Health Tips: ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಆಗತ್ತೆ ಅಂತಾ ಹಲವರು ಹೇಳುತ್ತಾರೆ. ಏಕೆಂದರೆ, ಇದರಲ್ಲಿರುವ ಬೀಜಗಳು ನಮ್ಮ ಕಿಡ್ನಿಯಲ್ಲಿ ಕಲ್ಲಾಗುವಂತೆ ಮಾಡುತ್ತದೆಯಂತೆ. ಹಾಗಾದ್ರೆ ಟೊಮೆಟೋ ತಿಂದ್ರೆ ಕಿಡ್ನಿಯಲ್ಲಿ ಕಲ್ಲಾಗತ್ತಾ..? ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪಾ ಏನು ಹೇಳಿದ್ದಾರೆ ಅಂತಾ ತಿಳಿಯೋಣ ಬನ್ನಿ..
ವೈದ್ಯರ ಪ್ರಕಾರ, ಟೊಮೆಟೋ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲಾಗುತ್ತದೆ ಅನ್ನೋದು ಜನರ ತಪ್ಪು ಕಲ್ಪನೆ. ಟೊಮೆಟೋ ಬೀಜ, ಕಿಡ್ನಿಗೆ ಹೋಗಿ ಕಲ್ಲಾಗುತ್ತದೆ ಅನ್ನೋದು ತಪ್ಪು ಮಾಹಿತಿ. ಹೀಗೆಲ್ಲಾ ಆಗುವುದಿಲ್ಲ. ಇನ್ನು ಕೆಲವರಿಗೆ ಟೊಮೆಟೋ ತಿಂದು ಕಿಡ್ನಿಯಲ್ಲಿ ಕಲ್ಲಾಗಿರಬಹುದು. ಆದ್ರೆ ಅದು ಹೇಗೆ ಆಗುತ್ತದೆ ಎಂದರೆ, ಸಿಟ್ರಸ್ ಹಣ್ಣುಗಳನ್ನು ತಿಂದ್ರೆ, ಕೆಲವರಿಗೆ ಕಿಡ್ನಿ ಸಮಸ್ಯೆಯಾಗುತ್ತದೆ. ಅಂಥವರಿಗೆ ವೈದ್ಯರು ಟೊಮೆಟೋ ತಿನ್ನಬಾರದು ಎನ್ನುತ್ತಾರೆ. ಅಂಥವರಷ್ಟೇ ಟೊಮೆಟೋ ಸೇವನೆ ಮಾಡಬಾರದು.
ಹಾಗಾಗಿ ಟೊಮೆಟೋ ತಿನ್ನುವುದರಿಂದ ಎಲ್ಲರಿಗೂ ಕಿಡ್ನಿ ಸ್ಟೋನ್ ಆಗುವುದಿಲ್ಲ. ಏಕೆಂದರೆ ಯಾರೂ ಕೂಡ ಒಂದೇ ದಿನ ರಾಶಿ ರಾಶಿ ಟೊಮೆಟೋ ಸೇವನೆ ಮಾಡುವುದಿಲ್ಲ. ಬದಲಾಗಿ, ಒಂದೆರಡು ಟೊಮೆಟೋವನ್ನು ಸಾರು ತಯಾರಿಸುವಾಗ ಬಳಸಿರುತ್ತಾರೆ. ಇದು ತೊಂದರೆ ಇಲ್ಲ. ಇನ್ನು ಅತೀಯಾದರೆ, ಅಮೃತವೂ ವಿಷ ಎಂದಂತೆ, ಅಗತ್ಯಕ್ಕಿಂತ ಹೆಚ್ಚು ಟೊಮೆಟೋ ಸೇವನೆ ಮಾಡಿದರೆ, ಆರೋಗ್ಯ ಸಮಸ್ಯೆ ಎದುರಾಗುವುದು ನಿಶ್ಚಿತ.
ಇನ್ನು ವೈದ್ಯರು ಹೇಳುವಂತೆ, ಏನೇ ಸೇವಿಸಿದರೂ, ನೀವು ಚೆನ್ನಾಗಿ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ, ಮೂತ್ರ ತಡೆಹಿಡಿದಾಗ ಮಾತ್ರ ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಹಾಗಾಗಿ ಚೆನ್ನಾಗಿ ನೀರು ಕುಡಿಯಬೇಕು ಅನ್ನೋದು ವೈದ್ಯರ ಸಲಹೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಈ ವೀಡಿಯೋ ನೋಡಿ..
Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?