ಬಾಯಿಯಲ್ಲಿ ಹುಣ್ಣಾಗುವುದಕ್ಕೆ ಕಾರಣ ಮತ್ತು ಪರಿಹಾರ..

ಹಲವರಿಗೆ ಬಾಯಿಯಲ್ಲಿ ಆಗಾಗ ಹುಣ್ಣಾಗುತ್ತದೆ. ಅದರಿಂದ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗೋದಿಲ್ಲಾ. ಅಲ್ಲದೇ, ಉರಿ ಕೂಡ ಇರುತ್ತದೆ. ಇದಕ್ಕೆ ಎರಡು ಕಾರಣಗಳಿದೆ. ಹಾಗಾದ್ರೆ ಬಾಯಿಯಲ್ಲಿ ಹುಣ್ಣಾಗುವುದಕ್ಕೆ ಕಾರಣಗಳೇನು ಮತ್ತು ಅದಕ್ಕೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ..

ರಾತ್ರಿ ಊಟ ಮಾಡಿದ ಬಳಿಕ ಈ ತಪ್ಪನ್ನ ಎಂದಿಗೂ ಮಾಡಬೇಡಿ..

ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಮುಖದ ಮೇಲೆ ಮೊಡವೆಗಳು, ಬಾಯಿಯಲ್ಲಿ ಹುಣ್ಣಾಗುತ್ತದೆ. ಈ ವೇಳೆ ದೇಹವನ್ನು ತಂಪು ಮಾಡಿಕೊಳ್ಳಬೇಕು. ಅಲ್ಲದೇ ಸರಿಯಾಗಿ ಮಲ ವಿಸರ್ಜನೆಯಾಗದಿದ್ದಲ್ಲಿ ಕೂಡ ಈ ರೀತಿ ಬಾಯಿಯಲ್ಲಿ ಹುಣ್ಣಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಬಾಯಿ ಮುಕ್ಕಳಿಸದೇ, ನೀರು ಕುಡಿಯಬೇಕು. ಕಾಯಿಸಿ, ತಣಿಸಿದ ನೀರನ್ನು ಕುಳಿತುಕೊಂಡು, ಒಂದೊಂದೇ ಗುಟುಕರಿಸಿ ನೀರು ಕುಡಿಯಬೇಕು. ಹೀಗೆ ಮಾಡಿದ್ದಲ್ಲಿ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ.

ಜೀರಿಗೆ ಕಶಾಯ ಕುಡಿಯಿರಿ. ಅಥವಾ ಜೀರಿಗೆಯನ್ನು ತಿಂದರೆ, ಬಾಯಿಯ ಹುಣ್ಣು ಕಡಿಮೆಯಾಗತ್ತೆ. ಎಳನೀರು, ಕಿತ್ತಳೆ, ಮೊಸರು, ಹಾಲಿನ ಸೇವನೆಯಿಂದಲೂ ನೀವು ಬಾಯಿಯ ಹುಣ್ಣಿಗೆ ಮುಕ್ತಿ ಪಡೆಯಬಹುದು. ಅಲ್ಲದೇ, ಹೆಚ್ಚೆಚ್ಚು ನೀರು ಕುಡಿದರೂ ನಿಮ್ಮ ದೇಹದ ಉಷ್ಣತೆ ಕಡಿಮೆಯಾಗಿ, ಬಾಯಿಯ ಹುಣ್ಣಿನ ನೋವಿನಿಂದ ಮುಕ್ತಿ ಸಿಗುತ್ತದೆ.

ದೇಹದಲ್ಲಿ ರಕ್ತ ಕಡಿಮೆಯಾದ್ರೆ ಅದನ್ನ ತಿಳಿಯುವುದು ಹೇಗೆ..? ಅದಕ್ಕೆ ಪರಿಹಾರವೇನು..?

ಇನ್ನು ನಿಮ್ಮ ಬಾಯಿ ಹುಣ್ಣು ಬೇಗ ಕಡಿಮೆಯಾಗಬೇಕು ಅಂದ್ರೆ, ನೀವು ಬಾಯಿಯಲ್ಲಿ ಹುಣ್ಣಿರುವಷ್ಟು ದಿನ ಮಸಾಲೆ ಪದಾರ್ಥ, ಕರಿದ ತಿಂಡಿ, ಖಾರ ತಿಂಡಿ, ಮಾಂಸಾಹಾರವನ್ನೆಲ್ಲ ತಿನ್ನುವುದನ್ನ ಬಿಟ್ಟು ಬಿಡಬೇಕು. ಅಲ್ಲದೇ, ಐಸ್ ಬಳಸಿದ ಜ್ಯೂಸ್, ತಂಪು ಪಾನೀಯ, ಐಸ್‌ಕ್ರೀಮ್ ಸಹ ತಿನ್ನಬಾರದು. ಐಸ್ ನಿಮ್ಮ ನಾಲಿಯನ್ನಷ್ಟೇ ತಂಪು ಮಾಡತ್ತೆ ಹೊರತು, ನಿಮ್ಮ ದೇಹವನ್ನಲ್ಲ. ಐಸ್, ಐಸ್‌ಕ್ರೀಮ್ ತಿಂದಷ್ಟು ದೇಹದಲ್ಲಿ ಉಷ್ಣತೆ ಹೆಚ್ಚಾಗತ್ತೆ.

About The Author