Tuesday, October 15, 2024

Latest Posts

ಗ್ಲೌಸ್ ಬದಲಿಸಬೇಡಿ- ದೇಶವೇ ನಿಮ್ಮ ಪರ ಇದೆ- ಧೋನಿ ಪರ ಕೇಂದ್ರ ಸಚಿವೆ ಬ್ಯಾಟಿಂಗ್

- Advertisement -

ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಧರಿಸಿದ್ದ ಕವಚಗಳ ಮೇಲೆ ಭಾರತೀಯ ಸೇನಾ ಪಡೆಯ ಮುದ್ರೆ ವಿವಾದಕ್ಕೆ ಕಾರಣವಾಗಿರೋ ಮಧ್ಯೆಯೇ, ಮಹೀ ಪರ ಮಾಜಿ ರಕ್ಷಣಾ ಸಚಿವೆ ಬ್ಯಾಟಿಂಗ್ ಮಾಡಿದ್ದಾರೆ.

 ದ.ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಧರಿಸಿದ್ದ ತಮ್ಮ ಹಸಿರು ಗ್ಲೌಸ್ ಮೇಲೆ ಸೇನಾ ಮುದ್ರೆ ಕ್ಯಾಮರಾದಲ್ಲಿ ಕಾಣಿಸಿಕೊಂಡಿತ್ತು. ಇದು ಭಾರತೀಯರ ಮೆಚ್ಚುಗೆಗೆ ಪಾತ್ರವಾದರೆ, ಐಸಿಸಿ  ಮಾತ್ರ ಈ ಮುದ್ರೆಯನ್ನು ತೆಗೆಸಿ ಅಂತ ಬಿಸಿಸಿಐಗೆ ಮನವಿ ಮಾಡಿತ್ತು.

ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಹಾಲಿ ವಿತ್ತ ಸಚಿವೆ ಹಾಗೂ ಮಾಜಿ ರಕ್ಷಣಾ ಸಚಿವೆಯೂ ಆಗಿದ್ದ ನಿರ್ಮಲಾ ಸೀತಾರಾಮನ್ ಧೋನಿ ಪರ ನಿಂತಿದ್ದಾರೆ.

‘ಲೆಫ್ಟನೆಂಟ್ ಕರ್ನಲ್ ಎಂ.ಎಸ್ ಧೋನಿಯವರೇ, ನೀವು ಪ್ಯಾರಾ ರೆಜಿಮೆಂಟ್ ನ ಅಧಿಕಾರಿಯಲ್ಲ. ಹೀಗಾಗಿ ನೀವು ಯಾವುದೇ ಕಾರಣಕ್ಕೂ ಗ್ಲೌಸ್ ಬದಲಿಸೋ ಅವಶ್ಯಕತೆ ಇಲ್ಲ. ಗ್ಲೌಸ್ ಮೇಲಿನ ಆ ಮುದ್ರೆ ಬಲಿದಾನದ ಸಂಕೇತ ಹಾಗೂ ಗೌರವವಾಗಿದೆ. ಇಡೀ ದೇಶವೇ ನಿಮ್ಮಪರ ಇದೆ. ಹೀಗಾಗಿ ನೀವು ಗ್ಲೌಸ್ ಬದಲಿಸೋ ಯಾವುದೇ ಅವಶ್ಯಕತೆ ಇಲ್ಲ’ ಅಂತ ಧೋನಿ ಪರ ಮಾಜಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ಐಸಿಸಿ ರೂಲ್ಸ್ ನೋಡೋದಾದ್ರೆ ಸೇನಾ ಮುದ್ರೆಯಾಗಲಿ, ಧರ್ಮದ ಮುದ್ರೆಯಾಗಲೀ ಜರ್ಸಿ ಮೇಲೆ ಧರಿಸಬಾರದು ಎಂಬ ನಿಯಮವಿದೆ. ಹೀಗಾಗಿ  ಬಿಸಿಸಿಐ ಧೋನಿಗೆ ಗ್ಲೌಸ್ ಬದಲಿಸೋದಕ್ಕೆ ಸೂಚನೆ ನೀಡಿತ್ತು.

ಇನ್ನು ಇದಕ್ಕೆ ಪ್ರತಿಕ್ರಿಯಿಸಿದೋ ಪಾಕಿಸ್ತಾನ, ನೀವು ಇಲ್ಲಿ ಬಂದಿರೋದು ಆಟವಾಡೋದಕ್ಕೆ, ಯಾವುದೇ ಮಹಾಭಾರತ ಯುದ್ಧಕ್ಕಲ್ಲ ಅಂತ ಪಾಕ್ ವಿರೋಧ ವ್ಯಕ್ತಪಡಿಸಿದೆ.

ಪ್ಯಾರಾ ಶೂಟ್ ರೆಜಿಮೆಂಟ್ ನ ಗೌರವ ಕರ್ನಲ್ ಆಗಿರೋ ಮಹೇಂದ್ರ ಸಿಂಗ್ ಧೋನಿ ಸಹಜವಾಗಿಯೇ ಈ ಮುದ್ರೆಯನ್ನು ಗ್ಲೌಸ್ ಮೇಲೆ ಧರಿಸಿ ದೇಶಾಭಿಮಾನ ಮೆರೆದಿದ್ರು.

ಸೇಲ್ಸ್ ಗರ್ಲ್ ಆಗಿದ್ದ ನಿರ್ಮಲಾ ಸೀತಾರಾಮನ್ ಕೇಂದ್ರ ಸಚಿವೆಯಾಗಿದ್ದು ಹೇಗೆ ಗೊತ್ತಾ…?? ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss