Tumakuru News: ತುಮಕೂರು: ತುಮಕೂರಿನ ಮಾರ್ಕೋನಹಳ್ಳಿ ಡ್ಯಾಂನ ಕೋಡಿಯಲ್ಲಿ 7 ಮಂದಿ ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಕೂಡ ಮೃತದೇಹಗಳ ಶೋಧಕಾರ್ಯ ಮುಂದುವರೆದಿದೆ.
ಇಂದು ನಾಲ್ಕು ವರ್ಷದ ಮಗು ಮಿಫ್ರಾ ಮೃತದೇಹ, ಕೋಡಿಯಲ್ಲಿ ಹರಿಯುತ್ತಿದ್ದ ನದಿ ದಡದಲ್ಲಿ ಪತ್ತೆಯಾಗಿದೆ. ಇನ್ನು 3 ಮೃತದೇಹ ಪತ್ತೆಯಾಗುವುದು ಬಾಕಿ ಇದ್ದು, ಅದಕ್ಕಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ...
ಉತ್ತರ ಕರ್ನಾಟಕದಲ್ಲಿ ಭೀಮಾ ನದಿಯ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದ ಉಂಟಾದ ಭೀಕರ ಪರಿಸ್ಥಿತಿಗೆ ಸಂಬಂಧಿಸಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತಕ್ಷಣವೇ ಕೇಂದ್ರ ಸರ್ಕಾರದಿಂದ ತುರ್ತು ಪರಿಹಾರ ಮತ್ತು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ತಿಳಿಸಿದಂತೆ, ಭೀಮಾ ನದಿಯ ತೀರದ...
ಕರ್ನಾಟಕ ರಾಜ್ಯದ ಸೆರೆಮನೆಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ದೇಶದ ಇತರೆ ರಾಜ್ಯಗಳ ಜೈಲು ಕೈದಿಗಳಿಗಿಂತ ಹೆಚ್ಚು ಕೂಲಿ ಪಡೆಯುತ್ತಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಈ ದಿನಗೂಲಿ ಬಿಡುಗಡೆ ಆಗದೇ ರಾಜ್ಯದ ಕೈದಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ ಹಾಗೂ ವಂಚನೆ ಹೀಗೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ...
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಬಿಜೆಪಿ ಯುವ ಮುಖಂಡ ವೆಂಕಟೇಶ್ ಬರ್ಬರ ಹತ್ಯೆಯಾಗಿದೆ. 31 ವರ್ಷದ ವೆಂಕಟೇಶ್ ಅವರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಂದಿರುವ ಘಟನೆ ಶುಕ್ರವಾರ ಸಂಭವಿಸಿದೆ. ಈ ಘಟನೆಯಿಂದ ಜಿಲ್ಲೆಯಾದ್ಯಂತ ಆತಂಕ ಮನೆಮಾಡಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವೆಂಕಟೇಶ್ ದೇವಿಕ್ಯಾಂಪ್ನಿಂದ ಗಂಗಾವತಿಗೆ ತನ್ನ ಸ್ನೇಹಿತರೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು...
ಭಾರತದ ಮಾಜಿ ಕ್ರಿಕೆಟಿಗ ಮತ್ತು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರು ಪತ್ನಿ ಚೇತನಾ ಜೊತೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಪ್ರಸಿದ್ಧ ಮೀನಾಕ್ಷಿ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹಿಂದೆ ಮಾಡಿದ ಹರಕೆ ನೆರವೇರಿದ ಹಿನ್ನೆಲೆಯಲ್ಲಿ ಕುಂಬ್ಳೆ ದಂಪತಿ ದೇವಾಲಯಕ್ಕೆ ಆಗಮಿಸಿದ್ದು, ಚೇತನಾ ಕುಂಬ್ಳೆ ದೇವರಿಗೆ ಮಡಿಲಕ್ಕಿ ಅರ್ಪಿಸಿದರು....
ಭಾರತದ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ ಇದೀಗ ಹೊಸ ಹಂತಕ್ಕೆ ಕಾಲಿಡುತ್ತಿದೆ. ಅಕ್ಟೋಬರ್ 8ರಿಂದ ಫೇಸಿಯಲ್ ರೆಕಗ್ನಿಷನ್ ಹಾಗೂ ಫಿಂಗರ್ಪ್ರಿಂಟ್ ಆಧಾರಿತ ದೃಢೀಕರಣದ ಮೂಲಕ ಪಾವತಿ ಮಾಡುವ ಅವಕಾಶವನ್ನು ಭಾರತದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಹೊಸ ವೈಶಿಷ್ಟ್ಯವು ಆಧಾರ್ ವ್ಯವಸ್ಥೆಯಡಿ ಸಂಗ್ರಹಿಸಲಾದ ಬಯೋಮೆಟ್ರಿಕ್ ಡೇಟಾವನ್ನು ಬಳಸುತ್ತದೆ. ಅಂದರೆ, ಬಳಕೆದಾರರ ಮುಖ ಅಥವಾ...
Tumakuru News: ಜಿಲ್ಲೆಯ ವಿಐಪಿಗಳಿಗೆ ಬಳಕೆಯಾಗಬೇಕಿದ್ದ ಸರ್ಕಾರಿ ವಾಹನವನ್ನ ತಮ್ಮ ಪತಿ ಕೆಲಸಕ್ಕೆ ಹೋಗಿ ಬರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬಳಸಿದ್ದಾರೆ ಎಂದು ಕಾರು ಚಾಲಕ ಹರೀಶ್ ಆರೋಪ ಮಾಡಿದರು.
ಅವರು ತುಮಕೂರು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರ ಆರ್ ಟಿ ಐ ಕಾರ್ಯಕರ್ತರ ಗಮನಕ್ಕೆ ಬಂದಾಗ ನಿಯಮಾನುಸಾರ...
Tumakuru: ತುಮಕೂರು: ಪತಿ ವಿದೇಶಕ್ಕೆ ಹೋಗಿ, ಮರಳಿ ಬಂದ ಬಳಿಕ ಪತ್ನಿ ಕಿರುಕುಳ ನೀಡಿದ್ದಾಳೆಂದು ಆರೋಪಿಸಿ ವ್ಯಕ್ತಿಯೋರ್ವ ಲೈವ್ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಲ್ಮಾನ್ ಪಾಷಾ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಕಳೆದ 4 ವರ್ಷದ ಹಿಂದೆ ಈತ...
Tumakuru: ತುಮಕೂರು: ತುಮಕೂರಿನ ಮರ್ಕೋನಹಳ್ಳಿ ಡ್ಯಾಂನಲ್ಲಿ 6 ಮಂದಿ ಜಲಸಮಾಧಿಯಾಗಿದ್ದಾರೆ. ತುಮಕೂರು ನಗರದ ಬಿಜಿ ಪಾಳ್ಯ ಮೂಲದ 6 ಜನ ಮೃತರಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನು ನಾಲ್ವರ ಮೃತದೇಹವನ್ನು ಹುಡುಕಲಾಗುತ್ತಿದೆ.
ಸಾಜಿಯಾ, ಅರ್ಬಿನ್ ಮೃತದೇಹಗಳು ಪತ್ತೆಯಾಗಿದ್ದು, ತಬಾಸುಮ್(45), ಶಬಾನ(44),ಮಿಫ್ರಾ(4),ಮಹಿಬ್(1) ಕಣ್ಮರೆಯಾಗಿದ್ದಾರೆ. ಇವರ ಜೊತೆಗಿದ್ದ ನವಾಜ್ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.
ಇವರೆಲ್ಲ ಕುಣಿಗಲ್ ತಾಲ್ಲೂಕಿನ ಮಾಗಡಿಪಾಳ್ಯ ಗ್ರಾಮಕ್ಕೆ ತಮ್ಮ...
Tumakuru News: ತುಮಕೂರು: ಚಿತ್ರ ನಿರ್ಮಾಪಕನಿಂದ ಮಹಿಳಾ ನಟಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಮಾತನಾಡಿದ್ದಾರೆ.
ಸಂಬಂಧಪಟ್ಟ ಡಿಸಿಪಿಗೆ ಪತ್ರ ಬರೆದು ಸಂಪೂರ್ಣ ಮಾಹಿತಿ ಆಯೋಗಕ್ಕೆ ನೀಡುವಂತೆ ಸೂಚಿಸುತ್ತೇನೆ. ಲೈಂಗಿಕ ಕಿರುಕುಳ ಹಾಗೂ ಮಾನಸಿಕ ಹಿಂಸೆ ಬಗ್ಗೆ ಮಹಿಳೆಯರು ಆಯೋಗಕ್ಕೆ ದೂರು ಕೊಡುತ್ತಿರುವುದು ಸಂತೋಷಕರ ವಿಚಾರ....