- Advertisement -
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಉಂಟಾಗಿರೋ ಅಭದ್ರತೆಗಳನ್ನು ಸರಿಪಡಿಸೋದಕ್ಕೆ ಶತಾಯಗತಾಯ ಪ್ರಯತ್ನ ಪಡುತ್ತಿರೋ ಕಾಂಗ್ರೆಸ್ ನ ಟ್ರಬಲ್ ಶೂಟರ್ ಸಚಿವ ಡಿ.ಕೆ ಶಿವಕುಮಾರ್ ಗೆ ಬಿಜೆಪಿಯ ಬಿ.ವೈ ವಿಜಯೇಂದ್ರ ಟ್ವೀಟ್ಟರ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಹತಾಶೆ, ಅಸೂಯೆ, ಪರಸ್ಪರ ಕೆಸರೆರಚಾಟ, ಅಕ್ರಮ. ಇವು ಮೈತ್ರಿ ಸರ್ಕಾರದ ಕೂಸುಗಳು, ಇದರ ಫಲವೇ ಮೈತ್ರಿ ಪಕ್ಷಗಳ ವಿಕೆಟ್ ಗಳ ಪತನಕ್ಕೆ ಕಾರಣವಾಗಿದೆ. “ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನೂ ವಿಷ ಕುಡಿದವ್ರು ಬದುಕುತ್ತಾರೆಯೇ’..?” ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಹೇಳಿದ ಮಾತು ಅವರಿಗೆ ನೆನಪಿಸ ಬೇಕಾಗಿದೆ- ಅಂತ ಟ್ವೀಟ್ ಮಾಡೋ ಮೂಲಕ ಈ ಹಿಂದೆ ಸಚಿವ ಡಿಕೆಶಿ ಹೇಳಿದ ಮಾತುಗಳನ್ನೇ ನೆನಪಿಸಿ ವಿಜಯೇಂದ್ರ ಟೀಕಿಸಿದ್ದಾರೆ.
ನಿಖಿಲ್ ಗೆ ಹೊಸ ಜವಾಬ್ದಾರಿ..!ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -