Friday, April 18, 2025

Latest Posts

ಈ ರೀತಿ ಮಾಡುವುದರಿಂದ ನಿಮ್ಮ ನಾಶ ನೀವೇ ಮಾಡಿಕೊಳ್ಳುತ್ತೀರಿ..

- Advertisement -

ಮನುಷ್ಯನಾದವನು ಜೀವನದಲ್ಲಿ ಒಂದಲ್ಲ ಒಂದು ತಪ್ಪು ಮಾಡೇ ಮಾಡಿರ್ತಾನೆ. ಆದ್ರೆ ನಾವು ಮಾಡಿದ ತಪ್ಪನ್ನು ನಾವು ತಿದ್ದಿಕೊಳ್ಳೋಕ್ಕೆ ಕಲಿಯಬೇಕೇ ಹೊರತು. ಮತ್ತೆ ಮತ್ತೆ ಅದೇ ತಪ್ಪನ್ನು ಮಾಡಬಾರದು. ಹಾಗಾಗಿ ಶ್ರೀಕೃಷ್ಣ ನಾವು ಮಾಡುವ ಕೆಲ ಕೆಲಸಗಳೇ ನಮ್ಮ ನಾಶಕ್ಕೆ ಕಾರಣವಾಗುತ್ತದೆಯಂತೆ. ಹಾಗಾದ್ರೆ ಯಾವುದು ಆ ಕೆಲಸ ಅಂತಾ ತಿಳಿಯೋಣ ಬನ್ನಿ..

ತಿಳಿದು ತಿಳಿದು ಬೇರೆಯವರಿಗೆ ಮೋಸ ಮಾಡುವುದು. ನಿಮಗೆ ಒಂದು ಕೆಲಸ ಮಾಡುವುದರಿಂದ  ದುಡ್ಡು ಸಿಗಬಹುದು. ಅಥವಾ ದೇಹ ಸುಖ ಸಿಗಬಹುದು. ಅಥವಾ ಯಾವುದೋ ಲಾಭವಾಗಬಹುದು. ಆದ್ರೆ ಅದು ತಪ್ಪು ಅಂತಾ ನಿಮಗೆ ಗೊತ್ತಿದ್ದರೂ, ನೀವು ಅದನ್ನು ಮಾಡಲು ಹೋದರೆ, ನಿಮ್ಮ ನಾಶ ಖಚಿತ.

ಚಳಿಗಾಲದಲ್ಲಿ ಕಿವಿ ನೋವಿಗೆ ಕಾರಣಗಳೇನು ಗೊತ್ತಾ..? ಕಾಳಜಿ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..

ನಿಮ್ಮ ಮೇಲೆ ಯಾರಾದರೂ ವಾಕ್ಪ್ರಹಾರ ಮಾಡಲು ಬಂದಾಗ, ಎದುರುತ್ತರ ನೀಡುವುದು. ನಿಮ್ಮನ್ನು ಜಗಳಕ್ಕೆಳೆಯಬೇಕು ಎಂದೇ, ಕೆಲವರು ಕೊಂಕು ಮಾತನಾಡುತ್ತಾರೆ. ಆಗ ಅದಕ್ಕೆ ತಕ್ಕ ಹಾಗೆ ನೀವು ಜಗಳ ಮಾಡಲು ಹೋಗದೇ, ಅಂಥವರನ್ನು ನಿರ್ಲಕ್ಷ್ಯ ಮಾಡಬೇಕು.. ಇನ್ನು ನಿಮಗಿಂತ ಹಿರಿಯರು ನಿಮ್ಮ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿದರೂ, ಕೊಂಕ ಮಾತನಾಡಿದರೂ, ಅದನ್ನು ಸಹಿಸಿಕೊಂಡಿರಬೇಕೆ ಹೊರತು, ಎದುರುತ್ತರ ನೀಡಬೇಡಿ. ಇದರಿಂದ ನಿಮ್ಮ ನೆಮ್ಮದಿಯೇ ಹಾಳಾಗುತ್ತದೆ.

ಇನ್ನು ನಿಮಗೆ ಯಾರೂ ಬೆಂಬಲಿಸಲಿಲ್ಲವೆಂದು ಯಾವಾಗ ನೀವು ಮನನೊಂದುಕೊಳ್ಳುತ್ತೀರೋ, ಅದೇ ನಿಮ್ಮ ನೆಮ್ಮದಿಯನ್ನು ನಾಶ ಮಾಡುತ್ತದೆ. ನನಗೆ ಯಾರ ಬೆಂಬಲವೂ ಬೇಡ. ನನ್ನ ಜೀವನವನ್ನು ನಾನೇ ರೂಪಿಸಿಕೊಳ್ಳುತ್ತೇನೆ. ನನ್ನ ಯಶಸ್ಸನ್ನು ನಾನೇ ಕಂಡುಕೊಳ್ಳುತ್ತೇನೆ. ಅದಕ್ಕಾಗಿ ಕಷ್ಟ ಪಡುತ್ತೇನೆಂಬ ಆತ್ಮ ವಿಶ್ವಾಸವನ್ನು ನೀವು ತುಂಬಿಕೊಂಡಾಗ ಮಾತ್ರ, ನೀವು ಗೆಲ್ಲುತ್ತೀರಿ.

ಚಳಿಗಾಲದಲ್ಲಿ ತುಳಸಿ ಮತ್ತು ಪುದೀನಾ ಚಹಾವನ್ನು ಕುಡಿಯುವುದರಿಂದ ಶೀತ ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ..!

ಕಂಡ ಕಂಡವರ ಬಳಿ ಯಾವ ವಿಷಯದ ಬಗ್ಗೆಯೂ ಸಲಹೆ ಕೇಳಬೇಡಿ. ಮನುಷ್ಯನಿಗೆ ಕಷ್ಟ ಬಂದಾಗ, ಇನ್ನೊಬ್ಬರು ಕೊಟ್ಟ ಸಲಹೆಯಿಂದಲೇ ಲಾಭವಾಗಬಹುದು. ಆದರೆ, ಪ್ರತೀ ಸಾರಿಯೂ ಕಷ್ಟ ಬಂದಾಗಲೂ, ನೀವು ಕಂಡ ಕಂಡವರ ಬಳಿ ಸಲಹೆ ಕೇಳಿದರೆ, ನಿಮಗೆ ಯಶಸ್ಸು ಸಿಗೋದಿಲ್ಲಾ. ಹಾಗಾಗಿ ನೀವು ಆದಷ್ಟು ನಿಮ್ಮ ಕಷ್ಟಕ್ಕೆ ನೀವೇ ಪರಿಹಾರ ಕಂಡುಕೊಳ್ಳಬೇಕು.

- Advertisement -

Latest Posts

Don't Miss