Friday, November 22, 2024

Latest Posts

ಪಟಾಕಿಯಿಂದ ಈ ಸಮಸ್ಯೆ ಬರುತ್ತದೆ ಎಚ್ಚರ..

- Advertisement -

Health Tips: ಪಟಾಕಿ ಬಳಕೆಯಿಂದ ಹಲವು ಆರೋಗ್ಯ ಸಮಸ್ಯೆ ಬರುತ್ತದೆ ಎಂದು ನಿಮಗೂ ಗೊತ್ತು. ಆದರೂ ಕೂಡ ದೀಪಾವಳಿ ಸಮಯದಲ್ಲಿ, ಹಲವು ಖುಷಿಗಾಗಿ ಪಟಾಕಿ ಹೊಡೆಯುತ್ತಾರೆ. ಪಟಾಕಿ ಬಳಸುವುದು ತಪ್ಪಲ್ಲ. ಆದರೆ ಅದುಮ ಮಿತವಾಗಿರಬೇಕು. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ಪಟಾಕಿ ಬಳಕೆ, ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ಅವರು ಮಾಹಿತಿ ನೀಡಿದ್ದಾರೆ ನೋಡಿ..

ಪಟಾಕಿಯಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ ಉಂಟಾಗುತ್ತದೆ. ಗರ್ಭಿಣಿಯರು, ಚಿಕ್ಕಮಕ್ಕಳು, ವಯಸ್ಸಾದವರು, ಸಾಕು ಪ್ರಾಣಿಗಳಿಗೆ ಪಟಾಕಿಯಿಂದ ಹೆಚ್ಚಿನ ತೊಂದರೆಯಾಗುತ್ತದೆ. ಅದರಲ್ಲೂ ನಾಯಿಗಳಿಗೆ, ಪಟಾಕಿಯ ಸದ್ದು ಕೇಳಿದರೆ, ಹೆದರಿಕೆಯಾಗುತ್ತದೆ. ಅವು ಪಟಾಕಿಯ ಸದ್ದು ಕೇಳಿ, ಕಿರುಚಾಡಲು ಶುರು ಮಾಡುತ್ತದೆ. ಹಾಗಾಗಿ ಪಟಾಕಿಯ ಬಳಕೆ ಮಿತವಾಗಿ ಇರಬೇಕು. ಅದರಿಂದ ಇನ್ನೊಬ್ಬರಿಗೆ ಹಿಂಸೆಯಾಗಬಾರದು ಅಂತಾರೆ ವೈದ್ಯರು.

ಇಂದಿನ ಕಾಲದಲ್ಲಿ ಮೆಟ್ರೋಪಾಲಿಟಿನ್ ಸಿಟಿಗಳಲ್ಲಿ ವಾಯುಮಾಲಿನ್ಯ ಯಾವ ಮಟ್ಟಿಗೆ ಇದೆ ಅಂದ್ರೆ, ಉಸಿರಾಡಲು ಕೂಡ ಕಷ್ಟವಾಗುತ್ತದೆ. ಈ ವಾಯುಮಾಲೀನ್ಯದಿಂದ, ಆರೋಗ್ಯವಾಗಿ ಇದ್ದವರಿಗೂ ಕೂಡ, ಅಸ್ತಮಾ, ಹೃದ್ರೋಗದಂಥ ಕಾಯಿಲೆ ಬರುತ್ತಿದೆ. ಹಾಗಾಗಿ ಈಗಾಗಲೇ ಇಂಥ ಆರೋಗ್ಯ ಸಮಸ್ಯೆ ಹೊಂದಿದವರು, ಮನೆಯಲ್ಲಿ ಮಾಸ್ಕ್ ಬಳಸಿ. ಪಟಾಕಿ ಬಳಕೆಯಿಂದ ದೂರವಿರಿ ಎನ್ನುತ್ತಾರೆ ವೈದ್ಯರು. ವೈದ್ಯರು ಈ ಬಗ್ಗೆ ಇನ್ನೂ ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

ಮಗು ಹುಟ್ಟಿದ 30 ದಿನಗಳಲ್ಲಿ ಕಣ್ಣಿನ ಟೆಸ್ಟ್ ಮಾಡಿಸಬೇಕು.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣವೇನು..?

ಒಂದೇ ಕಡೆಯಲ್ಲಿ ಕುಳಿತು ಕೆಲಸ ಮಾಡ್ತೀರಾ..? ಎಚ್ಚರ..!

- Advertisement -

Latest Posts

Don't Miss