ಬ್ರೆಡ್ ಮತ್ತು ಹಾಲು ಸೇರಿಸಿ, ಈ ಸ್ವಾದಿಷ್ಟ ಸ್ವೀಟ್ ತಯಾರಿಸಬಹುದು..

ಬ್ರೆಡ್ ಬರೀ ಸ್ಯಾಂಡವಿಚ್ ಮಾಡೋಕ್ಕಲ್ಲ. ಬದಲಾಗಿ ನೀವು ಬ್ರೆಡ್‌ನಿಂದ ಸ್ವೀಟ್ಸ್ ಮಾಡಬಹುದು. ಕೆಲವರಿಗೆ ಬ್ರೆಡ್‌ನಿಂದ ಗುಲಾಬ್ ಜಾಮೂನ್ ಮಾಡೋದು ಗೊತ್ತು. ಆದ್ರೆ ನಾವಿಂದು ಹಾಲು ಮತ್ತು ಬ್ರೆಡ್ ಬಳಸಿ ಇನ್ನೊಂದು ರೀತಿಯ ಸ್ವೀಟ್ ಮಾಡುವುದನ್ನ ಹೇಳಲಿದ್ದೇವೆ. ಹಾಗಾದ್ರೆ ಅದಕ್ಕೆ ಏನೇನು ಸಾಮಗ್ರಿ ಬೇಕು ಮತ್ತು ಅದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾದ ಸಾಮಗ್ರಿ: ಬ್ರೆಡ್, ಒಂದು ಸ್ಪೂನ್ ಕಾರ್ನ ಫ್ಲೋರ್, ಅರ್ಧ ಲೀಟರ್ ಹಾಲು, ನಾಲ್ಕುಸ್ಪೂನ್ ಹಾಲಿನ ಕೆನೆ, 2 ಸ್ಪೂನ್ ಹಾಲಿನ ಪುಡಿ, ಒಂದು ಸ್ಪೂನ್ ಸಕ್ಕರೆ ಪುಡಿ, ಬೇಕಾದ್ರೆ ಪಿಂಕ್ ಅಥವಾ ಆರೇಂಜ್ ಫುಡ್ ಕಲರ್, ಹತ್ತು ಸ್ಪೂನ್ ಸಕ್ಕರೆ, ಬೇಕಾದಷ್ಟು ಡ್ರೈಫ್ರೂಟ್ಸ್,

ಮಾಡುವ ವಿಧಾನ: ಮೊದಲು ಬ್ರೆಡ್‌ನ್ನು ಗೋಲಾಕಾರವಾಗಿ ಕತ್ತರಿಸಿ. ಈ ಒಂದು ಚಿಕ್ಕ ಬೌಲ್‌ಗೆ ಕೆನೆ, ಹಾಲಿನ ಪುಡಿ, ಸಕ್ಕರೆ ಪುಡಿ ಹಾಕಿ ಮಿಕ್ಸ್ ಮಾಡಿ. ಬ್ರೆಡ್‌ ಮಧ್ಯ ಜ್ಯಾಮ್ ರೀತಿ, ಈ ಪೇಸ್ಟ್‌ನ್ನ ಹಚ್ಚಿ. ಈಗ ಹಾಲು ಬಿಸಿ ಮಾಡಿ, ಹಾಲು ಸರಿಯಾಗಿ ಬಿಸಿ ಮಾಡಿದ ಮೇಲೆ, ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಡ್ರೈಫ್ರೂಟ್ಸ್ ಮತ್ತು ಕಾರ್ನ್‌ ಫ್ಲೋರ್ ಮಿಕ್ಸ್ ಮಾಡಿ. ಈ ವೇಳೆ ಹಾಲು ಸ್ವಲ್ಪ ಥಿಕ್ ಆಗತ್ತೆ. ಆದ್ರೆ ಎಲ್ಲಿಯೂ ಕಾರ್ನ ಫ್ಲೋರ್ ಗಂಟು ಆಗದಂತೆ ಮಿಕ್ಸ್ ಮಾಡಬೇಕು.

ಈಗ ಒಂದು ಪ್ಲೇಟ್‌ನಲ್ಲಿ ರೆಡಿ ಮಾಡಿಟ್ಟುಕೊಂಡ ಬ್ರೆಡ್ ಇಟ್ಟು ಅದರ ಮೇಲೆ ಈ ಹಾಲಿನ ಮಿಶ್ರಣ ಹರಡಿ. ನಂತರ ತಣ್ಣಗಾಗಲು ಫ್ರಿಜ್‌ನಲ್ಲಿರಿಸಿ. ಈಗ ರುಚಿಕರ ಬ್ರೆಡ್ ಡೆಸರ್ಟ್ ರೆಡಿ..

Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 1

Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 2

Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 1

About The Author