಕ್ತಿ ಬರುತ್ತದೆ. ನೀವು ಜಿಮ್‌ಗೆ ಹೋಗುತ್ತಿದ್ದು, ಬಾಡಿ ಬೆಳೆಸಬೇಕೆಂದಲ್ಲಿ, ನೀವು ಮೊಳಕೆ ಬರಿಸಿದ ಹೆಸರುಕಾಳನ್ನು ಸೇವಿಸಬೇಕು.

ಬೇಗ ಗರ್ಭಧಾರಣೆ ಮಾಡಬೇಕೆನ್ನುವವರು ಈ ಆಹಾರವನ್ನು ತಿನ್ನಿ..

ಇದರಿಂದ ತ್ವಚೆಯ ಆರೋಗ್ಯ ಉತ್ತಮವಾಗಿರುತ್ತದೆ. ದಟ್ಟವಾದ ಕೂದಲು ಬೆಳೆಯಲು ಮೊಳಕೆ ಬರಿಸಿದ ಹೆಸರು ಕಾಳು ಸಹಾಯಕವಾಗಿದೆ. ಅಲ್ಲದೇ, ನೀವು ಎಷ್ಟು ತಿಂದರೂ ದಪ್ಪವಾಗುವುದಿಲ್ಲ ಎಂದಾದಲ್ಲಿ, ಮೊಳಕೆ ಬರಿಸಿದ ಹೆಸರು ಕಾಳನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇವೆಲ್ಲ ಸೇರಿ ಇನ್ನೂ ಹಲವು ಆರೋಗ್ಯ ಲಾಭವನ್ನು ಮೊಳಕೆ ಬರಿಸಿದ ಹೆಸರು ಕಾಳು ಕೊಡುತ್ತದೆ.

- Advertisement -

Latest Posts

Don't Miss