- Advertisement -
ನವದೆಹಲಿ: ಪ್ರಧಾನಿಯಾಗಿ ಎರಡನೇ ಬಾರಿಗೆ ನರೇಂದ್ರ ಮೋದಿ ನಿನ್ನೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ಇಂದು ನಡೆದ ಮೊದಲ ಸಚಿವ ಸಂಪುಟ ಸಭೆಯ ಬಳಿಕ ನೂತರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಅಮಿತ್ ಶಾ ಗೃಹ ಖಾತೆ, ರಾಜನಾಥ್ ಸಿಂಗ್ ರಕ್ಷಣಾ ಖಾತೆ ಜವಾಬ್ದಾರಿ ಪಡೆದರೆ, ನಿರ್ಮಲಾ ಸೀತಾರಾಮನ್ ರವರಿಗೆ ಹಣಕಾಸು, ಪಿಯೂಶ್ ಗೋಯಲ್ ರೈಲ್ವೆ ಇಲಾಖೆ, ಜೈಶಂಕರ್ ರಿಗೆ ವಿದೇಶಾಂಗ ಇಲಾಖೆ ಖಾತೆ ನೀಡಲಾಗಿದೆ.
ಖಾತೆ ಹಂಚಿಕೆ ವಿವರ ಈ ಕೆಳಗಿನಂತಿದೆ.
- ಅಮಿತ್ ಶಾ- ಗೃಹ ಇಲಾಖೆ
- ರಾಜನಾಥ್ ಸಿಂಗ್- ರಕ್ಷಣಾ ಇಲಾಖೆ, ಕಾರ್ಪೊರೇಟ್ ಅಫೇರ್ಸ್
- ನಿರ್ಮಲಾ ಸೀತಾರಾಮನ್- ಹಣಕಾಸು ಇಲಾಖೆ
- ಪಿಯೂಶ್ ಗೋಯಲ್- ರೈಲ್ವೇ , ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
- ಎಸ್. ಜೈಶಂಕರ್- ವಿದೇಶಾಂಗ ಇಲಾಖೆ
- ಡಿ.ವಿ ಸದಾನಂದ ಗೌಡ- ರಾಸಾಯನಿಕ, ರಸಗೊಬ್ಬರ ಇಲಾಖೆ
- ಡಾ.ಹರ್ಷವರ್ಧನ್- ಆರೋಗ್ಯ ಇಲಾಖೆ
- ಪ್ರಕಾಶ್ ಜಾವಡೇಕರ್- ಪರಿಸರ ಇಲಾಖೆ, ಅರಣ್ಯ, ಹವಾಮಾನ, ವರ್ತಾ ಇಲಾಖೆ
- ನಿತಿನ್ ಗಡ್ಕರಿ- ಭೂ ಸಾರಿಗೆ, ಹೆದ್ದಾರಿ ಇಲಾಖೆ
- ರಾಮ್ ವಿಲಾಸ್ ಪಾಸ್ವಾನ್- ಆಹಾರ ಮತ್ತು ನಾಗರಿಕ ಸರಬರಾಜು , ಗ್ರಾಹಕ ವ್ಯವಹಾರ ಇಲಾಖೆ
- ನರೇಂದ್ರ ಸಿಂಗ್ ತೋಮರ್-ಕೃಷಿ ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ಥಾವರ್ ಚಂದ್ ಗೆಹ್ಲೋಟ್-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- ರಮೇಶ್ ಪೋಖ್ರಿಯಾಲ್- ಮಾನವ ಸಂಪನ್ಮೂಲ ಅಭಿವೃದ್ಧಿ
- ಅರ್ಜುನ್ ಮುಂಡಾ- ಬುಡಕಟ್ಟು ವ್ಯವಹಾರಗಳ ಖಾತೆ
- ಹರ್ಸಿಮ್ರತ್ ಕೌರ್ ಬಾದಲ್- ಆಹಾರ ಸಂಸ್ಕರಣಾ ಖಾತೆ
- ರವಿಶಂಕರ್ ಪ್ರಸಾದ್- ಕಾನೂನು, ಸಂವಹನ, ಐಟಿ ಇಲಾಖೆ
- ಸ್ಮೃತಿ ಇರಾನಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಜವಳಿ ಖಾತೆ
- ಹರ್ಷವರ್ಧನ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ
- ಧರ್ಮೇಂದ್ರ ಪ್ರಧಾನ್- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಉಕ್ಕು
- ಮುಕ್ತಾರ್ ಅಬ್ಬಾಸ್ ನಕ್ವಿ- ಅಲ್ಪಸಂಖ್ಯಾತ ವ್ಯವಹಾರಗಳು
- ಪ್ರಹ್ಲಾದ್ ಜೋಶಿ, ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿಗಾರಿಕೆ
- ಮಹೇಂದ್ರನಾಥ್ ಪಾಂಡೆ-ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ
- ಅರವಿಂದ್ ಗಣಪತ್ ಸಾವಂತ್- ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
- ಗಿರಿರಾಜ್ ಸಿಂಗ್- ಪಶುಪಾಲನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ
- ಗಜೇಂದ್ರ ಸಿಂಗ್ ಶೆಖಾವತ್- ಜಲ ಶಕ್ತಿ
- ಫಗ್ಗನ್ ಸಿಂಗ್ ಕುಲಸ್ತೆ- ಉಕ್ಕು ಇಲಾಖೆ (ರಾಜ್ಯ ಖಾತೆ )
- ಅಶ್ವಿನ್ ಕುಮಾರ್ ಚೌಬೆ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ರಾಜ್ಯ ಖಾತೆ)
- ಅರ್ಜುನ್ ರಾಮ್ ಮೇಘವಾಲ್, ಸಂಸದೀಯ ವ್ಯವಹಾರಗಳು, ಬೃಹತ್ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ (ರಾಜ್ಯ ಖಾತೆ)
- ವಿ.ಕೆ ಸಿಂಗ್, ಭೂ ಸಾರಿಗೆ ಮತ್ತು ಹೆದ್ದಾರಿ (ರಾಜ್ಯ ಖಾತೆ)
- ಕೃಷ್ಣ ಪಾಲ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ರಾಜ್ಯ ಖಾತೆ)
- ದಾನ್ವೆರಾವ್ ಸಾಹೇಬ್ ದಾದಾ ರಾವ್-ಗ್ರಾಹಕ ಸೇವೆ ಮತ್ತು ಆಹಾರ ಮತ್ತು ನಾಗರೀಕ ಸೌಲಭ್ಯ (ರಾಜ್ಯ ಖಾತೆ)
- ಜಿ.ಕೃಷ್ಣ ರೆಡ್ಡಿ- ಗೃಹ ಇಲಾಖೆ (ರಾಜ್ಯ ಖಾತೆ)
- ಪುರುಷೋತ್ತಮ್ ರೂಪಾಲ- ಕೃಷಿ ಮತ್ತು ರೈತ ಕಲ್ಯಾಣ, (ರಾಜ್ಯ ಖಾತೆ)
- ರಾಮ್ ದಾಸ್ ಅಠಾವಳೆ- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ರಾಜ್ಯ ಖಾತೆ)
- ಸಾಧ್ವಿ ನಿರಂಜನ್ ಜ್ಯೋತಿ- ಗ್ರಾಮೀಣಾಭಿವೃದ್ಧಿ (ರಾಜ್ಯ ಖಾತೆ)
- ಬಾಬುಲ್ ಸುಪ್ರಿಯೋ- ಪರಿಸರ, ಅರಣ್ಯ ಮತ್ತು ಹವಾಮಾನ, (ರಾಜ್ಯ ಖಾತೆ)
- ಸಂಜೀವ್ ಕುಮಾರ್ ಬಾಲ್ಯಾನ್-ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ (ರಾಜ್ಯ ಖಾತೆ)
- ಧೋತ್ರಿ ಸಂಜಯ್ ಶ್ಯಾಮ್ ರಾವ್-ಮಾನವ ಸಂಪನ್ಮೂಲಾಭಿವೃದ್ಧಿ, ಸಂವಹನ, ಐಟಿ (ರಾಜ್ಯ ಖಾತೆ)
- ಅನುರಾಗ್ ಸಿಂಗ್ ಠಾಕೂರ್- ಹಣಕಾಸು, ಕಾರ್ಪೊರೇಟ್ ವ್ಯವಹಾರಗಳು (ರಾಜ್ಯ ಖಾತೆ)
- ಸುರೇಶ್ ಅಂಗಡಿ- ರೈಲ್ವೇ , (ರಾಜ್ಯ ಖಾತೆ)
- ನಿತ್ಯಾನಂದ ರಾಯ್- ಗೃಹ ಇಲಾಖೆ (ರಾಜ್ಯ ಖಾತೆ)
- ರತನ್ ಲಾಲ್ ಕಠಾರಿಯಾ- ಜಲಶಕ್ತಿ , ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ರಾಜ್ಯ ಖಾತೆ)
- ವಿ.ಮುರಳೀಧರನ್, ವಿದೇಶಾಂಗ ವ್ಯವಹಾರ, ಸಂಸದೀಯ ವ್ಯವಹಾರ(ರಾಜ್ಯ ಖಾತೆ)
- ರೇಣುಕಾ ಸಿಂಗ್ ಸರೂಟಾ-ಬುಡಕಟ್ಟು ವ್ಯವಹಾರಗಳು (ರಾಜ್ಯ ಖಾತೆ)
- ಸೋಮ್ ಪ್ರಕಾಶ್ – ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ರಾಜ್ಯ ಖಾತೆ)
- ರಾಮೇಶ್ವರ್ ತೇಲಿ- ಆಹಾರ ಸಂಸ್ಕರಣೆ(ರಾಜ್ಯ ಖಾತೆ)
- ಪ್ರತಾಪ್ ಚಂದ್ರ ಸಾರಂಗಿ- ಸಣ್ಣ ಮತ್ತು ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ (ರಾಜ್ಯ ಖಾತೆ)
- ಕೈಲಾಶ್ ಚೌಧರಿ- ಕೃಷಿ ಮತ್ತು ರೈತೋಪಯೋಗಿ (ರಾಜ್ಯ ಖಾತೆ)
- ದೇವಶ್ರೀ ಚೌಧರಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ (ರಾಜ್ಯ ಖಾತೆ)
- ಸಂತೋಷ್ ಗಂಗ್ವಾರ್- ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ಖಾತೆ)
- ರಾವ್ ಇಂದ್ರಜಿತ್ ಸಿಂಗ್- ಸಂಖ್ಯಾಶಾಸ್ತ್ರ, ಯೋಜನಾ ಅನುಷ್ಠಾನ (ಸ್ವತಂತ್ರ ಖಾತೆ)
- ಶ್ರೀಪಾದ್ ನಾಯಕ್- ಆಯುರ್ವೇದ, ಯೋಗ,ನ್ಯಾಚುರೇಪತಿ, ಆಯುಷ್(ಸ್ವತಂತ್ರ ಖಾತೆ)
- ಡಾ.ಜಿತೇಂದ್ರ ಸಿಂಗ್- ಈಶಾನ್ಯ ಪ್ರದೇಶ (ಸ್ವತಂತ್ರ ಖಾತೆ) ಪ್ರಧಾನ ಮಂತ್ರಿಗಳ ಸಚಿವಾಲಯ, ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ( ರಾಜ್ಯ ಖಾತೆ )
- ಕಿರಣ್ ರಿಜಿಜು- ಯುವಜನ ಸಬಲೀಕರಣ ಮತ್ತು ಕ್ರೀಡೆ (ಸ್ವತಂತ್ರ ಖಾತೆ), ಅಲ್ಪಸಂಖ್ಯಾತ ವ್ಯವಹಾರಗಳು ( ರಾಜ್ಯ ಖಾತೆ)
- ಪ್ರಹ್ಲಾದ್ ಪಟೇಲ್- ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ (ಸ್ವತಂತ್ರ್ಯ, ರಾಜ್ಯ)
- ರಾಜ್ ಕುಮಾರ್- ಇಂಧನ ಖಾತೆ (ಸ್ವತಂತ್ರ ಖಾತೆ)
- ಹರ್ದೀಪ್ ಸಿಂಗ್ ಪುರಿ- ವಸತಿ ಮತ್ತು ನಗರಾಭಿವೃದ್ಧಿ (ಸ್ವತಂತ್ರ ಖಾತೆ) ವಾಣಿಜ್ಯ ಮತ್ತು ಕೈಗಾರಿಕೆ (ರಾಜ್ಯ ಖಾತೆ)
- ಮನ್ ಸುಖ್ ಲಾಲ್ ಮಾಂಡವೀಯ- ಶಿಪ್ಪಿಂಗ್ (ಸ್ವತಂತ್ರ ಖಾತೆ), ರಾಸಾಯನಿಕ ಮತ್ತು ರಸಗೊಬ್ಬರ (ರಾಜ್ಯ ಖಾತೆ)
ಸನ್ಯಾಸಿಯಾಗಲು ಹೊರಟಿದ್ದವರು ಕೇಂದ್ರ ಮಂತ್ರಿಯಾಗಿದ್ದು ಹೇಗೆ ಗೊತ್ತಾ…?ಮಿಸ್ ಮಾಡದೇ ಈ ವಿಡಿಯೋ ನೋಡಿ.
- Advertisement -