Web story: ಜರ್ಮನಿಯಲ್ಲಿ ಹುಟ್ಟಿ, ಅಲ್ಲೇ ಬೆಳೆದು, ಅಲ್ಲೇ ಶಿಕ್ಷಣ ಮುಗಿಸಿದರೂ, ಕನ್ನಡವನ್ನು ಮರೆಯದೇ, ಜೀವನದಲ್ಲಿ ಅಳವಡಿಸಿಕೊಂಡಿರುವ ಸಂಹಿತ ಗಿರೀಶ್ ಜೊಯೀಸ್ ಅವರ ಸಂದರ್ಶನ ಮಾಡಲಾಗಿದೆ. ಕರ್ನಾಟಕ ಟಿವಿ ಜೊತೆ ಮಾತನಾಡಿರುವ ಸಂಹಿತ, ತಮ್ಮ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.
ಶಿವಮೊಗ್ಗದವರಾದ ಸಂಹಿತ ಗಿರೀಶ್ ಹುಟ್ಟಿ ಬೆಳೆದಿದ್ದು ಜರ್ಮನಿಯಲ್ಲಿ. ಇವರ ತಾಯಿ ರಶ್ಮಿ ನಾಗರಾಜ್, ತಮ್ಮ ಮಕ್ಕಳು ಕನ್ನಡ ಕಲಿಯಬೇಕು ಎಂದು, ಮೊದಲು ಮನೆಯಲ್ಲೇ ಕನ್ನಡ ಕಲಿಸಿ, ಬಳಿಕ ಬೇರೆ ಮಕ್ಕಳು ಕನ್ನಡ ಕಲಿಯಲಿ ಎಂದು, ಜರ್ಮನಿಯಲ್ಲಿ ಕನ್ನಡ ಶಾಲೆಯನ್ನೇ ಆರಂಭಿಸಿದರು. ಈ ರೀತಿ ಸಂಹಿತಾಳ ಪೋಷಕರ ಜರ್ಮನಿಯಲ್ಲಿರುವ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದರ ಜೊತೆಗೆ, ಇತರ ಮಕ್ಕಳಿಗೂ ಕನ್ನಡ ಕಲಿಸಿ, ಮಾದರಿಯಾಗಿದ್ದಾರೆ.
ಮುದ್ದುಮುದ್ದಾಗಿ ಕನ್ನಡ ಮಾತನಾಡುವ ಸಂಹಿತ, ನನಗೆ ಆಡು ಭಾಷೆ ಚೆನ್ನಾಗಿ ಬರುತ್ತದೆ. ಆದರೆ ಕನ್ನಡ ಸಾಹಿತ್ಯದ ಬಗ್ಗೆ ನನಗಷ್ಟು ಮಾಹಿತಿ ಇಲ್ಲ ಅಂತಾ ಓಪನ್ ಆಗಿಯೇ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇದ್ದು, ಕನ್ನಡ ಸಿನಿಮಾಗಳಲ್ಲಿ ನಟಿಸಿ, ಕನ್ನಡ ಮಾತನಾಡಲು ಹಿಂಜರಿಯುವವರ ಮುಂದೆ, ವಿದೇಶದಲ್ಲಿದ್ದು ಇಷ್ಟು ಚೆನ್ನಾಗಿ ಮಾತನಾಡುವ ಸಂಹಿತ, ಅದೆಷ್ಟೋ ಶೋಕಿ ಮಾಡುವ ನಟಿಯರಿಗಿಂತ ಉತ್ತಮರೆನ್ನಿಸುತ್ತಾರೆ. ಇವರ ಪೂರ್ತಿ ಸಂದರ್ಶನ ನೋಡಲು ಈ ವೀಡಿಯೋ ಪ್ರೆಸ್ ಮಾಡಿ.