ಬೆಂಗಳೂರು: ಸಂಸದೆ ಸುಮಲತಾ ಇವತ್ತು ದಿಢೀರನೆ ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಕ್ಕೆ ಧನ್ಯವಾದ ಹೇಳಲು ಸುಮಲತಾ ಬಂದಿದ್ದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಸದೆ ಸುಮಲತಾ ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಬಿಜೆಪಿ...
ಮಂಡ್ಯ: ಅಭಿವೃದ್ಧಿ ಕೆಲಸ ಮಾಡಿಸಿ ಅಂತ ಮನವಿ ಮಾಡಿಕೊಂಡ ಜನರ ಮೇಲೆ ಸಚಿವ ತಮ್ಮಣ್ಣ ಎಗರಾಡಿದ್ದಕ್ಕೆ ಸಂಸದೆ ಸುಮಲತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ತಮ್ಮಣ್ಣ ಜನರ ಮೇಲೆ ಅಕ್ರೋಶ ವ್ಯಕ್ತಪಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರೋ ಸಂಸದೆ ಸುಮಲತಾ, ನಿಮಗೆ ಬೇಜಾರಿದ್ರೆ ರಾಜಿನಾಮೆ ಕೊಡಿ, ಕೆಲಸ ಮಾಡೋರು ಇದ್ದಾರೆ. ನಿಮ್ಮ ಹೇಳಿಕೆಯೇ ಸೋಲಿಗೆ ಕಾರಣವಾಗಿರೋದನ್ನ...
ಮಂಡ್ಯ: ಅಭಿವೃದ್ಧಿ ಕೆಲಸ ಮಾಡಿಸಿ ಅಂತ ಕೇಳಿದ್ದಕ್ಕೆ ಗ್ರಾಮಸ್ಥರನ್ನೇ ಸಚಿವ ಡಿ.ಸಿ ತಮ್ಮಣ್ಣ ತರಾಟೆಗೆ ತೆಗೆದುಕೊಂಡ ಘಟನೆ ಮದ್ದೂರಿನಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರಿನ ಮದ್ದೂರಮ್ಮ ಕೆರೆಯಲ್ಲಿ ಬಹುಗ್ರಾಮ ಕುಡಿಯೋ ನೀರಿನ ಯೋಜನೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ ವೇಳೆ ಗ್ರಾಮಸ್ಥರನ್ನು ಡಿ.ಸಿ ತಮ್ಮಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಉದ್ಘಾಟನೆ ವೇಳೆ ಅಲ್ಲಿ ಸೇರಿದ್ದ ಗ್ರಾಮಸ್ಥರು ರಸ್ತೆ ಮತ್ತು...
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿನ ಬಗ್ಗೆ ದೇವೇಗೌಡರು ಪ್ರತಿಕ್ರಿಯಿಸಿದ್ದು ನಾನು ಮತ್ತೆ ಮಣ್ಣಿನಿಂದ ಎದ್ದು ಬರೋ ಶಕ್ತಿ ಹೊಂದಿರುವೆ ಅಂತ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡ, ನಾನು ಸುಖದ ಸುಪ್ಪತ್ತಿಗೆಯಲ್ಲಿ ನಾನು ಬಿಳಿ ಕನ್ನಡಕವೂ ಹಾಕಿಲ್ಲ, ಕರಿ ಕನ್ನಡಕವೂ ಹಾಕಿಲ್ಲ. ಪಕ್ಷಕ್ಕೆ ನಿಷ್ಠೆಯಿಂದಿರಿ ದ್ರೋಹ ಬಗೆಯಬೇಡಿ ಲಿಂಗಾಯತ, ಕುರುಬ, ಒಕ್ಕಲಿಗ...
ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಆರೋಪಗಳ ಸುರಿಮಳೆ ಗೈದಿದ್ದಾರೆ. ಮೈತ್ರಿ ಸರ್ಕಾರ ಮಾಡಿಕೊಂಡಿರೋ ಕಾಂಗ್ರೆಸ್ ಜೆಡಿಎಸ್ ನಲ್ಲೇ ಕಿತ್ತಾಟದಿಂದ ಅಭಿವೃದ್ಧಿಯಾಗ್ತಿಲ್ಲ ಅಂತ ಶೋಭಾ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೆ ಜಿಂದಾಲ್ ಗೆ ಭೂಮಿ ಪರಭಾರೆ ಮಾಡಿರೋದರ ಹಿಂದೆ ಡಿಕೆಶಿ, ಜಾರ್ಜ್ ಕೈವಾಡ ಇದೆ ಅಂತ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಂಸದೆ...
ಚಿಕ್ಕಮಗಳೂರು: ಸಚಿವ ಡಿಕೆಶಿಗೆ ರಾಜ್ಯದ ಸಿಎಂ ಆಗೋ ಯೋಗ ಇದೆ ಅಂತ ಹೇಳಲಾಗ್ತಿದ್ದು, ಇದಕ್ಕಾಗಿ ವಿನಯ್ ಗುರೂಜಿ ಆಶೀರ್ವಾದವನ್ನೂ ಪಡೆದಿದ್ದು ಡಿಕೆಶಿ ಬೆಂಬಲಿಗರು ಖುಷ್ ಆಗಿದ್ದಾರೆ.
ನಿನ್ನೆ ಶೃಂಗೇರಿಯ ಋಷ್ಯಶೃಂಗೇಶ್ವರ ಸನ್ನಿಧಿಯಲ್ಲಿ ವರುಣನ ಆಗಮನಕ್ಕಾಗಿ ಪೂಜೆ ಸಲ್ಲಿಸೋದಕ್ಕೆ ತೆರಳಿದ್ದ ಸಚಿವ ಡಿಕೆಶಿ, ಬಳಿಕ ವಿನಯ್ ಗುರೂಜಿಯನ್ನೂ ಭೇಟಿಯಾಗಿದ್ದಾರೆ. ಶೃಂಗೇರಿಯ ದತ್ತಾತ್ರೇಯ ಪೀಠ ಗೌರಿಗದ್ದೆಯ ಆಶ್ರಮದ ವಿನಯ್...
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ದಿ. ದೇವರಾಜ ಅರಸರ ಪುಣ್ಯ ಸ್ಮರಣೆ
ಹಿನ್ನೆಲೆಯಲ್ಲಿ ಮಾಡಿರೋ ಟ್ವೀಟ್ ನಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ.
ನಿನ್ನೆ ದೇವರಾಜ ಅರಸುರವರ ಪುಣ್ಯ ಸ್ಮರಣೆಯಂದು ಟ್ವೀಟ್ ಮಾಡಿರೋ ಸಿದ್ದರಾಮಯ್ಯ 'ಬಡವರು,ಶೋಷಿತರು ಮತ್ತು ದಮನಿತರ ಪರವಾಗಿ ಕೆಲಸ ಮಾಡಿದವರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ, ಇತಿಹಾಸ ಮಾತ್ರ ನೆನಪಲ್ಲಿಟ್ಟುಕೊಳ್ಳುತ್ತೆ ಎನ್ನುವ ಮಾತು ಡಿ.ದೇವರಾಜರ ವಿಷಯದಲ್ಲಿ...
ಮಂಡ್ಯ: ಮೈತ್ರಿ ಸರ್ಕಾರ ಸುಭದ್ರವಾಗಿರುತ್ತೆ ಏನೂ ಆಗಲ್ಲ, ಇನ್ನು 4 ವರ್ಷ ಕುಮಾರಸ್ವಾಮಿಯವರೇ ಸಿಎಂ ಅಂತ ಮೈತ್ರಿ ನಾಯಕರು ಹೇಳಿಕೊಂಡು ಓಡಾಡ್ತಿದ್ದಾರೆ. ಆದ್ರೆ ಸ್ವತಃ ಸಿಎಂ ಪುತ್ರ ನಿಖಿಲ್ ಕುಮಾರ್ ಚುನಾವಣೆ ಯಾವಾಗ ಬೇಕಾದ್ರೂ ಎದುರಾಗಬಹುದು ನೀವು ರೆಡಿಯಾಗಿರಿ ಅಂತ ಕಾರ್ಯಕರ್ತರಿಗೆ ಸುಳಿವು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಮಂಡ್ಯದಲ್ಲಿ ಕಾರ್ಯಕರ್ತರೊಂದಿಗೆ ಚರ್ಚೆ ವೇಳೆ...
ಮಂಡ್ಯ: ಲೋಕಸಭಾ ಚುನವಾಣೆಯಲ್ಲಿ ಮಂಡ್ಯದಿಂದ
ಸ್ಪರ್ಧಿಸಿದ್ದ ನಿಖಿಲ್ ಕುಮಾರ್ ಮತ್ತೆ ಮಂಡ್ಯಕ್ಕೆ ತೆರಳಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಚುನಾವಣೆಯಲ್ಲಿ ಸೋತರೂ ಧೃತಿಗೆಡದ ನಿಖಿಲ್ ಕುಮಾರ್, ನಾನು ಸೋತಿದ್ದರೂ ಸಹ ಮಂಡ್ಯ ಕ್ಷೇತ್ರವನ್ನು ಬಿಡೋದಿಲ್ಲ ಅಂತ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ಜಿಲ್ಲೆಯ ಮುಖಂಡರೊಂದಿಗೆ ನಿಖಿಲ್ ಕುಮಾರ್ ಸೋಲಿನ ಬಳಿಕ ಚರ್ಚೆ ಮಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ....
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ
ಮರಕೋತಿ ಆಡೋದಕ್ಕೆ ಸರಿ ಅಂತ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಟೀಕಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಚುನಾವಣೆ ವೇಳೆ ಸಿದ್ದರಾಮಯ್ಯ ತಮ್ಮ ಘನತೆಗೆ ತಕ್ಕಂತೆ ಮಾತನಾಡದೆ, ಪ್ರಧಾನಿ ಮೋದಿಯವರಿಂದ ಹಿಡಿದು ಯಡಿಯೂರಪ್ಪರವರ ವರೆಗೂ ಏಕಪಾತ್ರಾಭಿನಯ ಮಾಡಿ ಟೀಕಿಸಿದ್ರು. ಸಿದ್ದರಾಮಯ್ಯ ರಾಹುಲ್ ಗಾಂಧಿಯವರ ಭಟ್ಟಂಗಿ ರೀತಿ ವರ್ತಿಸಿದ್ರು....
ಕಾಲ ಬದಲಾಗುತ್ತಾ ಹೋಗುತ್ತಲೆ, ಸಂಬಂಧಗಳ ಸಮೀಕರಣವೂ ಹೇಗೆ ತಲೆಕೆಳಗಾಗುತ್ತದೆ ಎಂಬುದಕ್ಕೆ ಭಾರತ–ರಷ್ಯಾ ಸಂಬಂಧಗಳು ಹೊಸ ಉದಾಹರಣೆ. ಯಾವಾಗಲೊ ರಷ್ಯಾ ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಲೇಬಲ್...