Friday, December 27, 2024

Latest Posts

ಹೊಟೇಲ್ ಶೈಲಿಯಲ್ಲಿ ಮನೆಯಲ್ಲೇ ತಯಾರಿಸಿ ಕ್ಯಾಬೇಜ್ ಮಂಚೂರಿಯನ್..

- Advertisement -

ಸಂಜೆಯಾದ ಬಳಿಕ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಎಂದು ಅನ್ನಿಸಿದಾಗ, ಅದೇ ಬಜ್ಜಿ ಬೋಂಡಾ ಮಾಡುವ ಬದಲು ಕ್ಯಾಬೇಜ್ ಮಂಚೂರಿ ಮಾಡಿ ಸವಿಯಬಹುದು. ಇಂದು ನಾವು ಕ್ಯಾಬೇಜ್ ಮಂಚೂರಿಯನ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಕ್ಯಾಬೇಜ್ ಮಂಚೂರಿಯನ್ ಮಾಡೋದು ಹೇಗೆ..?ಮತ್ತು ಅದನ್ನ ಮಾಡಲು ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..

ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚನ್ನ ಕಡಿಮೆ ಮಾಡುವುದು ಹೇಗೆ..?

ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ತುರಿದ ಕ್ಯಾಬೇಜ್, ಅರ್ಧ ಕಪ್ ಕಾರ್ನ್‌ಫ್ಲೋರ್ ಅಥವಾ, ಅವಲಕ್ಕಿ ಪುಡಿ, 5ರಿಂದ 6 ಎಸಳು ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, 2 ಸ್ಪೂನ್ ಚಿಲ್ಲಿ ಸಾಸ್, ಒಂದು ಸ್ಪೂನ್ ಸೋಯಾ ಸಾಸ್, ಟೊಮೆಟೋ ಸಾಸ್, ಕೊಂಚ ಮೈದಾ, ಒಂದು ಸ್ಪೂನ್ ಖಾರದ ಪುಡಿ, ಗರಂ ಮಸಾಲೆ, ಶುಂಠಿ ಬೆಳ್ಳುಳ್ಳಿ ಚಿಲ್ಲಿ ಪೇಸ್ಟ್, ಧನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ತುರಿದ ಕ್ಯಾಬೇಜ್‌ಗೆ, ಕಾರ್ನ್‌ಫ್ಲೋರ್ ಅಥಾವ ಅವಲಕ್ಕಿ ಪುಡಿ, ಮೈದಾ, ಬೆಳ್ಳುಳ್ಳಿ, ಸೋಯಾ ಸಾಸ್, ಚಿಲ್ಲಿ ಸಾಸ್, ಖಾರದ ಪುಡಿ, ಗರಂ ಮಸಾಲೆ ಪುಡಿ, ಶುಂಠಿ ಬೆಳ್ಳುಳ್ಳಿ ಚಿಲ್ಲಿ ಪೇಸ್ಟ್, ಧನಿಯಾ ಪುಡಿ, ಟೊಮೆಟೋ ಸಾಸ್, ಉಪ್ಪು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಅದು ಪಕೋಡಾ ಹದಕ್ಕಿರಲಿ.

ಎಂದಿಗೂ ಒಬ್ಬಂಟಿಯಾಗಿರಬೇಡಿ.. ಏಕಾಂಗಿತನ ಅನ್ನೋದು ನೆಮ್ಮದಿಯಲ್ಲ ಶಾಪ..

ಇದನ್ನ 15 ನಿಮಿಷ ಹಾಗೆ ಇಟ್ಟು, ಪಕೋಡಾ ರೀತಿ ಕರಿಯಬೇಕು. ಎಣ್ಣೆಯನ್ನ ಚೆನ್ನಾಗಿ ಕಾಯಿಸಿ, ನಂತರ ಮಂದ ಉರಿಯಲ್ಲಿಟ್ಟು, ಪಕೋಡಾ ಕರಿಯಬೇಕು. ಈ ಪಕೋಡಾವನ್ನು ಟೋಮೆಟೋ ಸಾಸ್ ಜೊತೆ ಸವಿಯಬಹುದು. ಅಥವಾ ಈರುಳ್ಳಿ, ಕ್ಯಾಪ್ಸಿಕಂ, ಸೋಯಾ ಸಾಸ್, ಟೋಮೆಟೋ ಸಾಸ್, ಚಿಲ್ಲಿ ಸಾಸ್ ಹಾಕಿ, ಹುರಿದು, ಪಕೋಡಾ ಸೇರಿಸಿ, ಮಂಚೂರಿ ಮಾಡಿಯೂ ಸವಿಯಬಹುದು.

- Advertisement -

Latest Posts

Don't Miss