Recipe: ಚಪಾತಿ ಅಥವಾ ರೊಟ್ಟಿ ಮಾಡಿದಾಗ, ಹಲವರಿಗೆ ಯಾವಾಗಲೂ ಒಂದೇ ರೀತಿಯ ಪಲ್ಯ ಮಾಡಿ ಮಾಡಿ ಬೋರ್ ಬಂದಿರುತ್ತದೆ. ಹಾಗಾಗಿ ನಾವಿಂದು ಕ್ಯಾಪ್ಸಿಕಂ ಮಸಾಲಾ ಕರಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಮಾಡುವ ವಿಧಾನ: 2 ಸ್ಪೂನ್ ಎಣ್ಣೆ, 1 ಸ್ಪೂನ್ ತುಪ್ಪ ಪ್ಯಾನ್‌ಗೆ ಹಾಕಿ. ಇದು ಬಿಸಿಯಾದ ಬಳಿಕ, 3 ಈರುಳ್ಳಿ ತುಂಡುಗಳನ್ನ ಹಾಕಿ ಹುರಿಯಿರಿ. ಜೊತೆಗೆ 3 ತುಂಡರಿಸಿದ ಕ್ಯಾಪ್ಸಿಕಂ ಸಹ ಹಾಕಿ ಹುರಿಯಿರಿ. ಬಳಿಕ ಈ ಮಿಶ್ರಣವನ್ನು ಒಂದು ಪ್ಲೇಟ್‌ಗೆ ಹಾಕಿ, ಬದಿಗಿರಿಸಿ.
ಈಗ ಅದೇ ಪ್ಯಾನ್‌ಗೆ ಸಣ್ಣಗೆ ಕತ್ತರಿಸಿದ 2 ಈರುಳ್ಳಿ, 3 ಟೊಮೆಟೋ, ಕೊಂಚ ಉಪ್ಪು ಹಾಕಿ ಹುರಿಯಿರಿ. 5 ನಿಮಿಷ ಮಂದ ಉರಿಯಲ್ಲಿ ಇದನ್ನು ಬೇಯಿಸಿ. ಬಳಿಕ ಇದು ತಣ್ಣಗಾದ ಮೇಲೆ, ಇದರಿಂದ ಗ್ರೇವಿಗೆ ಬೇಕಾಗಿರುವ ಪೇಸ್ಟ್ ತಯಾರಿಸಿ. ಮತ್ತೆ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, 2 ಸ್ಪೂನ್ ಎಣ್ಣೆ, 1 ಸ್ಪೂನ್ ತುಪ್ಪ ಹಾಕಿ, ಇದಕ್ಕೆ ಚಿಟಿಕೆ ಜೀರಿಗೆ, ಒದು ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಚಿಟಿಕೆ ಅರಿಶಿನ, ಒಂದು ಸ್ಪೂನ್ ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಕೊಂಚ ಖಾರದ ಪುಡಿ ಹಾಕಿ ಹುರಿಯಿರಿ. ಈಗ ಇದಕ್ಕೆ ರೆಡಿ ಮಾಡಿಟ್ಟುಕೊಂಡ ಪೇಸ್ಟ್, ಉಪ್ಪು, ನೀರು, ಎರಡು ಸ್ಪೂನ್ ಮೊಸರು, ಬೇಕಾದಲ್ಲಿ ಕೊಂಚ ಸಕ್ಕರೆ ಹಾಕಿ, 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಹುರಿದಿಟ್ಟುಕೊಂಡ ತರಕಾರಿಯನ್ನು ಸೇರಿಸಿ, ಮತ್ತೆ ಸ್ವಲ್ಪ ಬೇಯಿಸಿದರೆ, ಕ್ಯಾಪ್ಸಿಕಂ ಮಸಾಲಾ ಕರಿ ರೆಡಿ.
ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಅತ್ಯುತ್ತಮ ಪ್ರಯೋಜನಗಳಿವು.




