Tuesday, December 24, 2024

Latest Posts

Bihar : ಸರ್ಕಾರಿ ಶಾಲೆಯಲ್ಲಿ ಹುಡುಗಿಯರಿಗೆ ನೀಡುವ ಸ್ಯಾನಿಟರಿ ಪ್ಯಾಡ್ ಹುಡುಗರಿಗೂ ವಿತರಣೆ..!

- Advertisement -

ಹುಡುಗಿಯರು ಋತುಚಕ್ರ ಸಮಯದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್(Sanitary napkin) ಗಳನ್ನು ಹುಡುಗರಿಗೂ ವಿತರಣೆ ಮಾಡಿರುವ ವಿಚಿತ್ರವಾದ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. 2015ರ ಫೆಬ್ರವರಿಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್(Chief Minister Nitish Kumar) ಸರ್ಕಾರಿ ಶಾಲೆಗಳಲ್ಲಿನ ಹದಿಹರೆಯದ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕೀನ್‌ ವಿತರಿಸುವ ಯೋಜನೆ ಮೂಲಕ ಆರೋಗ್ಯ ಮತ್ತು ನೈರ್ಮಲ್ಯ ಸುಧಾರಿಸುವ ಪ್ರಯತ್ನವನ್ನು ಮಾಡಿದ್ದರು. ಈಗ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು ತನಿಖೆಯನ್ನು ನಡೆಸಲಾಗುತ್ತಿದೆ. ಅಕ್ರಮ ವ್ಯವಹಾರ ಸರನ್ ಜಿಲ್ಲೆಯ ಮಾಂಝಿ ಬ್ಲಾಕ್ ನಲ್ಲಿರುವ ಹಲ್ಕೋರಿ ಸಾಹ್​ ಪ್ರೌಢಶಾಲೆಯಲ್ಲಿ ನಡೆದಿದೆ. ಶಾಲೆಯ ಹೆಡ್ ಮಾಸ್ಟರ್ ಈ ಅಕ್ರಮಗಳನ್ನು ಪತ್ತೆಹಚ್ಚಿರುವುದಾಗಿ ತಿಳಿದುಬಂದಿದ್ದು, ಹಲವು ವರ್ಷಗಳಿಂದ ಅಕ್ರಮ ವ್ಯವಹಾರ ನಡೆದಿರುವುದು ಈಗ ಗೊತ್ತಾಗಿದೆ. 2016 – 17 ನೇ ಸಾಲಿನಲ್ಲಿ 7 ಹುಡುಗರು ಹುಡುಗರಿಗೆ ಸ್ಯಾನಿಟರಿ ನ್ಯಾಪ್‌ಕೀನ್‌ ಗಾಗಿ ವಾರ್ಷಿಕವಾಗಿ 150ರೂ ಹಣ ವಿತರಿಸಲಾಗಿದೆ ಎಂದು ಹೆಡ್ ಮಾಸ್ಟರ್ ಸಕ್ಷಮ ಪ್ರಾಧಿಕಾರಕ್ಕೆ ವರದಿ ನೀಡಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ. ಅಕ್ರಮದ ತನಿಖೆಗಾಗಿ ಇಬ್ಬರು ಸದಸ್ಯರ ಸಮಿತಿ ರಚಿಸಲಾಗಿದ್ದು, ಸಮಿತಿಯು ನಾಲ್ಕು ದಿನಗಳಲ್ಲಿ ತನ್ನ ವರದಿ ಸಲ್ಲಿಸಲಿದೆ ಎಂದು ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

- Advertisement -

Latest Posts

Don't Miss