ಬೆಳಗಾವಿ ರಾಜಕಾರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ ವಾಕ್ಸಮರ ಜೋರಾಗಿದೆ. ನಾವು ಯಾವುದೋ ಒಂದು ಕಾರಣಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಲಕ್ಷ್ಮಣ್ ಸವದಿಗೆ ಹೆಚ್ಚಿನ ಲಾಭವಾಯ್ತು. ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ, ಬಿಜೆಪಿಯಿಂದ ಪೀಡೆ ಹೋಗಿ ಕಾಂಗ್ರೆಸ್ ಪಾಲಾಗಿದೆ ಎಂದು, ರಮೇಶ್ ಜಾರಕಿಹೊಳಿ ಕುಟಿಕಿದ್ದಾರೆ.
ಅಥಣಿ ಪಟ್ಟಣದಲ್ಲಿ ರಮೇಶ್ ಜಾರಕಿಹೊಳಿ...
ರಾಜ್ಯದ ರಾಜಧಾನಿ ಬೆಂಗಳೂರು ತೀವ್ರ ಜನಸಂಖ್ಯಾ ಸ್ಫೋಟದತ್ತ ಸಾಗುತ್ತಿದೆ. 2031ರ ವೇಳೆಗೆ ನಗರದ ಜನಸಂಖ್ಯೆ ಸುಮಾರು 1.47 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಂತ ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ನಿರ್ದೇಶನಾಲಯ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಇದೆ ವೇಗದಲ್ಲಿ ಸಾಗಿದರೆ, ನಗರದ ಜನಸಂಖ್ಯೆ ಒಂದೂವರೆ ಕೋಟಿ ಗಡಿಯನ್ನು ದಾಟುವುದು ಅನುಮಾನವಿಲ್ಲ ಎನ್ನಲಾಗಿದೆ.
2021ರ ಅಂಕಿಅಂಶಗಳ ಪ್ರಕಾರ,...
ಶಿರಾ ವಸಂತ ನರಸಾಪುರ ಕೈಗಾರಿಕೆಯಿಂದ ಬರುವ ರಾಸಾಯನಿಕ ತ್ಯಾಜ್ಯ ಮಿಶ್ರಿತ ನೀರು, ಶಿರಾ ತಾಲೂಕಿನ ಹುಂಜಿನಾಳ ಕೆರೆ ಮಾರ್ಗವಾಗಿ ಕಳ್ಳಂಬೆಳ್ಳ, ಶಿರಾ ದೊಡ್ಡಕೆರೆ ಹಾಗೂ ಮದಲೂರು ಕೆರೆಗೆ ಹರಿಯುತ್ತಿದೆ. ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗಾರಿಕೆ ಮಾಲೀಕರ ಮೇಲೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ದೂರು ದಾಖಲಿಸಿದ್ದಾರೆ....
ಎಲ್ಲೆಡೆ ಇಂದು ದೀಪಾವಳಿ ಸಂಭ್ರಮ. ಹಬ್ಬಕ್ಕೆ ಸ್ನೇಹಿತರೆಲ್ಲರೂ ಸೇರಿ ಖುಷಿ ಖುಷಿಯಾಗಿ ಪ್ಲಾನ್ ಮಾಡಿದ್ರು. ಎಲ್ಲರು ಸೇರಿ ದೇವಸ್ಥಾನಕ್ಕೆ ಹೋಗಿ ಬರೋಣ ಅನ್ಕೊಂಡು ಹೊರಟಿದ್ದರು. ಅಮಾವಾಸೆಯ ಕರಾಳ ಮಂಗಳವಾರ ಎಂಬಂತೆ ದೇವರ ಪಾದವೇ ಸೇರಿಕೊಂಡಿದ್ದಾರೆ.
ಮಹಾರಾಷ್ಟ್ರದ ಉಮ್ಮರ್ಗಾ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಬೀದರ್ ಜಿಲ್ಲೆಗೆ ಸೇರಿದ ನಾಲ್ವರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ದೀಪಾವಳಿ...
ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ಹೋಬಳಿ ವ್ಯಾಪ್ತಿಯಲ್ಲಿ, ಇತ್ತೀಚೆಗೆ ನಡೆದ ಸರಣಿ ಕಳ್ಳತನಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ದೇಗುಲಗಳು, ಅಂಗಡಿಗಳು, ಹಾಗೂ ಮನೆಗಳಲ್ಲಿ ನಡೆಯುತ್ತಿರುವ ಕಳ್ಳತನಗಳಿಂದ ಸ್ಥಳೀಯರು ನಿದ್ದೆ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದೊಳಗೆ ನಾಲ್ಕು-ಐದು ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಕಳ್ಳರ ಹಾವಳಿಗೆ ಗ್ರಾಮಸ್ಥರು ತತ್ತರಿಸಿದ್ದಾರೆ. ಇತ್ತೀಚಿನ ಘಟನೆಯಾಗಿ, ತಾಲೂಕಿನ ಗಂಜೀಗೆರೆ...
ಮೈಸೂರಿನ ಸಾಲಿಗ್ರಾಮ ತಾಲೂಕಿನ ಭಾಸ್ಕರ ದೇವಾಲಯದ ಬಳಿ ಸೋಮವಾರ ಸಂಭವಿಸಿದ ದಾರುಣ ಘಟನೆದಲ್ಲಿ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಸಾಲಿಗ್ರಾಮ ಪಟ್ಟಣದ ಕೋಟೆ ಬೀದಿಯ ನಿವಾಸಿಗಳಾದ 16 ವರ್ಷದ ಅಯಾನ್, 13 ವರ್ಷದ ಆಜಾನ್ ಹಾಗೂ 14 ವರ್ಷದ ಲುಕ್ಮಾನ್ ಮೃತಪಟ್ಟಿದ್ದಾರೆ.
ಅಯಾನ್ ಮತ್ತು ಆಜಾನ್ ಕೆ.ಆರ್.ಪೇಟೆಯ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದೀಪಾವಳಿ ರಜೆಯ ನಿಮಿತ್ತ...
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹಿನ್ನಲೆ ಹೊಂದಿರುವ ಶಿರೂರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಂದರ್ಭದಂದು ಸ್ಥಳೀಯರು ತೀವ್ರ ಆಕರ್ಷಣೆಗೆ ಒಳಗಾಗುವಂತಹ ದೃಶ್ಯವೊಂದು ಮೂಡಿಬಂದಿದೆ. ಶಿರೂರ ಗ್ರಾಮ ಪ್ರವೇಶದ ಬಾಗಿಲಿನಲ್ಲೇ ಪ್ರತಿಷ್ಠಾಪಿಸಲಾದ ಜನಪರ ನಾಯಕ ಕೆ.ಎಚ್. ಪಾಟೀಲರ ಪ್ರತಿಮೆ ವಿಭಿನ್ನ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಬೆಳಗುತ್ತಾ ಸಂಚರಿಸುವ ಜನರ ಗಮನ ಸೆಳೆಯುತ್ತಿದೆ.
ಕೆ.ಎಚ್. ಪಾಟೀಲ್ ಕರುನಾಡು ಕಂಡ ಸರ್ವ...
ದೀಪಾವಳಿ ಹಬ್ಬದ ಹಿನ್ನೆಲೆ, ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಆಗಸ್ಟ್ ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಹಣ ಪಾವತಿ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಜುಲೈ ತಿಂಗಳ...
ದೀಪಗಳ ಹಬ್ಬ ದೀಪಾವಳಿಯ ಸಂಭ್ರಮಾಚರಣೆಯು ನಗರದಲ್ಲಿ ಹಲವು ಕುಟುಂಬಗಳಿಗೆ ಆತಂಕ ತಂದಿದೆ. ಪಟಾಕಿ ಸಿಡಿತದ ವೇಳೆ ಮೂರು ವರ್ಷದ ಮಗು ಸೇರಿದಂತೆ ಒಟ್ಟು 12 ಮಕ್ಕಳು ಮತ್ತು ಇಬ್ಬರು ಯುವಕರು ಕಣ್ಣಿನ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ಪಟಾಕಿ ಹಚ್ಚುತ್ತಿದ್ದಾಗ, ಮೂರು ವರ್ಷದ ಕಂದನ ಎರಡೂ ಕಣ್ಣುಗಳಿಗೆ ಹೊಗೆ ಮತ್ತು ಕಿಡಿ ತಾಗಿ ಗಂಭೀರವಲ್ಲದ...
ಹಾಸನ ಜಿಲ್ಲೆಯ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನ ಇನ್ನೊಂದು ದಿನವಾದ್ರೆ ಕೊನೆಗೊಳ್ಳಲಿದೆ. ದೇವಿ ದರ್ಶನ ಸೇರಿದಂತೆ ಭಕ್ತರ ಸೌಲಭ್ಯ ಸೌಕರ್ಯಗಳು ಎಲ್ಲವು ಸುಸೂತ್ರವಾಗಿ ನೆರವೇರಿದೆ. ಅಲ್ಲದೆ 20 ಕೋಟಿ ಕಾಣಿಕೆ ಹರಿದು ಬಂದಿದೆ. ಹಾಸನಾಂಬೆಯ ದಾಖಲೆ ಬ್ರೇಕ್ ಆಗಿದೆ.
ಹಿಗಿರೋವಾಗ ಹಾಸನಾಂಬೆ ದೇವಾಲಯದಲ್ಲಿ ಭಕ್ತಿಯೊಂದಿಗೆ ಮಾನವೀಯ ಘಟನೆ ಕಂಡುಬಂದಿದೆ. ದರ್ಶನಕ್ಕಾಗಿ ಆಗಮಿಸಿದ್ದ ಮೈಸೂರಿನ ಮಹಿಳೆಯೊಬ್ಬರು ತಮ್ಮ...