Thursday, June 19, 2025

Latest Posts

ಇದೊಂದು ವಸ್ತುವನ್ನು ಬಳಸಿ, 5 ಕ್ರೀಮ್ ತಯಾರಿಸಿ, ಚೆಂದ ಕಾಣಿಸಬಹುದು..

- Advertisement -

ನೋಡಲು ಸುಂದರವಾಗಿದ್ದವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರುತ್ತಾರೆ. ಮತ್ತು ಹೀಗೆ ಹೊಗಳಿಕೆ ಪಡೆಯೋದು ಹಲವರ ಆಸೆಯಾಗಿರುತ್ತೆ. ಹಾಗಾಗಿ ನಾವಿಂದು ಕೇವಲ ಒಂದು ಪ್ರಾಡಕ್ಟ್ ಮತ್ತು ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನು ಬಳಸಿ, 5 ಕ್ರೀಮ್ ತಯಾರಿಸಿ, ಸುಂದರ ಕಾಣುವ ಟಿಪ್ಸ್ ಹಂಚಿಕೊಳ್ಳಲಿದ್ದೇವೆ.

ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..

ನಾವಿಂದು ಹೇಳಲು ಹೊರಟಿರುವ ಆ 1 ವಸ್ತು ಅಂದ್ರೆ ವ್ಯಾಸಲಿನ್. ಸುಂದರ ತುಟಿಗಾಗಿ ಇದರಿಂದ ಒಂದು ಕ್ರೀಮ್ ತಯಾರಿಸಬಹುದು. 1 ಸ್ಪೂನ್ ವ್ಯಾಸಲಿನ್, ಅರ್ಧ ಸ್ಪೂನ್ ಅರಿಶಿನ, ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಕ್ರೀಮ್ ತಯಾರಿಸಿ. ಇದನ್ನು ತುಟಿಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಸಾಫ್ಟ್ ಬಟ್ಟೆ ಅಥವಾ, ವೆಟ್ ಟಿಶ್ಯೂವಿನಿಂದ ರಬ್ ಮಾಡಿ. ಪ್ರತಿದಿನ ಹೀಗೆ ಮಾಡಿದ್ರೆ, ನಿಮ್ಮ ತುಟಿ ಸಾಫ್ಟ್ ಆಗಿ, ಗುಲಾಬಿ ಬಣ್ಣವಾಗುತ್ತದೆ.

ಈ ಸಾತ್ವಿಕ ಜ್ಯೂಸ್ಗಳನ್ನು ನೀವೂ ಒಮ್ಮೆ ತಯಾರಿಸಿ ನೋಡಿ..

ಎರಡನೇಯದ್ದು ನಿಮ್ಮ ಹಿಮ್ಮಡಿ ಸಾಫ್ಟ್ ಆಗಬೇಕು ಅಂದ್ರೆ ಒಂದು ಕ್ರೀಮ್ ತಯಾರಿಸಬೇಕು. ಒಂದು ಸ್ಪೂನ್ ವ್ಯಾಸಲಿನ್, 2 ಸ್ಪೂನ್ ಆ್ಯಲೋವೆರಾ ಜೆಲ್, ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಕ್ರೀಮ್ ತಯಾರಿಸಿ, ರಾತ್ರಿ ಮಲಗುವಾಗ ಹಿಮ್ಮಡಿಗೆ ಹಚ್ಚಿ, ಸಾಕ್ಸ್ ಹಾಕಿಕೊಂಡು ಮಲಗಿ.

ಮೂರನೇಯದ್ದು ಒಂದು ಸ್ಪೂನ್ ವ್ಯಾಸಲಿನ್ ಮತ್ತು ಒಂದು ಸ್ಪೂನ್ ಕೋಕೋ ಪೌಡರ್ ಬಳಸಿ ಮಾಡುವ ಐ ಬ್ರೋ ಕ್ರೀಮ್. ವ್ಯಾಸಲಿನನ್ನು ಒಂದು ಚಿಕ್ಕ ಬೌಲ್‌ಗೆ ಹಾಕಿ, ಡಬಲ್ ಬಾಯ್ಲಿಂಗ್ ಮಾಡಿ. ಈಗ ಇದಕ್ಕೆ ಕೋಕೋ ಪೌಡರ್ ಸೇರಿಸಿ ಒಂದು ಚಿಕ್ಕ ಡಬ್ಬಕ್ಕೆ ಹಾಕಿಡಿ. ರಾತ್ರಿ ಮಲಗುವಾಗ ಮಸ್ಕರಾ ಬ್ರಶ್‌ ಬಳಸಿ, ಇದನ್ನು ಐ ಬ್ರೋಗೆ ಹಚ್ಚಿ.

ಜ್ವರ ಬಂದಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ನಾಲ್ಕನೇಯದಾಗಿ ಲಿಪ್‌ಸ್ಟಿಕ್. ಒಂದು ಸ್ಪೂನ್ ವ್ಯಾಸಲಿನ್ ಮತ್ತು ಅರ್ಧ ಸ್ಪೂನ್ ಬೀಟ್‌ರೂಟ್‌ ಪುಡಿ ಸೇರಿಸಿ, ಡಬಲ್ ಬಾಯ್ಲಿಂಗ್ ಮಾಡಿ, ಅದನ್ನು ಲಿಪ್‌ಸ್ಟಿಕ್ ಕಂಟೇನರ್‌ ಹಾಕಿ. ಬಳಸಿ.

ಐದನೇಯದಾಗಿ ಸಾಫ್ ಆಗಿರುವ ಲಿಪ್‌ಗೆ ಬಳಸಬಹುದಾದ ಲಿಪ್ ಕ್ರೀಮ್. 1 ಸ್ಪೂನ್ ವ್ಯಾಸಲಿನ್, 1 ಸ್ಪೂನ್ ಜೇನುತುಪ್ಪ ಮಿಕ್ಸ್ ಮಾಡಿ, ರಾತ್ರೆ ಮಲಗುವಾಗ ಹಚ್ಚಿ ಮಲಗಿ. ಈ ವಸ್ತುಗಳಲ್ಲಿ ನಿಮಗೆ ಅಲರ್ಜಿ ತರುವಂಥ ವಸ್ತು ಇದ್ರೆ, ಅದನ್ನು ಬಳಸದಿದ್ರೆ ಉತ್ತಮ.

- Advertisement -

Latest Posts

Don't Miss