Tuesday, October 7, 2025

Latest Posts

ಪುರುಷರು ಇಂಥ ಕೆಲಸ ಎಂದಿಗೂ ಮಾಡಬಾರದು ಅಂತಾರೆ ಚಾಣಕ್ಯರು..

- Advertisement -

ಚಾಣಕ್ಯರು ಜೀವನದ ಬಗ್ಗೆ ಹಲವಾರು ನೀತಿಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದರಲ್ಲಿ ಕೆಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಇಂದು ನಾವು ಚಾಣಕ್ಯರು ಕೆಲ ಹೆಂಗಸರ ಜೊತೆ ಸಂಬಂಧ ಬೆಳೆಸಬಾರದು ಅಂತಾ ಹೇಳಿದ್ದಾರೆ. ಹಾಗೆ ಮಾಡುವುದು ಪಾಪದ ಕೆಲಸ ಅಂದಿದ್ದಾರೆ ಚಾಣಕ್ಯರು. ಹಾಗಾದ್ರೆ ಪುರುಷರು ಎಂಥ ಕೆಲಸ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕೆಟ್ಟ ಕೆಲಸಗಳಲ್ಲೇ ಅತೀ ಕೆಟ್ಟದ್ದೆಂದರೆ, ಕಟ್ಟಿಕೊಂಡ ಪತ್ನಿಗೆ ಮೋಸ ಮಾಡುವುದು. ಇದು ಹೆಣ್ಣಿಗೂ ಅನ್ವಯಿಸುತ್ತದೆ. ತಮ್ಮ ಜೀವನ ಸಂಗಾತಿಯೊಂದಿಗೆ ಸುಖಕರ ಜೀವನ ಮಾಡುವುದನ್ನ ಬಿಟ್ಟು, ಹೊರಗಿನ ಸಂಬಂಧ ಇಟ್ಟುಕೊಂಡು ಜೀವನವನ್ನೇ ಹಾಳುಮಾಡಿಕೊಂಡು ಬಿಡ್ತಾರೆ. ಹಾಗಾಗಿ ಇಂಥ ಕೆಲಸ ಮಾಡುವುದು ತಪ್ಪು ಅಂತಾರೆ ಚಾಣಕ್ಯರು.

ಅದರಲ್ಲೂ ಕೆಲ ಮಹಿಳೆಯರೊಂದಿಗೆ ಸಂಬಂಧ ಇರಿಸಿಕೊಳ್ಳಬಾರದು. ಮೊದಲನೇಯದಾಗಿ ಅವಿವಾಹಿತ ಹೆಣ್ಣಿನೊಂದಿಗೆ ಸಂಬಂಧ ಇರಿಸಿಕೊಂಡರೆ, ನೀವು ಮುಂದೆ ಅವರನ್ನು ವಿವಾಹವಾಗಬೇಕಾಗುತ್ತದೆ. ಆಗ ನಿಮ್ಮ ಮೊದಲ ವೈವಾಹಿಕ ಸಂಬಂಧ ಮುರಿದು ಬೀಳುತ್ತದೆ. ಇನ್ನು ವಿಧವೆ ಸ್ತ್ರೀಯೊಂದಿಗೂ ಸಂಬಂಧವಿರಿಸಿಕೊಳ್ಳಬಾರದು.

ವಿಧವೆಗೆ ಬಾಳು ಕೊಡುವುದು ತಪ್ಪಲ್ಲ. ಆದ್ರೆ ನೀವು ಅವಿವಾಹಿತರಾಗಿದ್ದರೆ, ವಿಧವೆಯನ್ನ ನೀವು ವಿವಾಹವಾಗಬಹುದು. ಆದ್ರೆ ವಿಧವೆಯೊಂದಿಗೆ ಬರೀ ದೈಹಿಕ ಸಂಬಂಧವಿರಿಸಿಕೊಳ್ಳುವ ಪಾಪ ಮಾಡಬಾರದು ಅಂತಾರೆ ಚಾಣಕ್ಯರು. ಇನ್ನು ವೇಶ್ಯೆಯೊಂದಿಗೆ ಸಂಬಂಧವಿರಿಸಿಕೊಳ್ಳಬಾರದು. ಆಕೆಗೆ ಇರುವ ರೋಗ ನಿಮಗೆ ಅಂಟಿ, ಮುಂದೆ ನಿಮ್ಮ ಮನೆ ಮಂದಿಗೂ ಆ ರೋಗ ಅಂಟುವ ಸಾಧ್ಯತೆ ಇರುವ ಕಾರಣದಿಂದ, ವೇಶ್ಯೆಯೊಂದಿಗೆ ಸಂಬಂಧವಿರಿಸಬಾರದು.

ಇನ್ನು ಕೊನೆಯದಾಗಿ ವಿವಾಹಿತ ಪುರುಷರು, ಅಥವಾ ಅವಿವಾಹಿತರೇ ಆಗಲಿ, ಸ್ನೇಹಿತನ ಪತ್ನಿಯೊಂದಿಗೆ ಅಥವಾ ವಿರೋಧಿಯ ಪತ್ನಿಯೊಂದಿಗೆ ಸಂಬಂಧವನ್ನು ಇರಿಸಿಕೊಳ್ಳಬಾರದು ಅಂತಾರೆ ಚಾಣಕ್ಯರು. ಇವೆರಡು ಕೆಲಸ ಘೋರ ಪಾಪಕ್ಕೆ ಸಮಾನವಾಗಿದೆ.

- Advertisement -

Latest Posts

Don't Miss