ತುಂಬಾ ಜನ ಬಿಸ್ಕೇಟ್ ತಿಂದು ಬೋರ್ ಬಂದ್ರೆ, ಅದನ್ನು ನಾಯಿಗೆ ಹಾಕ್ತಾರೆ. ಇಲ್ಲಾ ವೇಸ್ಟ್ ಮಾಡ್‌ತಾರೆ. ಆದ್ರೆ ನಿಮ್ಮ ಮನೆಯಲ್ಲಿ ಬಿಸ್ಕೇಟ್ ಉಳಿದ್ರೆ, ಅದನ್ನ ವೇಸ್ಟ್ ಮಾಡದೇ, ಅದಕ್ಕೆ ಮತ್ತಷ್ಟು ಸಾಮಗ್ರಿಗಳನ್ನ ಹಾಕಿ, ನೀವು ಹಲ್ವಾ ತಯಾರಿಸಬಹುದು. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾದ ಸಾಮಗ್ರಿ: ಒಂದು ಪ್ಯಾಕೆಟ್ ಮಾರಿಗೋಲ್ಡ್ ಬಿಸ್ಕೇಟ್, ಅರ್ಧ ಕಪ್ ಹಾಲಿನ ಪುಡಿ, ಅರ್ಧ ಕಪ್ ಹಾಲು, ಕಾಲು ಕಪ್ ತುಪ್ಪ, ಅರ್ಧ ಕಪ್ ಸಕ್ಕರೆ, ಡ್ರೈಫ್ರೂಟ್ಸ್.
ಮಾಡುವ ವಿಧಾನ: ಮೊದಲು ಬಿಸ್ಕೇಟನ್ನು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಹಾಲನ್ನು ಕಾಯಿಸಿ, ಅದರಲ್ಲಿ ಹಾಲಿನ ಪುಡಿ ಹಾಕಿ ಮಿಕ್ಸ್ ಮಾಡಿ. ಈಗ ಸಕ್ಕರೆ ಪಾಕ ಮಾಡಿಕೊಳ್ಳಿ. ಒಂದು ಪ್ಯಾನ್‌ಗೆ ಸಕ್ಕರೆ, ನೀರು ಹಾಕಿ, ಹೆಚ್ಚು ಗಟ್ಟಿಯೂ ಅಲ್ಲದ, ಹೆಚ್ಚು ತೆಳುವಾಗಿಯೂ ಅಲ್ಲದ ಸಕ್ಕರೆ ಪಾಕ ಮಾಡಿಕೊಳ್ಳಿ.
ಈಗ ಒಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ. ಇದಕ್ಕೆ ಬಿಸ್ಕೇಟ್ ಪುಡಿ ಹಾಕಿ, ಚೆನ್ನಾಗಿ ಹುರಿಯಿರಿ. ನಂತರ ಹಾಲಿನ ಪೇಸ್ಟ್, ಸಕ್ಕರೆ ಪಾಕ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದು ಹಲ್ವಾದ ಹದಕ್ಕೆ ಬಂದ ಬಳಿಕ, ಇದಕ್ಕೆ ಡ್ರೈಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿ. ಈಗ ಒಂದು ಪ್ಲೇಟ್‌ಗೆ ತುಪ್ಪ ಸವರಿ, ಅದಕ್ಕೆ ಈ ಹಲ್ವಾ ಮಿಶ್ರಣ ಹಾಕಿ, ಚೌಕಾಕಾರದಲ್ಲಿ ಕತ್ತರಿಸಿದರೆ, ಬಿಸ್ಕೀಟ್ ಹಲ್ವಾ ರೆಡಿ..
Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 1
Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 2
Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 1