Tuesday, October 7, 2025

Latest Posts

ಇನ್ನೊಬ್ಬರಿಗೆ ಒಳ್ಳೆಯದು ಬಯಸಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

- Advertisement -

ಕೆಲವರು ಯಾವಾಗಲೂ ಬೇರೆಯವರಿಗೆ ಕೆಟ್ಟದ್ದನ್ನೇ ಬಯಸುತ್ತಿರುತ್ತಾರೆ. ಬೇರೆಯವರ ಬಗ್ಗೆ ಅಸೂಯೆ ಪಡುತ್ತಿರುತ್ತಾರೆ. ಅವರಿಗೆ ಸುಮ್ಮ ಸುಮ್ಮನೆ ಶಾಪ ಹಾಕುತ್ತಿರುತ್ತಾರೆ. ಆಗ ಆ ಮನೆಯ ಹಿರಿಯರು ಹಾಗೆಲ್ಲಾ ಬೇರೆಯವರಿಗೆ ಕೆಟ್ಟದ್ದನ್ನ ಬಯಸಬೇಡ, ಒಳ್ಳೆಯದನ್ನ ಬಯಸು ಅಂತಾರೆ. ಯಾಕೆ ನಾವು ಇನ್ನೊಬ್ಬರಿಗೆ ಎಂದಿಗೂ ಕೇಡು ಬಯಸಬಾರದು..? ಯಾವ ಒಳ್ಳೆಯದನ್ನೇ ಬಯಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಯಾವ ಆಸೆಯೂ ಇಲ್ಲದೇ, ಯಾರು ಬೇರೆಯವರಿಗೆ ಸಹಾಯ ಮಾಡುತ್ತಾರೋ, ಒಳ್ಳೆಯದನ್ನ ಬಯಸುತ್ತಾರೋ, ಅಂಥವರು ದೇವರಿಗೆ ಪ್ರಿಯವಾಗಿರುತ್ತಾರೆ. ಒಮ್ಮೆ ಒರ್ವ ಬಾಲಕ, ಬಲೂನ್ ಮಾರಾಟ ಮಾಡುತ್ತ ಸಿಟಿಗೆ ಹೋಗುತ್ತಾನೆ. ಅಲ್ಲಿ ಎಷ್ಟು ಬಿಸಿಲಿರುತ್ತದೆ ಎಂದರೆ, ಕಾಲಿಡುವುದಕ್ಕೂ ಕಷ್ಟವಾಗುತ್ತದೆ. ಆ ಬಾಲಕನಿಗೆ ಹಾಕಲು ಸರಿಯಾಗಿ ಬಟ್ಟೆ ಇರುವುದಿಲ್ಲ. ಚಪ್ಪಲಿಯೂ ಇರುವುದಿಲ್ಲ. ಆದರೂ ಕೂಡ ಇಂದಿನ ಊಟಕ್ಕಾಗಿ ಹಣ ಕೂಡಿಸಲೇ ಬೇಕು. ಹಾಗಾಗಿ ಉರಿ ಬಿಸಿಲಲ್ಲೇ ಬಲೂನು ಮಾರಲು ಹೋಗುತ್ತಾನೆ.

ಇವನ ಕಷ್ಟವನ್ನು ಕಾಣಲಾಗದೇ, ಓರ್ವ ವೃದ್ಧ, ಬಾಲಕನಿಗೆ ಒಂದು ಜೋಡಿ ಚಪ್ಪಲಿ ತಂದು ಕೊಟ್ಟ. ಆಗ ಬಾಲಕ ನೀವು ದೇವರೇ ಆಗಿರಬೇಕು. ನನ್ನ ಮನದಿಚ್ಛೆಯನ್ನ ಪೂರ್ಣಗೊಳಿಸಿದಿರಲ್ಲ ಎಂದ. ಆಗ ವೃದ್ಧ ಇಲ್ಲಾಪ್ಪಾ ನಾನು ದೇವರಲ್ಲ. ನನಗೆ ನಿನ್ನ ಕಷ್ಟ ಕಾಣಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ನಿನಗೆ ಒಂದು ಜೋಡಿ ಚಪ್ಪಲಿ ತಂದು ಕೊಟ್ಟೆ ಎಂದ.

ಆಗ ಬಾಲಕ ನೀವು ದೇವರಲ್ಲದಿದ್ದರೆ, ದೇವರ ಸ್ನೇಹಿತನಿರಬೇಕು. ಇಲ್ಲವಾದಲ್ಲಿ ನಾನು ಮನಸ್ಸಿನಲ್ಲಿ ದೇವರ ಬಳಿ, ಚಪ್ಪಲಿ ಬೇಡುತ್ತಿರುವುದು ನಿಮಗೆ ಹೇಗೆ ತಿಳಿಯುತ್ತಿತ್ತು ಎಂದು ಕೇಳಿದ. ಮಗುವಿನ ಮುಗ್ಧ ಮಾತನ್ನು ಕೇಳಿ ವೃದ್ಧ ಕಣ್ಣೀರಾಗಿ, ಅವನ ತಲೆ ಸವರಿ ಅಲ್ಲಿಂದ ಹೊರಟು ಹೋದರು. ಈ ಕಥೆಯ ಅರ್ಥವೇನೆಂದರೆ, ಬೇರೆಯವರಿಗೆ ನೀವು ಸಹಾಯ ಮಾಡಿದಾಗ, ಅವರ ಮುಖದಲ್ಲಿ ಒಂದು ನಗು ಮೂಡುತ್ತದೆ. ಮನಸ್ಸಿಗೆ ಸಮಾಧಾನ ಸಿಗುತ್ತದೆ.

ಅಲ್ಲದೇ, ನೀವು ಅವರ ದೃಷ್ಟಿಯಲ್ಲಿ ದೇವರಿಗೆ ಸಮನಾಗುತ್ತೀರಿ. ಆದ್ರೆ ನಿಮಗೆ ಬೇರೆಯವರಿಗೆ ಒಳ್ಳೆಯದು ಮಾಡಲು ಆಗುತ್ತಿಲ್ಲವೆಂದಲ್ಲಿ. ಕೆಟ್ಟದ್ದಂತೂ ಬಯಸಬೇಡಿ. ಯಾಕಂದ್ರೆ ಚಾಣಕ್ಯರ ಪ್ರಕಾರ, ನಾವು ಯಾರಿಗಾದರೂ ಕೆಟ್ಟದ್ದನ್ನು ಬಯಸಿದರೆ, ಅದು ತಿರುಗಿ ನಮಗೆ ಬಡಿಯುತ್ತದೆ. ಹಾಗಾಗಿ ಯಾವಾಗಲೂ ಒಳ್ಳೆಯ ಕೆಲಸವನ್ನೇ ಮಾಡಿ, ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸಿ ಅಂತಾರೆ ಚಾಣಕ್ಯರು.

- Advertisement -

Latest Posts

Don't Miss