ಪತ್ನಿ(ಪತಿಯೂ ಕೂಡ), ಮಿತ್ರ ಮತ್ತು ಕೆಲಸಗಾರ ಉತ್ತಮನಾಗಿದ್ದರೆ, ಅವರನ್ನು ಪಡೆದ ವ್ಯಕ್ತಿ ಜೀವನದಲ್ಲಿ ನೆಮ್ಮದಿಂಯಿಂದಿರುತ್ತಾನೆ. ಮನೆಯಲ್ಲಿ ಪತ್ನಿ ಪ್ರೀತಿ, ಕಾಳಜಿಯಿಂದ ನೋಡಿಕೊಂಡು, ಉತ್ತಮ ಸಲಹೆ ನೀಡುವ ಮಿತ್ರನಿದ್ದು, ಹೇಳಿದ ಹಾಗ ಕೇಳುವ, ನಿಯತ್ತಿನ ಕೆಲಸಗಾರನಿದ್ದರೆ, ಆ ವ್ಯಕ್ತಿ ನೆಮ್ಮದಿಯಾಗಿರುತ್ತಾನೆ. ಆದ್ರೆ ಪತ್ನಿ, ಮಿತ್ರ, ಕೆಲಸಗಾರ ನಿಯತ್ತಿನಿಂದಿದ್ದಾನಾ ಇಲ್ಲವಾ ಅಂತಾ ತಿಳಿಯೋದು ಹೇಗೆ ಅಂತಾ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮಹಾದೇವ ತನ್ನ ತ್ರಿಶೂಲವನ್ನೇ ಮುರಿಯಲು ಕಾರಣವೇನು..?
ಮೊದಲನೇಯದಾಗಿ ಕೆಲಸಗಾರರು. ನಿಮ್ಮ ಬಳಿ ಕೆಲಸ ಮಾಡುವ ಕೆಲಸಗಾರರು ನಿಯತ್ತಾಗಿದ್ದಾರಾ ಇಲ್ಲವಾ ಎಂದು ತಿಳಿಯಲು ನೀವು ಅವರಿಗೆ ದುಡ್ಡಿನ ಜವಾಬ್ದಾರಿ ವಹಿಸಬೇಕು. ಆಮೇಲೆ ಅವರ ಮೇಲೆ ನಿಗಾ ವಹಿಸಬೇಕು. ಉದಾಹರಣೆಗೆ ಮನೆ ಕೆಲಸದವರಿಗೆ ದುಡ್ಡು ಕೊಟ್ಟು ತರಕಾರಿ ತರಲು ಹೇಳಿದಿರಿ ಎಂದಿಟ್ಟುಕೊಳ್ಳಿ. ಅವರು ಮಾರುಕಟ್ಟೆಗೆ ಹೋಗಿ ತರಕಾರಿ ತಂದು, ಉಳಿದ ದುಡ್ಡನ್ನು ನಿಮಗೆ ತಂದುಕೊಟ್ಟರೆ, ಅವರು ನಿಯತ್ತಾಗಿದ್ದಾರೆ ಎಂದರ್ಥ. ಆದ್ರೆ ಅವರು ಉಳಿದ ದುಡ್ಡನ್ನು ತಾವಿಟ್ಟುಕೊಂಡು, ದುಡ್ಡು ಉಳಿದಿಲ್ಲವೆಂದು ಸುಳ್ಳು ಹೇಳಿದರೆ, ಕೆಲಸಕ್ಕೆ ಲಾಯಕ್ಕಿಲ್ಲವೆಂದು ಅರ್ಥ.
ಎರಡನೇಯದಾಗಿ ಪತ್ನಿ. ನೀವು ಪತ್ನಿಯನ್ನು ಪರೀಕ್ಷಿಸುವುದಿದ್ದರೆ, ಆಕೆಯ ಬಳಿ ನಿಮಗೆ ಬಡತನ ಬಂದಿದೆ ಎಂದು ತೋರಿಸಿ. ನನ್ನ ಬಳಿ ಇರುವ ದುಡ್ಡೆಲ್ಲ ಖಾಲಿಯಾಗುತ್ತಿದೆ. ನಷ್ಟವಾಗುತ್ತಿದೆ ಎಂದು ಗೋಳಿಡಿ. ಆಕೆ ನಿಮ್ಮ ಕಷ್ಟಕ್ಕೆ ಸಾಥ್ ಕೊಟ್ಟು, ನಿಮಗೆ ಧೈರ್ಯ ನೀಡಿದರೆ, ಆಕೆ ಉತ್ತಮ ಪತ್ನಿ ಎಂದರ್ಥ. ನಿಮ್ಮ ಬಳಿ ದುಡ್ಡಿಲ್ಲವೆಂದು ಕೇಳಿ, ಆಕೆ ನಿಮ್ಮನ್ನು ಬಿಟ್ಟು ಹೋಗುವ ಮಾತನಾಡಿದ್ದಲ್ಲಿ, ಆಕೆ ನಿಮಗೆ ಅರ್ಹಳಲ್ಲವೆಂದು ಅರ್ಥ.
ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಇಂಥ ಸೂಚನೆಗಳನ್ನು ಕಾಗೆ ನೀಡುತ್ತೆ ..
ಇನ್ನು ಮೂರನೇಯದಾಗಿ ಮಿತ್ರ. ಯಾರೊಂದಿಗಾದರೂ ಮಿತೃತ್ವ ಮಾಡಿಕೊಳ್ಳುವ ಮೊದಲು, ಅವರು ಒಳ್ಳೆಯವರಾ ಕೆಟ್ಟವರಾ ಎಂದು ತಿಳಿಯಿರಿ. ನಿಮಗೆ ಕಷ್ಟ ಬಂದ ರೀತಿ, ಸಾಲ ಬೇಕು ಎನ್ನುವ ರೀತಿ ಮಾತನಾಡಿ. ಆದರೆ ಸಾಲ ಕೇಳಬೇಡಿ. ಅವನು ನಿಮ್ಮ ಕಷ್ಟವನ್ನು ಅರಿಯದೇ, ಕೂಡ ಸಾಲ ಕೊಡಲಾಗುವುದಿಲ್ಲ ಎಂಬಂತೆ ಪರೋಕ್ಷವಾಗಿ ಹೇಳಿದರೆ, ಅವರು ನಿಮ್ಮ ಉತ್ತಮ ಸ್ನೇಹಿತರಲ್ಲ. ಅವರಿಗೆ ನಿಜವಾಗಲೂ ಕಷ್ಟವಿರಬಹುದು. ಆದರೆ ಸಾಲ ಕೊಡದಿದ್ದರೂ, ಸ್ನೇಹಿತನ ಕಷ್ಟಕ್ಕೆ ಸಮಾಧಾನದ ಮಾತು ಹೇಳದವ ಗೆಳೆತನಕ್ಕೆ ಯೋಗ್ಯನಲ್ಲ.