Thursday, September 24, 2026

ಅಂತಾರಾಷ್ಟ್ರೀಯ

ಟ್ವಿಟ್ ರೀಟ್ವೀಟ್ ಮಾಡಿದ್ದಕ್ಕಾಗಿ ಸೌದಿ ಮಹಿಳೆ ಜೈಲು ಪಾಲು

International news: ಟ್ವಿಟರ್‌ನಲ್ಲಿ ಭಿನ್ನ ಮತೀಯರ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಿದ ಆರೋಪದಲ್ಲಿ ಸೌದಿ ಅರೇಬಿಯಾದ ಮಹಿಳೆಯೊಬ್ಬರು 34 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಸಲ್ಮಾ ಅಲ್ ಶೆಹಾಬ್‌ ಜೈಲು ಶಿಕ್ಷೆಗೆ ಗುರಿಯಾದವರು ಎಂದು ತಿಳಿದು ಬಂದಿದೆ. ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿನಿಯಾಗಿದ್ದ ಸಲ್ಮಾ,ಕಳೆದ ವರ್ಷ ರಜೆಯಲ್ಲಿ ಸೌದಿ ಅರೇಬಿಯಾಕ್ಕೆ ಬಂದಿದ್ದ ವೇಳೆ ಬಂಧಿಸಲ್ಪಟ್ಟಿದ್ದರು. ಇದೀಗ ಅವರಿಗೆ...

ಮಗ್ರಿಬ್ ಪ್ರಾರ್ಥನೆ ವೇಳೆ ಕಾಬೂಲ್‌ನ ಮಸೀದಿಯಲ್ಲಿ ಬಾಂಬ್ ಸ್ಫೋಟ : 21 ಜನರ ಸಾವು

International News: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮಸೀದಿಯೊಂದರ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದಾರೆ. ಬಾಂಬ್ ಸ್ಫೋಟಗೊಂಡು 21 ಜನರು ಮೃತಪಟ್ಟಿದ್ದಾರೆ. ಹಾಗೂ 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಖೈರ್ ಖಾನಾ ಪ್ರದೇಶದ ಮಸೀದಿಯಲ್ಲಿ ಜನರು ಮಗ್ರಿಬ್ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿದೆ. ಇನ್ನು ಈ ಬಗ್ಗೆ ಭದ್ರತಾ ಇಲಾಖೆಯ...

ತಾಲಿಬಾನ್ ಸರಕಾರದ ಸಂಭ್ರಮಾಚರಣೆ: ಮಹಿಳೆಯರಿಗೆ ಪ್ರವೇಶ ನಿಷೇಧ

Thaliban: ತಾಲಿಬಾನಿಗರು ಅಫ್ಘಾನಿಸ್ತಾನವನ್ನುಸ್ವಾಧೀನಪಡಿಸಿಕೊಂಡು 1 ವರ್ಷವಾಗಿದ ಹಿನ್ನಲೆ ಸಂಭ್ರಮಾಚರಣೆ ನಡೆಯಿತು. ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ನೂರಾರು ತಾಲಿಬಾನ್ ಹೋರಾಟಗಾರರು ಕಾಬೂಲ್‌ನ ಬೀದಿಗಳಲ್ಲಿ ತೆರೆದ ವಾಹನಗಳಲ್ಲಿ ಸವಾರಿ ಮಾಡಿದರು. ಕೈಯಲ್ಲಿ ಬಂದೂಕುಗಳನ್ನು ಹಿಡಿದುಕೊಂಡು ತಾಲಿಬಾನ್ ನ ನ ಬಿಳಿ ಮತ್ತು ಕಪ್ಪು ಧ್ವಜಗಳನ್ನು ಬೀಸಿದರು.ಹೀಗೆ ಸಂಭ್ರಮಾಚರಿಸಿದರು. ಭಾರತೀಯ ರಾಯಭಾರ ಕಚೇರಿಗೆ ಸಮೀಪವಿರುವ ಹೈ-ಸೆಕ್ಯುರಿಟಿ ಗ್ರೀನ್ ಝೋನ್‌ನಲ್ಲಿರುವ...

ಭಾರತದ ವಿಮಾನ ಪಾಕ್ ಕರಾಚಿ ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್

Karachi: 12 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಭಾರತದ ವಿಮಾನ ಸೋಮವಾರ ಪಾಕಿಸ್ತಾನದ ಕರಾಚಿಯಲ್ಲಿರುವ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ದಲ್ಲಿ ಲ್ಯಾಂಡ್ ಆಗಿದೆ. ಈ ವಿಶೇಷ ವಿಮಾನವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12.10ಕ್ಕೆ (ಪಾಕಿಸ್ತಾನದ ಸಮಯದ ಪ್ರಕಾರ) ಕರಾಚಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಚಾರ್ಟರ್...

ಓಮಿಕ್ರಾನ್ ರೂಪಾಂತರವನ್ನು ಗುರಿಯಾಗಿಸಿಕೊಂಡು ಮಾಡರ್ನಾ ಲಸಿಕೆಗೆ ಯುಕೆ ಅನುಮೋದನೆ

ಯುಕೆ: ಓಮಿಕ್ರಾನ್ ರೂಪಾಂತರ ಮತ್ತು ಮೂಲ ರೂಪವನ್ನು ಗುರಿಯಾಗಿರಿಸಿಕೊಂಡ ಕೋವಿಡ್ -19 ವಿರುದ್ಧ ನವೀಕರಿಸಿದ ಮಾಡರ್ನಾ ಲಸಿಕೆಯನ್ನು ಅನುಮೋದಿಸಿದ ಮೊದಲ ದೇಶವಾಗಿ ಯುಕೆ ಸೋಮವಾರ ಹೊರಹೊಮ್ಮಿದೆ. ಮೆಡಿಸಿನ್ ಮತ್ತು ಹೆಲ್ತ್ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್ಆರ್ಎ) ವಯಸ್ಕರಿಗೆ ಬೂಸ್ಟರ್ ಆಗಿ ಯುಎಸ್ ಔಷಧ ಕಂಪನಿ ಮಾಡರ್ನಾ ತಯಾರಿಸಿದ ಬೈವೆಲೆಂಟ್ ಲಸಿಕೆಯನ್ನು ಅನುಮೋದಿಸಿದೆ. ಬ್ರಿಟನ್ ನಿಯಂತ್ರಕರ ಸುರಕ್ಷತೆ, ಗುಣಮಟ್ಟ...

ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆಯ ಸಹಯೋಗದಿಂದ ಗ್ರಹದ 30 ಕಿ.ಮೀ ಎತ್ತರದಲ್ಲಿ ಹಾರಾಡಿದ ತಿರಂಗ

ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆಯು ವೈಜ್ಞಾನಿಕ ಸಂಸ್ಥೆಯಾಗಿದ್ದು.ಇದರ ಕೊಡುಗೆ ಅಪಾರವಾಗಿದೆ. ಈ ಸಂಸ್ಥೆಯ ಸಹಯೋಗದೊಂದಿಗೆ ದೇಶದ ಸ್ವಾತಂತ್ರಯೋತ್ಸವಕ್ಕೆ ವಿಶೇಷ ಶುಭಾಷಯ ಕೋರಲಾಯಿತು. ಗ್ರಹದ 30 ಕಿಲೋಮೀಟರ್ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಶುಭಾಶಯ ಕೋರಲಾಯಿತು. ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ ಬಾಹ್ಯಾಕಾಶದಿಂದ ಸ್ವಾತಂತ್ರ್ಯ ದಿನದಂದು ವಿಶೇಷವಾಗಿ ಶುಭಕೋರಿದ್ದಾರೆ. ಇದೀಗ ಇದೊಂದು ವಿಶೇಷ ಸ್ಥಾನಮಾನವನ್ನು ಪಡೆದಿಕೊಂಡಿದೆ. ಅಂತರಾಷ್ಟ್ರೀಯ...

ತಾಲಿಬಾನ್ ನಲ್ಲಿ ವಿಧ್ಯಾರ್ಥಿಗಳಿಂದ ಪ್ರತಿಭಟನೆ: ನಾಗರಿಕ ಮೇಲೆ ಗುಂಡಿನ ದಾಳಿ

ತಾಲಿಬಾನ್ ನಲ್ಲಿ ಶಿಕ್ಷಣಕ್ಕಾಗಿ ಮಹಿಳೆಯರಿಂದ ಪ್ರತಿಭಟನೆ.ತಾಲಿಬಾನ್ ಸರಕಾರದ ಏಕಸ್ವಾಮ್ಯತ್ವ ಧೋರಣೆಯನ್ನು ಖಂಡಿಸಿ ಇದೀಗ ಉಗ್ರ ಹೋರಾಟ ನಡೆಯುತ್ತಿದೆ.ಕಾಬೋಲ್ ನಲ್ಲಿ ತೀವ್ರ ತರವಾದ ಹೋರಾಟ ನಡೆಯುತ್ತಿದೆ. ಪ್ರತಿಭಟನಾ ಕಾರರ ವಿರುದ್ಧ ತಾಲಿಬಾನ್ ಸರಕಾರ ಗುಂಡಿನ ದಾಳಿಯನ್ನೇ ನಡೆಸಿದೆ. ಮಹಿಳೆಯರು ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿದು ಕಾಬೊಲ್ ನ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು.ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಲುವಾಗಿ...

ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮೇಲೆ ದಾಳಿ: ವೆಂಟಿಲೇಟರ್ ಚಿಕಿತ್ಸೆಯಲ್ಲಿರುವ ಲೇಖಕ

ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮೇಲೆ ದಾಳಿಯಾಗಿದ್ದು ಸಾವು ಬದುಕಿನ ನಡುವೆ ಲೇಖಕ ಒದ್ದಾಡುತ್ತಿದ್ದಾರೆ. ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಕಾರ್ಯಕ್ರಮ ಆರಂಭವಾಗುವ ವೇಳೆ ದಾಳಿ ನಡೆದಿದೆ. ಸಲ್ಮಾನ್ ರಶ್ದಿಯನ್ನು ಪರಿಚಯಿಸುತ್ತಿದ್ದಾಗ ಆರೋಪಿ ಹದಿ ಮತರ್ ಕಪ್ಪು ಬಟ್ಟೆಯನ್ನು ಧರಿಸಿ ವೇದಿಕೆಯ ಮೇಲೆ ಹಾರಿ ಸಲ್ಮಾನ್ ರಶ್ದಿಗೆ ಹಲವು ಬಾರಿ ಇರಿದಿದ್ದಾನೆ ಎನ್ನಲಾಗಿದೆ....

ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು: ಬಿಹಾರದ 19 ವರ್ಷದ ಕಾರ್ಮಿಕನನ್ನು ಗುಂಡಿಕ್ಕಿ ಹತ್ಯೆ

Jammu and kashmeer: ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಬಂಡೀಪೊರದಲ್ಲಿ ಬಿಹಾರದ ಯುವಕನೊಬ್ಬ ಗುಂಡಿನ  ದಾಳಿಗೆ ಬಲಿಯಾಗಿದ್ದಾನೆ.ಭಯೋತ್ಪಾದಕರು ಬಿಹಾರ ಮೂಲದ 19 ವರ್ಷದ ಯುವಕನನ್ನು ಜಮ್ಮು ಮತ್ತು ಕಾಶ್ಮೀರದ ಬಂಡೀಪೊರದಲ್ಲಿ  ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂಬುವುದಾಗಿ ಶುಕ್ರವಾರ ಪೊಲೀಸರು  ಮಾಹಿತಿ ನೀಡಿದ್ದಾರೆ.ಮಧ್ಯರಾತ್ರಿಯ ಸುಮಾರಿಗೆ ಈ ದಾಳಿ ನಡೆದಿದೆ ಎಂಬುವುದಾಗಿ ಹೇಳಲಾಗುತ್ತಿದೆ. ಗುಂಡಿನ ದಾಳಿಯಲ್ಲಿ ರಕ್ತದ...

ವಿಕಿರಣ ಸೋರಿಕೆ ಭೀತಿಯಲ್ಲಿ ಜಗತ್ತು..!,ಉಕ್ರೇನ್ ಅಣು ಸ್ಥಾವರದ ಮೇಲೆ ರಾಕೆಟ್ ದಾಳಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ

ukraine: ವಿಶ್ವಕ್ಕೆ ಇದೀಗ ವಿಕಿರಣ ಸೋರಿಕೆಯ ಭೀತಿ ಎದುರಾಗಿದೆ.ಕಾರಣ ಯೂರೋಪ್ ನ ಅತಿದೊಡ್ಡ ಅಣುಸ್ಥಾವರದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಈ ಭೀತಿ ಎದುರಾಗಿದೆ. ಮತ್ತೊಂದೆಡೆ ರಷ್ಯಾ ವಶದಲ್ಲಿರುವ ಉಕ್ರೇನ್ ನ ಝಪೊರಿಖ್ ಝಿಯಾ ಅಣುಸ್ಥಾವರದ ಮೇಲೆ ರಾಕೆಟ್ ದಾಳಿ ನಡೆದಿದೆ. ಇದೂ ಆತಂಕಕ್ಕೆ ಕಾರಣವಾಗಿದೆ. ಅಣುವಿಕಿರಣ ಸೋರಿಕೆಯ ಭಯ ಪ್ರಾರಂಭವಾಗಿದ್ದೇ ಯುರೋಪ್ ನ ಅತೀ ದೊಡ್ಡ ಅಣುಸ್ಥಾವರದಲ್ಲಿ...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img