Health Tips: ಬೆಳಿಗ್ಗೆ ಎದ್ದ ತಕ್ಷಣ, ಬ್ಯಾಗ್ ಹಾಕಿಕೊಂಡು, ಆಫೀಸಿಗೆ, ಶಾಲೆ ಕಾಲೇಜಿಗೆ ಹೋಗುವವರೇ ಹೆಚ್ಚು. ಇನ್ನು ಮನೆಯಲ್ಲಿರುವ ಕೆಲವು ಗೃಹಿಣಿಯರು ಏಳುವುದು 6 ಗಂಟೆಗಾದರೆ, ಅವರ ತಿಂಡಿ ತಿನ್ನುವ ಸಮಯ ಮಾತ್ರ 11 ಗಂಟೆಗೆ. ಆದರೆ ಬೆಳಿಗ್ಗಿನ ಸಮಯ, ಸರಿಯಾಗಿ, ಆರೋಗ್ಯಕರವಾದ ತಿಂಡಿ ತಿನ್ನುವುದು ತುಂಬಾ ಮುಖ್ಯ. ಹಾಗಾದ್ರೆ ಬೆಳಗ್ಗಿನ ತಿಂಡಿ ಯಾಕೆ ಮುಖ್ಯ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ.
ವೈದ್ಯರು ಹೇಳುವ ಪ್ರಕಾರ, ನಾವು ಯಾವ ಆಹಾರವನ್ನು, ಎಷ್ಟು ಪ್ರಮಾಣದಲ್ಲಿ ತಿನ್ನುತ್ತೇವೋ, ಅದು ನಮ್ಮ ದೇಹಕ್ಕೆ ಉಪಯುಕ್ತ ಆಹಾರವಾಗಿರಬೇಕು. ನೀವು ತರಕಾರಿ, ಸೊಪ್ಪು, ಹಣ್ಣು, ಮೊಳಕೆ ಕಾಳು, ಅಥವಾ ಬೇರೆ ಏನೇ ತಿಂದರೂ, ಆ ಆಹಾರ ಸೇವಿಸಿದಾಗ, ಅದು ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ನೀಡಬೇಕು. ನಮ್ಮ ಆರೋಗ್ಯವನ್ನು ಅಭಿವೃದ್ಧಿಗೊಳಿಸಬೇಕು. ಅಂಥ ಆಹಾರಗಳನ್ನೇ ನಾವು ಸೇವಿಸಬೇಕು ಅಂತಾರೆ ವೈದ್ಯರು.
ಇನ್ನು ನಾವು ಹಸಿವು ಎಂದಾಕ್ಷಣ ಪ್ಯಾಕ್ ಮಾಡಿರುವ ಜ್ಯೂಸ್, ಕೇಕ್, ಚಾಕೋಲೇಟ್ಸ್, ಬಿಸ್ಕೇಟ್ಸ್ ಇತ್ಯಾದಿ ಜಂಕ್ ಫುಡ್ ತಿನ್ನುತ್ತೇವೆ. ಈ ರೀತಿಯ ಆಹಾರ, ಆ ಕ್ಷಣಕ್ಕಷ್ಟೇ ನಮ್ಮ ಹಸಿವನ್ನು ನೀಗಿಸುತ್ತದೆ. ಆದರೆ ಅದರಿಂದ ನಮ್ಮ ದೇಹಕ್ಕೆ ಏನೂ ಉಪಯೋಗವಾಗುವುದಿಲ್ಲ. ಅಲ್ಲದೇ, ಇದರಿಂದ ನಮ್ಮ ಆರೋಗ್ಯವೂ ಹಾಳಾಗುತ್ತದೆ. ಹಾಗಾಗಿ ಆರೋಗ್ಯಕರ ಆಹಾರವನ್ನೇ ನಾವು ಸೇವಿಸಬೇಕು.
ಇನ್ನು ಬೆಳಗ್ಗಿನ ತಿಂಡಿ ಸೇವನೆ ತುಂಬಾ ಮುಖ್ಯ ಅಂತಾ ಹೇಳೋದ್ಯಾಕೆ ಅಂದ್ರೆ, ಬೆಳಗ್ಗಿನ ತಿಂಡಿ, ನಮ್ಮ ಇಡೀ ದಿನಕ್ಕೆ ಬೇಕಾದ ಚೈತನ್ಯ, ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಬೆಳಿಗ್ಗೆ ಆರೋಗ್ಯಕರವಾದ ತಿಂಡಿಯನ್ನೇ ನಾವು ತಿನ್ನಬೇಕು. ಅಲ್ಲದೇ, ನಮ್ಮ ತಿಂಡಿಯಲ್ಲಿ ಫೈಬರ್ ಅಂಶ ಇದೆಯಾ ಅಂತಾ ನಾವು ತಿಳಿದುಕೊಳ್ಳಬೇಕು. ಏಕೆಂದರೆ ಫೈಬರ್‌ಯುಕ್ತ ಆಹಾರ ಸೇವನೆಯಿಂದ ನಮಗೆ ಬೇಗ ಹಸಿವಾಗುವುದಿಲ್ಲ. ಹಾಗಾಗಿ ನಮ್ಮ ತಿಂಡಿಯಲ್ಲಿ ಫೈಬರ್ ಅಂಶವಿರಬೇಕು. ಇನ್ನು ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು, ಈ ವೀಡಿಯೋ ನೋಡಿ..