ಚಾಣಕ್ಯರು ತಮ್ಮ ಅನುಭವವನ್ನು ಕುರಿತು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅವರು ಹೇಳಿದ ನೀತಿಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ, ನಮ್ಮ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ಇಂದು ಕೂಡ, ಚಾಣಕ್ಯರು ಎಂಥ ಸಮಯ ಬಂದರೂ ಕೆಲವು ವಿಷಯಗಳನ್ನು ಮರೆಯಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೆಯದಾಗಿ ಮನುಷ್ಯ ಎಷ್ಟೇ ಕಠಿಣ ಸಮಯ ಬಂದರೂ, ತನ್ನ ಗುರಿಯನ್ನ ಎಂದಿಗೂ ಮರೆಯಬಾರದು. ಎಂದಿಗೂ ಕೈಚೆಲ್ಲಿ ಕೂರಬಾರದು ಎಂದಿದ್ದಾರೆ ಚಾಣಕ್ಯರು. ಯಾಕಂದ್ರೆ ನಿಮಗೆ ಕಷ್ಟದ ಸಮಯ ಬಂದಾಗ, ಅದನ್ನ ಉತ್ತಮ ಅವಕಾಶದ ರೀತಿ ಬಳಸಿಕೊಂಡು, ನಾವು ಜೀವನ ಸಾಗಿಸಿಕೊಂಡು ಹೋಗಬೇಕು. ನಮ್ಮ ಯಶಸ್ಸಿಗೆ ನಾವು ಆ ಮೂಲಕ ದಾರಿ ಮಾಡಿಕೊಳ್ಳಬೇಕು.
ಈ ಬಗ್ಗೆ ಉದಾಹರಣೆ ಕೊಡಬೇಕು ಅಂದ್ರೆ, ಬೆಂಗಳೂರಿನಲ್ಲಿರುವ ಲಕ್ಷ ಜನ ವಲಸಿಗರಲ್ಲಿ, ಒಂದು ಪರ್ಸೆಂಟ್ ಜನರಾದರೂ, ಕೆಲಸ ಸಿಗದ ಕಾರಣ, ಬೆಂಗಳೂರು ಬಿಟ್ಟು ಹೋಗಿಬಿಡೋಣ ಅಂತಾ ಒಂದಲ್ಲ ಒಂದು ಬಾರಿ ನಿರ್ಧಾರ ಮಾಡಿಯೇ ಇರುತ್ತಾರೆ. ಆದರೆ ಅವರು ತಮ್ಮ ಪ್ರಯತ್ನ ಬಿಡದೇ, ಕೆಲಸ ಹುಡುಕಿದ ಕಾರಣಕ್ಕೇನೇ, ಅವರು ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ. ಆದರೆ, ಇವರನ್ನ ಬಿಟ್ಟು ಇನ್ನು ಕೆಲವರು ಕೆಲಸ ಸಿಗದ ಕಾರಣ, ಮತ್ತೆ ಪ್ರಯತ್ನ ಪಡದೇ, ಊರಿಗೆ ನಡೆದು ಬಿಟ್ಟಿರ್ತಾರೆ. ಆದ್ರೆ ಚಾಣಕ್ಯರು, ಈ ರೀತಿ, ಪ್ರಯತ್ನ ಪಡದೇ, ವಿಫಲವಾದೆನೆಂದು ಬೇಸರಪಟ್ಟು, ಕೈ ಚೆಲ್ಲಿ ಕೂರಬಾರದು ಎಂದು ಹೇಳಿದ್ದಾರೆ.
ಎರಡನೇಯದಾಗಿ ಕಷ್ಟದ ಸಮಯದಲ್ಲಿ ತಮ್ಮ ಭಾವನೆಗಳ ಮೇಲೆ ಪೂರ್ಣ ರೂಪದ ನಿಯಂತ್ರಣ ಇರಬೇಕು. ಮನುಷ್ಯನಿಗೆ ಸುಖ ಬಂದಾಗ, ಹೇಗೆ ಖುಷಿ ಖುಷಿಯಾಗಿ ಎಲ್ಲವನ್ನೂ ಎಷ್ಟು ಸುಲಭವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದೆನೆಂಬ ಭರವಸೆ ಇರುತ್ತದೆಯೋ, ಅದೇ ರೀತಿ, ಹಣದ ಅಭಾವವಿದ್ದಾಗಲೂ ಕೂಡ, ಅದೇ ಮಿತಿಯಲ್ಲಿ ನಿಭಾಯಿಸಬಲ್ಲೆ ಎಂಬ ಭರವಸೆ ಇರಬೇಕು.
ಅದನ್ನು ಬಿಟ್ಟು, ದುಡ್ಡಿಲ್ಲವೆಂದು ಅಡ್ಡದಾರಿ ಹಿಡಿದು ದುಡ್ಡು ಮಾಡುವ ಯೋಚನೆ ಎಂದಿಗೂ ಬೇಡ ಎಂದಿದ್ದಾರೆ, ಚಾಣಕ್ಯರು. ಯಾಕಂದ್ರೆ ಇಂಥ ಕೆಲಸ ಮಾಡಿದ ಮೇಲೆ ನೀವು, ಅದರ ಬಗ್ಗೆ ಪಶ್ಚಾತಾಪ ಪಡುವಂತಾಗಬಾರದು. ಬದಲಾಗಿ ನಿಯತ್ತಾಗಿದ್ದೇ, ಇರುವ ಅಲ್ಪ ಹಣದಲ್ಲೇ ಜೀವಿಸುವುದನ್ನು ಕಲಿತುಕೊಳ್ಳಿ. ನಿಮ್ಮ ಹೆಚ್ಚಿನ ಸಮಯವನ್ನು ಮುಡಿಪಿಟ್ಟು ಚೆನ್ನಾಗಿ ದುಡಿದು. ಆ ಹಣವನ್ನು ಕೂಡಿಟ್ಟು, ಸುಖದ ಜೀವನ ಮಾಡಿ ಅಂತಾರೆ, ಚಾಣಕ್ಯರು.
ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ.