ನಮಗೆ ಪ್ರಕೃತಿಯಿಂದ ಸಿಕ್ಕ ಉತ್ತಮ ಕೊಡುಗೆಗಳಲ್ಲಿ ಸಿಹಿ ಗೆಣಸು ಕೂಡ ಒಂದು. ಇದು ತಿನ್ನಲಷ್ಟೇ ರುಚಿಕರವಲ್ಲ ಬದಲಾಗಿ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಇದನ್ನ ಬೇಯಿಸಿ ತಿಂದರೆ, ಕೆಲವರು ಸುಟ್ಟು ತಿನ್ನುತ್ತಾರೆ. ಸಿಹಿ ಗೆಣಸನ್ನ ಬೇಯಿಸಿ ತಿನ್ನುವುದಕ್ಕಿಂತ ಸುಟ್ಟು ತಿನ್ನುವುದು ಉತ್ತಮ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಮೊಸರಿನೊಂದಿಗೆ ಈ 4 ಆಹಾರಗಳನ್ನು ಅಪ್ಪಿತಪ್ಪಿಯು ಸೇವಿಸಬೇಡಿ…!
ಚಳಿಗಾಲ ಶುರುವಾಗುತ್ತಿದ್ದಂತೆ, ಮಾರುಕಟ್ಟೆಯಲ್ಲಿ ಸಿಹಿ ಗೆಣಸಿನ ಮಾರಾಟ ಆರಂಭವಾಗುತ್ತದೆ. ಚಳಿಗಾಲದಲ್ಲಿ ಸಿಹಿಗೆಣಸು ತಿಂದ್ರೆ, ಅದು ಆರೋಗ್ಯಕ್ಕೆ ಉತ್ತಮ ಅಂತಾ ಹೇಳಲಾಗತ್ತೆ. ಯಾಕಂದ್ರೆ ಇದು ಚಳಿಗಾಲದ ಸೀಸನಲ್ ಆಹಾರ. ಸೀಸನಲ್ ಹಣ್ಣುಗಳು ಆರೋಗ್ಯಕ್ಕೆಷ್ಟು ಮುಖ್ಯವೋ, ಅದೇ ರೀತಿ ಇಂಥ ಆಹಾರಗಳು ಕೂಡ ಆರೋಗ್ಯಕ್ಕೆ ಅತ್ಯುತ್ತಮ.
ಸಿಹಿಗೆಣಸಿನಲ್ಲಿ ವಿಟಾಮಿನ್ ಎ ಮತ್ತು ವಿಟಾಮಿನ್ ಸಿ ಹೆಚ್ಚಾಗಿರುತ್ತದೆ. ಹಾಗಾಗಿ ಇದು ಪೌಷ್ಠಿಕ ಆಹಾರ ಅಂತಾ ಕರೆಯಲ್ಪಡುತ್ತದೆ. ಡಯಾಬಿಟೀಸ್ ಇದ್ದವರು ಕೂಡ ಇದನ್ನು ಸೇವಿಸಬಹುದು. ಆದ್ರೆ ಇದನ್ನು ಬೇಯಿಸಿ ತಿನ್ನುವ ಬದಲು, ಸುಟ್ಟು ತಿನ್ನಬೇಕು. ಆಗಲೇ ಇದು ಆರೋಗ್ಯಕ್ಕೆ ಇನ್ನಷ್ಟು ಲಾಭವನ್ನುಂಟು ಮಾಡುತ್ತದೆ. ಆದ್ರೆ ಕೆಲ ಶುಗರ್ ಪೇಶಂಟ್ ಗಳಿಗೆ ಇದು ಉತ್ತಮವಲ್ಲ. ಹಾಗಾಗಿ ನೀವು ಶುಗರ್ ಇದ್ದವರಾಗಿದ್ದಲ್ಲಿ, ನಿಮ್ಮ ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ನಂತರ ಸಿಹಿ ಗೆಣಸನ್ನು ಸೇವಿಸುವುದು ಉತ್ತಮ.
ಲವಂಗ ಸೇವನೆಯಿಂದ ಆಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..
ಸಿಹಿ ಗೆಣಸಿನ ಸೇವನೆಯಿಂದ ನಿಮ್ಮ ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ. ಹೃದಯ ಆರೋಗ್ಯಕ್ಕೆ ಸಿಹಿ ಗೆಣಸಿನ ಸೇವನೆ ಒಳ್ಳೆಯದು. ಹೊಟ್ಟೆ ನೋವಿನ ಸಮಸ್ಯೆ ಇದ್ದವರು, ಮಲಬದ್ಧತೆ ಸಮಸ್ಯೆ ಇದ್ದವರು ಕೂಡ ಗೆಣಸಿನ ಸೇವನೆ ಮಾಡುವುದರಿಂದ, ಆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಆದ್ರೆ ಕೆಲವರಿಗೆ ಸಿಹಿಗೆಣಸು ತಿಂದ್ರೆ ಅಲರ್ಜಿಯಾಗುತ್ತದೆ. ಸೊಂಟ ನೋವು, ಕಾಲು ನೋವು, ಇತ್ಯಾದಿ ಉಂಟಾಗುತ್ತದೆ. ಅಂಥವರು ವೈದ್ಯರ ಬಳಿ ವಿಚಾರಿಸಿ, ನಂತರ ಗೆಣಸನ್ನು ಸೇವಿಸುವುದು ಉತ್ತಮ.