Friday, September 20, 2024

Latest Posts

ಕ್ಯಾರೇಟ್ ಬರ್ಫಿ ರೆಸಿಪಿ

- Advertisement -

Recipe: ಕ್ಯಾರೇಟ್‌ನಿಂದ ನೀವು ತರಹೇವಾರಿ ರೆಸಿಪಿ ಮಾಡಿರುತ್ತೀರಿ. ಸಿಹಿ ಪದಾರ್ಥಗಳನ್ನೂ ಮಾಡಿರುತ್ತೀರಿ. ಇಂದು ನಾವು ಕ್ಯಾರೇಟ್ ಬಳಸಿ, ಬರ್ಫಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.

ಪ್ಯಾನ್ ಬಿಸಿ ಮಾಡಿ, 4 ಸ್ಪೂನ್ ತುಪ್ಪ, 5 ಕ್ಯಾರೆಟ್ ತುರಿ ಹಾಕಿ ಹುರಿಯಿರಿ. ಕ್ಯಾರೆಟ್‌ನ ಹಸಿ ವಾಸನೆ ಹೋಗಿ, ಘಮ ಬರುವವರೆಗೂ ಹುರಿಯಿರಿ. ಈಗ ಇದಕ್ಕೆ ಅರ್ಧ ಲೀಟರ್, ಕಾಯಿಸಿ ತಣಿಸಿದ ಹಾಲು ಹಾಕಿ, ಕುದಿಸಿ. ಕ್ಯಾರೇಟ್ ಮಿಶ್ರಣ ಥಿಕ್ ಆದ ಬಳಿಕ, ಇದಕ್ಕೆ 300 ಗ್ರಾಂ ಮಿಲ್ಕ್ ಮೇಡ್, 2ಸ್ಪೂನ್ ಹಾಲಿನ ಪುಡಿ, 2 ಸ್ಪೂನ್ ರೋಸ್ ಸಿರಪ್, 200 ಗ್ರಾಂ ಪನೀರ್, ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಿಶ್ರಣ ಚೆನ್ನಾಗಿ ಮಿಕ್ಸ್ ಆದ ಬಳಿಕ ಕೊಂಚ ಗಟ್ಟಿಯಾಗುತ್ತದೆ. ಇದಕ್ಕೆ ಏಲಕ್ಕಿ ಪುಡಿ ಹಾಕಿ, ಗ್ಯಾಸ್ ಆಫ್ ಮಾಡಿ. ಈ ಮಿಶ್ರಣವನ್ನು ಮಿಕ್ಸಿ ಜೊರ್‌ಗೆ ಹಾಕಿ, ಮತ್ತಷ್ಟು ಪೇಸ್ಟ್ ಮಾಡಿ, ಬರ್ಫಿ ಪ್ಲೇಟ್‌ಗೆ ಹಾಕಿ, ಸೆಟ್ ಮಾಡಿದ್ರೆ, ಬರ್ಫಿ ರೆಡಿ.

ಬೆಳ್ಳುಳ್ಳಿ ಉಪ್ಪಿನಕಾಯಿ ರೆಸಿಪಿ

ಧಾಬಾ ಸ್ಟೈಲ್ ಆಲೂ ಗೋಬಿ ರೆಸಿಪಿ

- Advertisement -

Latest Posts

Don't Miss