ಸ್ನೇಹಿತರು ಅತ್ಯುತ್ತಮರಾಗಿದ್ದರೆ, ಜೀವಕ್ಕೆ ಜೀವ ಕೊಡಲೂ ಕೂಡ ತಯಾರಿದ್ದರೆ, ರಕ್ತ ಸಂಬಂಧಕ್ಕಿಂತಲೂ ಅಂಥ ಸ್ನೇಹ ಸಂಬಂಧ ಬಲಿಷ್ಟವಾಗಿರುತ್ತದೆ. ಹಲವರಿಗೆ ಸ್ನೇಹಿತರು ಸಂಬಂಧಿಕರಿಗಿಂತಲೂ ಆತ್ಮೀರಾಗಿರುವ ಎಷ್ಟೋ ಉದಾಹರಣೆಯನ್ನ ನಾವು ನೀವು ನೋಡಿರುತ್ತೇವೆ. ಆದ್ರೆ ಚಾಣಕ್ಯರ ಪ್ರಕಾರ, ನೀವು ಕೆಲರೊಂದಿಗೆ ಸ್ನೇಹ ಮಾಡುವಂತಿಲ್ಲ. ಅವರನ್ನು ಪೂರ್ತಿಯಾಗಿ ನಂಬುವಂತಿಲ್ಲ. ಹಾಗಾದ್ರೆ ಎಂಥವರೊಂದಿಗೆ ನಾವು ಸ್ನೇಹ ಮಾಡಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಈ 4 ಸ್ಥಳದಲ್ಲಿ ದುಡ್ಡು ಖರ್ಚು ಮಾಡೋಕ್ಕೆ ಕಂಜೂಸುತನ ಮಾಡಬೇಡಿ..
ಮೊದಲನೇಯದು ಆಸೆ ಬುರುಕ ವ್ಯಕ್ತಿ. ನೀವು ಅಪ್ಪಿ ತಪ್ಪಿಯೂ ಆಸೆ ಬುರುಕ ವ್ಯಕ್ತಿಯೊಂದಿಗೆ ಎಂದಿಗೂ ಸ್ನೇಹ ಮಾಡಬೇಡಿ ಅಂತಾರೆ ಚಾಣಕ್ಯರು. ನೀವು ಸ್ನೇಹ ಮಾಡಿದ ವ್ಯಕ್ತಿ ಆಸೆ ಬುರುಕನಾಗಿದ್ದರೆ, ಅಂಥವರ ಸ್ನೇಹ ಆದಷ್ಟು ಬೇಗ ಬಿಡುವುದು ಒಳಿತು. ಯಾಕಂದ್ರೆ, ಆ ವ್ಯಕ್ತಿ ತನ್ನ ಸುಖ ಸಂತೋಷಕ್ಕಾಗಿ ನಿಮ್ಮನ್ನು ಎಂಥ ತೊಂದರೆಗಾದರೂ ಸಿಕ್ಕಿ ಹಾಕಿಸುವುದಕ್ಕೆ ತಯಾರಿರುತ್ತಾನೆ. ಹಾಗಾಗಿ ಆಸೆ ಬುರುಕರೊಂದಿಗೆ ಸ್ನೇಹ ಮಾಡಬಾರದು.
ಎರಡನೇಯದಾಗಿ ಕೆಟ್ಟ ಕೆಲಸ ಮಾಡುವ ವ್ಯಕ್ತಿಯಿಂದ ದೂರವಿರಿ. ಯಾಕಂದ್ರೆ ಕೆಟ್ಟ ಕೆಲಸ ಮಾಡುವ ವ್ಯಕ್ತಿಯ ಜೊತೆ ನೀವು ಸ್ನೇಹ ಮಾಡಿದ್ರೆ, ನೀವು ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಅಲ್ಲದೇ, ಕೆಟ್ಟ ಕೆಲಸ ಮಾಡುವವರು, ತಮಗೇನಾದರೂ ಕಷ್ಟ ಬಂದಾಗ, ನಿಮ್ಮೊಂದಿಗೂ ಕೂಡ ಕೆಟ್ಟದಾಗಿ ವರ್ತಿಸುವ ಸಾಧ್ಯತೆ ಇರುತ್ತದೆ. ಇಂಥವರು ಸರ್ಪಕ್ಕಿಂತ ವಿಷಕಾರಿ ಅಂತಾರೆ ಚಾಣಕ್ಯರು.
ಪತಿಯಾದವನು ಪತ್ನಿಗೆ ಕೆಲ ಸಿಕ್ರೇಟ್‌ಗಳನ್ನು ಹೇಳಬಾರದಂತೆ..!
ಮೂರನೇಯವರು ನಿಮ್ಮನ್ನು ಹೊಗಳುವವರು. ನಿಮಗೆ ಯಾರಾದರೂ ಹೊಗಳಿದರೆ, ಒಳಗೊಳಗೆ ಖುಷಿಯಾಗೋದು ನಿಜ. ಆದ್ರೆ ನೀವು ಹೊಗಳುವವರ ಜೊತೆ ಸ್ನೇಹ ಮಾಡಿದ್ರೆ, ಅಂಥವರು ನಿಮ್ಮನ್ನು ಉದ್ಧಾರವಾಗಲೂ ಬಿಡಲ್ಲ. ಬದಲಾಗಿ ನಿಮ್ಮ ಅವನತಿಗೆ ಕಾರಣರಾಗುತ್ತಾರೆ. ನಿಮ್ಮ ಮುಂದೆ ನಿಮ್ಮನ್ನು ಹೊಗಳುವವರು, ನಿಮ್ಮ ಹಿಂದೆ ನಿಮ್ಮ ಬಗ್ಗೆ ಆಡಿಕೊಳ್ಳುವವರಾಗಿರುತ್ತಾರೆ. ಹಾಗಾಗಿ ನಿಮ್ಮನ್ನು ಹೊಗಳುವವರನ್ನ ಎಂದಿಗೂ ದೂರವಿಡಿ.
ನಾಲ್ಕನೇಯವರು ಅಹಂಕಾರಿಗಳು. ನೀವು ಸ್ನೇಹ ಮಾಡಿದ ಕೆಲ ದಿನಗಳಲ್ಲೇ ನಿಮ್ಮ ಸ್ನೇಹಿತರು ಎಂಥವರು ಅಂತಾ ತಿಳಿದುಕೊಳ್ಳಬಹುದು. ನಿಮ್ಮ ಸ್ನೇಹಿತರೇನಾದ್ರೂ ಅಹಂಕಾರಿಗಳಾಗಿದ್ದಲ್ಲಿ, ನೀವು ಅವರ ಸ್ನೇಹ ಬಿಡುವುದು ಒಳ್ಳೆಯದು. ಯಾಕಂದ್ರೆ ಅಹಂಕಾರಿಗಳು ನಿಮ್ಮ ಉತ್ತಮ ಸ್ನೇಹಿತರಾಗಲು ಸಾಧ್ಯವೇ ಇಲ್ಲ. ಅವರು ಎಂದಿಗಾದರೂ, ನಿಮ್ಮನ್ನು ಅವಮಾನಿಸುವುದು ಖಡಾ ಖಂಡಿತ.
ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ
ಐದನೇಯವರು ಧರ್ಮಹೀನರು. ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಅಂದರೆ, ನಾವು ಧರ್ಮವನ್ನು ಪರಿಪಾಲಿಸಿದರೆ, ಅದು ನಮ್ಮ ರಕ್ಷಣೆ ಮಾಡುತ್ತದೆ ಎಂದರ್ಥ. ಹಾಗಾಗಿ ಧರ್ಮವನ್ನು ಪರಿಪಾಲಿಸದ, ಧರ್ಮವನ್ನು ಬೈಯ್ಯುವ ಮನುಷ್ಯನೊಂದಿಗೆ ಎಂದಿಗೂ ಸ್ನೇಹ ಮಾಡಬೇಡಿ. ಯಾಕಂದ್ರೆ ಚಾಣಕ್ಯರ ಪ್ರಕಾರ, ಧರ್ಮಭ್ರಷ್ಟ ಎಂದಿಗೂ ಉತ್ತಮ ಸ್ನೇಹಿತನಾಗಲು ಸಾಧ್ಯವಿಲ್ಲ.
ಆರನೇಯವರು ಚಾಡಿ ಹೇಳುವವರು. ಕೆಲವರು ಯಾವಾಗಲೂ ಬೇರೆಯವರನ್ನ ಹೀಯಾಳಿಸುತ್ತಿರುತ್ತಾರೆ. ಬೈಯ್ಯುತ್ತಿರುತ್ತಾರೆ. ಅವರಿವರ ಬಗ್ಗೆ ಚಾಡಿ ಹೇಳುತ್ತಿರುತ್ತಾರೆ. ಅವರಿಗೆಷ್ಟೇ ಬುದ್ಧಿ ಹೇಳಿದರೂ ಅವರು ಕೇಳೋದಿಲ್ಲ. ಯಾಕಂದ್ರೆ ಅವರ ಸ್ವಭಾವವೇ ಅದಾಗಿರುತ್ತದೆ. ಅವರು ತಮ್ಮನ್ನು ತಾವು ಬುದ್ಧಿವಂತರೆಂದು ಮತ್ತು ಇತರರನ್ನು ತುಚ್ಛರೆಂದು ಭಾವಿಸುತ್ತಾರೆ. ಅಲ್ಲಿಂದಿಲ್ಲಿಗೆ ಚಾಡಿ ಹೇಳುವವರನ್ನು ನೀವು ಸ್ನೇಹಿತರನ್ನಾಗಿ ಮಾಡಿಕೊಂಡರೆ, ನಿಮ್ಮ ಬಗ್ಗೆಯೂ ಇಲ್ಲಸಲ್ಲದ್ದನ್ನು ಹೇಳುತ್ತಾರೆ.