Thursday, December 4, 2025

Latest Posts

ಚಾಣಕ್ಯರ ಪ್ರಕಾರ ಹಿಂದೂ ಧರ್ಮಿಯರು ಈ ನಿಯಮವನ್ನ ಪಾಲಿಸಲೇಬೇಕು..

- Advertisement -

ತಮ್ಮ ಚಾಣಕ್ಯ ನೀತಿಯ ಮೂಲಕ ಜೀವನ ಜೀವಿಸುವ ರೀತಿಯನ್ನ ಕಲಿಸಿರುವ ಚಾಣಕ್ಯರು, ಹಿಂದೂ ಧರ್ಮದ ಕಟ್ಟಾ ಆಚರಣಾಕಾರರಾಗಿದ್ದರು. ಅವರು ಹಿಂದೂ ಧರ್ಮದಲ್ಲಿ ಕೆಲವು ಆಚರಣೆಗಳನ್ನು ತಪ್ಪದೇ, ಆಚರಿಸಬೇಕು. ಹಿಂದೂ ಸಂಸ್ಕಾರವನ್ನು ಅವರೆಂದಿಗೂ ಬಿಡಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಹಿರಿಯರಿಗೆ ಮತ್ತು ಪುಟ್ಟ ಮಕ್ಕಳಿಗೆ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳಬೇಕು. ಇದು ಬರೀ ಹಿಂದೂ ಧರ್ಮಿಯರೇ ಪಾಲಿಸಬೇಕಾಗಿಲ್ಲ. ಬದಲಾಗಿ ಪ್ರೀತಿ- ಕಾಳಜಿಗೆ ಧರ್ಮವೇ ಇಲ್ಲ. ಇನ್ನು ಹಿಂದೂ ಧರ್ಮದ ಪ್ರಕಾರ ನೋಡುವುದಾದರೆ, ಪುಟ್ಟ ಮಕ್ಕಳನ್ನು ಮತ್ತು ಹಿರಿಯರನ್ನು ದೇವರೆಂದು ಪರಿಗಣಿಸಲಾಗಿದೆ. ಯಾಕಂದ್ರೆ ಆ ಹಿರಿಯರೇ ನಿಮ್ಮ ಜೀವನ ಉದ್ಧಾರಕ್ಕೆ ಕಾರಣರಾಗಿರ್ತಾರೆ. ಹಾಗಾಗಿ ಅವರನ್ನು ನೀವು ಪ್ರೀತಿ, ಕಾಳಜಿ, ಗೌರವದಿಂದ ನೋಡಿಕೊಳ್ಳಬೇಕು.

ಇನ್ನು ಪುಟ್ಟ ಮಕ್ಕಳಿಗೆ ಜೀವನದ ಬಗ್ಗೆ ಏನೂ ಗೊತ್ತಿರುವುದಿಲ್ಲ. ಮುಗ್ಧತೆಯ ಸ್ವರೂಪವಾದ ಮಕ್ಕಳು ದೇವರಿಗೆ ಸಮಾನವೆಂದು ಭಾವಿಸಲಾಗಿದೆ. ಹಾಗಾಗಿ ಈ ಇಬ್ಬರಿಗೂ ನೀವು ಪ್ರೀತಿಯಿಂದ ನೋಡಿಕೊಳ್ಳಬೇಕು ಎನ್ನುತ್ತಾರೆ ಚಾಣಕ್ಯ.

ಎರಡನೇಯದಾಗಿ ಹೆಣ್ಣಿಗೆ ಗೌರವ ನೀಡಬೇಕು. ಚಾಣಕ್ಯರ ಪ್ರಕಾರ, ಹೆಣ್ಣನ್ನು ಹಿಂದೂಗಳು ದೇವತೆಗೆ ಹೋಲಿಸುತ್ತಾರೆ. ಲಕ್ಷ್ಮೀ, ಸರಸ್ವತಿ, ದುರ್ಗೆಯ ರೂಪದಲ್ಲಿ ಆಕೆಯನ್ನು ಪೂಜಿಸುತ್ತಾರೆ. ಆಕೆ ತಾಯಿ, ತಂಗಿ, ಪತ್ನಿ, ಮಗಳು ಹೀಗೆ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸುವ ಅರ್ಹತೆ ಹೊಂದಿದ್ದಾಳೆ. ಆಕೆ ಮನಸ್ಸು ಮಾಡಿದರೆ, ಗಂಡನ ಹೆಗಲಿಗೆ ಹೆಗಲು ಕೊಟ್ಟು ದುಡಿಯಲೂ ಅರ್ಹಳಾಗಿದ್ದಾಳೆ. ಹಾಗಾಗಿ ಇಷ್ಟೆಲ್ಲ ಪಾತ್ರವಹಿಸುವ ಹೆಣ್ಣನ್ನು ನಾವು ಪೂಜಿಸಬೇಕು, ಗೌರವಿಸಬೇಕು ಎನ್ನುತ್ತಾರೆ ಚಾಣಕ್ಯರು.

ಮೂರನೇಯದಾಗಿ ಗುರುಗಳನ್ನು ಗೌರವದಿಂದ ಕಾಣಬೇಕು. ಮೊದಲೆಲ್ಲ ಗುರುಕುಲ ಪದ್ಧತಿ ಇತ್ತು. ಆಗ ಗುರುಗಳೆಂದರೆ, ದೇವರ ಸಮಾನವೆಂದು ಹೇಳಲಾಗುತ್ತಿತ್ತು ಮತ್ತು ಹಾಗೆ ನಡೆದುಕೊಳ್ಳಲಾಗುತ್ತಿತ್ತು. ಆದ್ರೆ ಇಂದಿನ ಕಾಲದಲ್ಲಿ ಮಕ್ಕಳು ಗುರುಗಳಿಗೆ ಗೌರವ ನೀಡುವುದು ದೂರದ ಮಾತಾಗಿದೆ. ಆದರೆ, ತಂದೆ ತಾಯಿಯ ಬಳಿಕ, ನಾವು ಗೌರವಿಸಬೇಕಾದ ಜೀವ ಗುರು. ಹಾಗಾಗಿ ನಿಮಗೆ ವಿದ್ಯೆ ಕಲಿಸಿದ ಗುರುವನ್ನು ಗೌರವಿಸಬೇಕು ಎನ್ನುತ್ತಾರೆ, ಚಾಣಕ್ಯರು.

ನಾಲ್ಕನೇಯದಾಗಿ ಹಸುವನ್ನು ಪೂಜಿಸಿ, ಸ್ಪರ್ಶಿಸಿ, ಆದರೆ ಹೊಡೆಯಬೇಡಿ, ಒದೆಯಬೇಡಿ. ಯಾಕಂದ್ರೆ ಹಸುವನ್ನು ಹಿಂದೂಗಳು ದೇವರೆಂದು ಪರಿಗಣಿಸುತ್ತಾರೆ. ಅದರಲ್ಲಿ ಮುಕ್ಕೋಟಿ ದೇವತೆಗಳು ವಾಸಿಸುತ್ತಾರೆ ಅನ್ನುವ ನಂಬಿಕೆಯೂ ಇದೆ. ಹಾಗಾಗಿ ನಾವು ಗೋವಿಗೆ ನಮಸ್ಕರಿಸಬಹುದು, ಸ್ಪರ್ಶಿಸಬಹುದು, ಆದರೆ, ಅದಕ್ಕೆ ಹೊಡೆಯಬಾರದು ಮತ್ತು ಒದೆಯಬಾರದು, ಹಿಂಸಿಸಬಾರದು ಅಂತಾರೆ ಚಾಣಕ್ಯರು.

- Advertisement -

Latest Posts

Don't Miss