ಡಾಲಿ ಚಾಯ್‌ವಾಲಾನ ಬಳಿ ಚಹಾ ಖರೀದಿಸಿ ಕುಡಿದ ಬಿಲ್ ಗೇಟ್ಸ್..

National News: ಮಹಾರಾಷ್ಟ್ರದ ನಾಗಪುರದಲ್ಲಿ ಡಾಲಿ ಚಾಯ್‌ವಾಲಾ ಎಂಬ ಚಹಾ ಮಾರುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಫೇಮಸ್ ಇದ್ದಾರೆ. ನಾಗ್‌ಪುರಕ್ಕೆ ಹೋದವರು, ಇವನು ತಯಾರಿಸಿದ ಚಹಾ ಸೇವಿಸುತ್ತಾರೆ. ಅದೇ ರೀತಿ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್‌ ಗೇಟ್ಸ್ ಈ ಡಾಲಿ ಚಾಯ್‌ವಾಲಾ ಬಳಿ ಬಂದು ಚಹಾ ಸವಿದಿದ್ದಾರೆ. ಅಲ್ಲದೇ ವೀಡಿಯೋ ಮಾಡಿ, ತಮ್ಮ ಇನ್‌ಸ್ಟಾಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

ಭಾರತದ ವೈಶಿಷ್ಟ್ಯತೆ ಬಗ್ಗೆ ಬರೆದುಕೊಂಡಿರುವ ಬಿಲ್‌ಗೇಟ್ಸ್, ನೀವು ಭಾರತದಲ್ಲಿ ಎಲ್ಲ ವಿಷಯದಲ್ಲೂ ವಿಶೇಷತೆ ಕಾಣಬಹುದು, ಚಹಾ ತಯಾರಿಸುವ ವಿಷಯದಲ್ಲೂ ಸಹ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಈ ವೀಡಿಯೋದಲ್ಲಿ ಡಾಲಿ ಬಿಲ್ ಗೇಟ್ಸ್‌ಗೆ ಚಹಾ ತಯಾರಿಸಿ ಕೊಟ್ಟಿದ್ದಾನೆ. ಬಿಲ್‌ಗೇಟ್ಸ್ ಇದನ್ನು ಸೇವಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಅಪ್ಲೋಡ್ ಆಗಲು ಶುರುವಾದಾಗಿಂದ, ಹಲವರ ಲಕ್ ಖುಲಾಯಿಸಿದೆ. ಹಳೆಯ ಹಾಡು ಹೊಸತನದೊಂದಿಗೆ ಹೊರಬಿದ್ದು, ಹಳಬರೆಲ್ಲರನ್ನೂ ಫೇಮಸ್ ಮಾಡುತ್ತಿದೆ. ಅದೇ ರೀತಿ ಸದ್ಯ ಡಾಲಿ ಲಕ್ ಖುಲಾಯಿಸಿದ್ದು, ಬಿಲ್‌ಗೇಟ್ಸ್ ಕೂಡ ಭೇಷ್ ಅನ್ನುವ ರೀತಿ ಡಾಲಿ ಪ್ರಸಿದ್ಧನಾಗಿದ್ದಾನೆ.

ಆರ್ಸಿಬಿ ಆಟಗಾರ್ತಿಗೆ ಪ್ರಪೋಸ್ ಮಾಡಿದ ಅಭಿಮಾನಿ..

ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ಮದುವೆಯಾದ್ರಾ ಕಾರ್ತಿಕ್ ಮತ್ತು ನಮೃತಾ..? ಇಲ್ಲಿದೆ ನೋಡಿ ರಿಯಾಲಿಟಿ..

About The Author