Health Tips: ಡಾ. ಅರ್ಜುನ್ ಅವರು ಪುರುಷರ ಸಮಸ್ಯೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಪುರುಷರ ಶಿಶ್ನ ಸಮಸ್ಯೆಗಳ ಬಗ್ಗೆ ಇಂದು ವಿವರಿಸಲಿದ್ದಾರೆ.
ಪುರುಷರ ಗುಪ್ತಾಂಗದಲ್ಲಿ ಎಡ ಮತ್ತು ಬಲ ಭಾಗದಲ್ಲಿ ಬೀಜಗಳು ಇರಲೇಬೇಕು. ಮತ್ತು ಗಂಡು ಮಗು ಹುಟ್ಟಿದಾಗಿನಿಂದ ಅದರ ಬೆಳವಣಿಗೆ ಆಗುವಾಗ ತಂದೆ ತಾಯಿ ಈ ವಿಷಯವನ್ನು ಗಮನಿಸಬೇಕು. ಇನ್ನು ಯಾಕೆ ಗುಪ್ತಾಂಗದಲ್ಲಿ ಈ ಭಾಗವಿರಬೇಕು ಅಂದ್ರೆ, ದೇಹದಲ್ಲಿ ಉತ್ಪತ್ತಿಯಾಗುವ ವೀರ್ಯಾಣು ಹಾಳಾಗದೇ, ಅದು ಸರಿಯಾಗಿ ಇರಬೇಕು ಅಂದ್ರೆ, ಈ ಭಾಗಗಳು ಇರಲೇಬೇಕು.
ಮತ್ತು ಈ ಬೀಜಗಳು ಆರೋಗ್ಯವಾಗಿರಬೇಕು. ಇಲ್ಲವಾದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಇನ್ನು ಪುಟ್ಟ ಮಗುವಿರುವಾಗ ಈ ಅಂಗಗಳು ಕಾಣದಿದ್ದಲ್ಲಿ, ವೈದ್ಯರ ಹತ್ತಿರ ಹೋಗಿ ಪರೀಕ್ಷಿಸಿಕೊಳ್ಳಬೇಕು. ವೈದ್ಯರು ಸ್ಕ್ಯಾನ್ ಮಾಡಿ, ಆ ಸಮಸ್ಯೆಯನ್ನು ಪರಿಹರಿಸುತ್ತಾರೆ. ಆದರೆ ನೀವು ಈ ಬಗ್ಗೆ ನಿರ್ಲಕ್ಷ್ಯ. ವಹಿಸಿದರೆ, ಅದು ನಿಮ್ಮ ಮಗುವಿನ ಭವಿಷ್ಯ ಹಾಳು ಮಾಡುತ್ತದೆ. ಇದರಿಂದ ಸಂತಾನ ಹೀನ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..