Friday, October 18, 2024

Latest Posts

Cabinet reshuffle : ಸಿಎಂ ಬೊಮ್ಮಾಯಿ ದೆಹಲಿ ದಂಡಯಾತ್ರೆ.. ಯಾರಿಗೆ ಸಿಗುತ್ತೆ ಸಚಿವ ಪಟ್ಟ..?

- Advertisement -

www.karnatakatv.net : ಬಸವರಾಜ ಬೊಮ್ಮಾಯಿ ಸಿಎಂ ಆಗಿ ಆರು ತಿಂಗಳು ಕಳೆದಿದೆ. ಆದ್ರೆ ಖಾಲಿ ಉಳಿದಿರೋ ನಾಲ್ಕು ಸಚಿವ ಸ್ಥಾನ (Four ministerial position) ಭರ್ತಿಗೆ ಈವರೆಗೂ ಬಿಜೆಪಿ ಹೈಕಮಾಂಡ್ (BJP High Command) ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಮತ್ತೊಂದು ಕಡೆ ಬೊಮ್ಮಾಯಿ ಅವರಿಗೆ ಮಂತ್ರಿ ಮಂಡಲ ವಿಸ್ತರಣೆ ಮಾಡಲು ಸಚಿವಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಸೋಮವಾರ ದೆಹಲಿಯಾತ್ರೆ ಕೈಗೊಂಡಿದಿದ್ದಾರೆ. ಯಾರನ್ನ ಮಂತ್ರಿ ಮಾಡಬೇಕು ಅನ್ನೋ ಲಿಸ್ಟ್ ಹಿಡಿದುಕೊಂಡು ದೆಹಲಿ ದಂಡಯಾತ್ರೆಗೆ ಸಜ್ಜಾಗಿದ್ದಾರೆ, ಮತ್ತೊಂದು ಕಡೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Ex CM B S Yeddyurappa) ಆಪ್ತರಿಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋ ಮಾತುಗಳು ಕೂಡ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರ್ತಿವೆ. ಹೀಗಾಗಿ ಯಾರನ್ನು ಮಂತ್ರಿ ಮಾಡಬೇಕು ಅನ್ನೋ ಪೀಕಲಾಟವೂ ಬೊಮ್ಮಾಯಿಗೆ ಶುರುವಾಗಿದೆ. ಇರುವ ನಾಲ್ಕು ಸ್ಥಾನಕ್ಕೆ ನಲವತ್ತುಕ್ಕೂ ಹೆಚ್ಚು ಶಾಸಕರು ಲಾಬಿ ಶುರುಮಾಡಿದ್ದಾರೆ. ಮಂತ್ರಿ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ (Ramesh Jarakiholi) ಕಸರತ್ತು. ತಮ್ಮ ಮೇಲೆ ಬಂದಿದ್ದ ಆರೋಪದಿಂದ ರಮೇಶ್ ಜಾರಕಿಹೊಳಿಗೆ ಎಸ್ಐಟಿ ಕ್ಲೀನ್ ಚಿಟ್ (SIT Clean Chit) ನೀಡಿದೆ..ತಮ್ಮ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದ ಮೇಲೆ ಸಚಿವ ಸ್ಥಾನಕ್ಕೆ ರಮೇಶ್ ರಾಜೀನಾಮೆ ಕೊಟ್ಟಿದ್ದರು.ಈ ಕೇಸ್ ಮುಕ್ತಾಯದ ಹಂತ ತಲುಪಿದ್ದು,ಕೋರ್ಟ್ ಗೆ ಎಸ್ಐಟಿ ಬಿ ರಿಪೋರ್ಟ್ ಸಲ್ಲಿಸಿದೆ. ತಮ್ಮ ಮೇಲಿನ ಆರೋಪದಿಂದ ಹೊರ ಬಂದ ಮೇಲೆ ತಮ್ಮನ್ನು ಮಂತ್ರಿ ಮಾಡಬೇಕು ಅನ್ನೋ ಷರತ್ತು ಹಾಕಿಯೇ ಬೆಳಗಾವಿ ಸಾಹುಕಾರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರಂತೆ..ಈಗ ತಾವು ನಿರ್ದೋಷಿ ಆಗಿದ್ದು ತಮ್ಮನ್ನು ಮಂತ್ರಿ ಮಾಡಿ ಅಂತಾ ಸಾಹುಕಾರ್ ಹೈಕಮಾಂಡ್ ಕದತಟ್ಟಿದ್ದಾರೆ. ಮಂತ್ರಿಗಿರಿಗಾಗಿ ಶಾಸಕರಿಂದ ಸಿಎಂ ಮೇಲೆ ಒತ್ತಡ ಮತ್ತೊಂದು ಕಡೆ ಸಚಿವ ಸ್ಥಾನ ಆಕಾಂಕ್ಷಿಗಳಿಂದ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಕೂಡ ಹೆಚ್ಚಾಗಿದೆ.ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ(MLA MP Renukaacharya), ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (MLA  Madalu virupakshappa), ಆರ್.ಶಂಕರ್ (R. Shankar), ಆನಂದ್ ಮಾಮನಿ (Anand Mamani) ಮತ್ತಿತರ ಶಾಸಕರು ಸಿಎಂ ಭೇಟಿ ಮಾಡಿ ತಮ್ಮನ್ನು ಮಂತ್ರಿ ಮಾಡಿ ಅಂತಾ ಮನವಿ ಮಾಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಇನ್ನು ಸಿಎಂ ಬೊಮ್ಮಾಯಿಗೆ ಸಿಕ್ಕಿಲ್ಲ ಹೈಕಮಾಂಡ್ ಭೇಟಿಗೆ ಟೈಂ ? ಸಿಎಂ ಬಸವರಾಜ ಬೊಮ್ಮಾಯಿ ಸಂಸದರ ಸಭೆ ಬಳಿಕ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡ್ತಾರೆ ಎನ್ನಲಾಗಿದೆ. ಆದ್ರೆ ಇದುವರೆಗೂ ಹೈಕಮಾಂಡ್ ಭೇಟಿ ಮಾಡಲು ಸಿಎಂ ಬೊಮ್ಮಾಯಿಗೆ ಸಮಯಸಿಕ್ಕಿಲ್ವಂತೆ. ಒಟ್ಟಿನಲ್ಲಿ ತಾವು 6 ತಿಂಗಳು ಅಧಿಕಾರ ಪೂರೈಸಿದ ಸಂತಸ ಬೊಮ್ಮಾಯಿಗೆ ಒಂದು ಕಡೆ ಆದ್ರೆ ಸಂಪುಟ ವಿಸ್ತರಣೆ ಅನ್ನೋದು ಬಿಸಿ ತುಪ್ಪವಾಗಿರೋದಂತು ಸುಳ್ಳಲ್ಲ. ಹೈಕಮಾಂಡ್ ಕ್ಯಾಬಿನೆಟ್ ವಿಸ್ತರಣೆಗೆ ಅನುಮತಿ ಕೊಡುತ್ತಾ ಇಲ್ವಾ ಅನ್ನೋದು ಸೋಮವಾರದ ನಂತರವೇ ಸ್ಪಷ್ಟವಾಗಲಿದೆ.

ರೂಪ ವಿಶ್ವಾಸ್, ಕರ್ನಾಟಕ ಟಿವಿ, ದಾವಣಗೆರೆ.

- Advertisement -

Latest Posts

Don't Miss