ಸಂಜೆಯಾದ ಮೇಲೆ ಏನಾದ್ರೂ ಟೇಸ್ಟಿ ಸ್ನ್ಯಾಕ್ಸ್ ತಿನ್ನಬೇಕು ಅಂತಾ ಅನ್ನಿಸೋದು ಸಾಮಾನ್ಯ. ಹಾಗಂತ ಎಷ್ಟು ದಿನಾ ಹೊರಗೆ ಸಿಗುವ ಜಂಕ್ ಫುಡ್ ತಿನ್ನುತ್ತೀರಿ..? ಹಾಗಾಗಿ ನಾವಿಂದು ಮನೆಯಲ್ಲೇ ತಯಾರಿಸಬಹುದಾದ ಹೆಲ್ದಿ, ಟೇಸ್ಟಿ ಸ್ನ್ಯಾಕ್ಸ್ ಆಗಿರುವ ಬೀಟ್‌ರೂಟ್ ಟಿಕ್ಕಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಬೀಟ್‌ರೂಟ್ ಟಿಕ್ಕಿ ಮಾಡಲು ಬೇಕಾಗುವ ಪದಾರ್ಥ ಮತ್ತು ಮಾಡುವ ವಿಧಾನವನ್ನ ತಿಳಿಯೋಣ ಬನ್ನಿ..
ನಿದ್ರೆಯ ಮಧ್ಯದಲ್ಲಿ ನೀರು ಕುಡಿಯುವ ಅಭ್ಯಾಸವಿದೆಯೇ? ಈ ವಿಷಯಗಳನ್ನು ತಿಳಿದರೆ ಶಾಕ್ ಆಗುತ್ತೀರಿ..!
ಬೇಕಾಗುವ ಪದಾರ್ಥ: ಒಂದು ಬೌಲ್ ಬೀಟ್‌ರೂಟ್ ತುರಿ, ಎರಡು ಆಲೂಗಡ್ಡೆ, ಅರ್ಧ ಕಪ್ ಬಟಾಣಿ, ನಾಲ್ಕು ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಜೀರಿಗೆ, ಕೊಂಚ ಹೆಸರು ಬೇಳೆ, ಕಡಲೆ ಬೇಳೆ, ಕರಿಬೇವಿನ ಸೊಪ್ಪು, ಕೊತ್ತೊಂಬರಿ ಸೊಪ್ಪು, ಕೊಂಚ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಅಗತ್ಯಕ್ಕೆ ತಕ್ಕಷ್ಟು ಉಪ್ಪು. ಕೊಂಚ ಬ್ರೆಡ್ ಕ್ರಂಬ್ಸ್, ರವೆ.
ಮಾಡುವ ವಿಧಾನ: ಮೊದಲು ಆಲೂಗಡ್ಡೆ ಮತ್ತು ಬಟಾಣಿಯನ್ನು ಬೇಯಿಸಿ. ನಂತರ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಒಂದು ಸ್ಪೂನ್ ಎಣ್ಣೆ ಬಿಸಿ ಮಾಡಿ, ಜೀರಿಗೆ, ಹೆಸರು ಬೇಳೆ, ಕಡ್ಲೆ ಬೇಳೆ, ಕರಿಬೇವಿನ ಸೊಪ್ಪು, ಹಾಕಿ ಹುರಿಯಿರಿ. ನಂತರ ಉಪ್ಪು, ಅರಿಶಿನ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ಬೀಟ್‌ರೂಟ್ ತುರಿ, ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ ಮತ್ತು ಬಟಾಣಿ ಸೇರಿಸಿ ಮಿಕ್ಸ್ ಮಾಡಿ. ಈಗ ಟಿಕ್ಕಿ ಮಿಶ್ರಣ ರೆಡಿ.
ಸೋಂಪು ನೀರು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ..ಸೌಂದರ್ಯ ಹೆಚ್ಚುತ್ತದೆ..!
ಒಂದು ಪ್ಲೇಟ್‌ನಲ್ಲಿ ಬ್ರೆಡ್ ಕ್ರಂಬ್ಸ್ ಅಥವಾ ರವೆ ಹಾಕಿ, ಮಾಡಿಟ್ಟುಕೊಂಡ ಬೀಟ್ರೂಟ್ ಪಲ್ಯವನ್ನು ಉಂಡೆಯನ್ನಾಗಿ ಮಾಡಿಕೊಂಡು, ಅದನ್ನು ಟಿಕ್ಕಿಯ ರೀತಿ ಶೇಪ್ ಮಾಡಿ, ರವೆಯಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿಯಿರಿ ಅಥವಾ, ಕೊಂಚ ಎಣ್ಣೆ ಹಾಕಿ, ತವ್ವಾ ಫ್ರೈ ಮಾಡಿ. ತವ್ವಾ ಫ್ರೈ ಮಾಡಿದ್ರೆ, ಆರೋಗ್ಯಕರ ಬೀಟ್ರೂಟ್ ಟಿಕ್ಕಿ ರೆಡಿ.