Wednesday, January 15, 2025

Latest Posts

ಬ್ರೋಕಲಿ ಮತ್ತು ಬಾದಾಮ್ ಸೂಪ್ ರೆಸಿಪಿ..

- Advertisement -

ನೀವು ಟೊಮೆಟೋ, ಪಾಲಕ್, ಬೀಟ್‌ರೂಟ್, ಕ್ಯಾರೆಟ್ ಸೂಪ್ ಟೇಸ್ಟ್ ಮಾಡಿರುತ್ತೀರಿ. ಆದರೆ, ಡ್ರೈಫ್ರೂಟ್ಸ್ ಬಳಸಿ ಮಾಡಿದ ಸೂಪ್ ಯಾವತ್ತಾದರೂ ಟೇಸ್ಟ್ ಮಾಡಿದ್ದೀರಾ..? ಇಲ್ಲವಾದಲ್ಲಿ ನಾವಿಂದು ಬ್ರೋಕಲಿ ಮತ್ತು ಬಾದಾಮ್ ಬಳಸಿ ಸೂಪ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದರೆ ಈ ಸೂಪ್ ಮಾಡಲು ಏನೇನು ಸಾಮಗ್ರಿ ಬೇಕು..? ಇದನ್ನು ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ:  ಒಂದು ಸ್ಪೂನ್ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆ, ಸಣ್ಣದಾಗಿ ಹೆಚ್ಚಿದ 3 ಬೆಳ್ಳುಳ್ಳಿ ಎಸಳು,  ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ, 8 ರಿಂದ 10 ಬಾದಾಮ್‌ ಬೀಜ, ಒಂದು ಕಪ್ ಬ್ರೋಕೋಲಿ, ಅರ್ಧ ಕಪ್ ಹಾಲು, ಕೊಂಚ ಪೆಪ್ಪರ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು. ಅವಶ್ಯಕೆತ ಇದ್ದಲ್ಲಿ ಕೊಂಚ ಕ್ರೀಮ್ ಬಳಸಬಹುದು.

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಈರುಳ್ಳಿ ಹಾಕಿ ಕೊಂಚ ಹುರಿದು, ಬ್ರೋಕೋಲಿ ಸೇರಿಸಿ ಹುರಿಯಿರಿ. ಇವೆರಡು ಸರಿಯಾಗಿ ಬೆಂದ ಬಳಿಕ, ಇದಕ್ಕೆ ಬಾದಾಮ್ ಸೇರಿಸಿ ಬಾಡಿಸಿ. ನಿಮಗೆ ಬಾದಾಮ್ ಸಿಪ್ಪೆ ತೆಗೆಯಬೇಕೆಂದಲ್ಲಿ, ನೆನೆಸಿಟ್ಟು ಸಿಪ್ಪೆ ತೆಗೆದು ನಂತರವೇ ಬಳಸಿ. ಈಗ ಇದಕ್ಕೆ ಕೊಂಚ ಉಪ್ಪು ಹಾಕಿ ಮಿಕ್ಸ್ ಮಾಡಿ, ನಂತರ ಕೊಂಚ ನೀರು ಹಾಕಿ ಬೇಯಿಸಿ. ಇದು ತಣಿದ ಬಳಿಕ, ಮಿಕ್ಸಿಗೆ ಹಾಕಿ ಗ್ರೈಂಡ್ ಮಾಡಿ, ಪೇಸ್ಟ್ ತಯಾರಿಸಿ.

ಈಗ ಪ್ಯಾನ್‌ ಬಿಸಿ ಮಾಡಿ, ಈ ಪೇಸ್ಟ್‌ ಹಾಕಿ ಕೊಂಚ ಹುರಿಯಿರಿ. ನಂತರ ನೀರು, ಹಾಲು ಅವಶ್ಯಕತೆ ಇದ್ದಲ್ಲಿ ಉಪ್ಪು ಸೇರಿಸಿ, ಮಂದ ಉರಿಯಲ್ಲಿ ಸ್ವಲ್ಪ ಕುದಿಸಿ. ನಂತರ ಪೆಪ್ಪರ್ ಸೇರಿಸಿ ಗ್ಯಾಸ್ ಆಫ್ ಮಾಡಿ. ಈಗ ಬ್ರೋಕೋಲಿ ಸೂಪ್ ರೆಡಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಬಾದಾಮ್, ಗೋಡಂಬಿ, ಕ್ರೀಮ್ ಸೇರಿಸ ಸವಿಯಿರಿ.

ಈ ಪೇಯವನ್ನ ನೀವು ಕುಡಿದರೆ, ನಿಮ್ಮ ಮೂಳೆ ಗಟ್ಟಿಯಾಗತ್ತೆ, ಕ್ಯಾಲ್ಶಿಯಂ ಪ್ರಮಾಣ ಹೆಚ್ಚುತ್ತೆ..

ಹಾರ್ಮೋನ್ ಬ್ಯಾಲೆನ್ಸ್ಗೆ ಸಹಕಾರಿಯಾಗಿರುವ ಒಣಹಣ್ಣಿನ ಬಗ್ಗೆ ಮಾಹಿತಿ..

ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?

- Advertisement -

Latest Posts

Don't Miss