- Advertisement -
ಮೊದಲನೇಯ ಮತ್ತು ಎರಡನೇ ಭಾಗದಲ್ಲಿ ನಾವು ಚಾಣಕ್ಯರು ಪೋಷಕರು ಮಾಡಬಾರದ 16 ತಪ್ಪಿನಲ್ಲಿ 8 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಮುಂದುವರಿದ ಭಾಗವಾಗಿ ಇನ್ನೂ 4 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.
- ನಿಮ್ಮ ಮಗುವಿಗೆ ಧೈರ್ಯವಂತನನ್ನಾಗಿ ಮಾಡಿ. ನಿಮ್ಮ ಮಗು ಹೆಣ್ಣಾಗಲಿ ಗಂಡಾಗಲಿ, ಆ ಮಗು ಯಾವಾಗಲೂ ಧೈರ್ಯದಿಂದಿರುವಂತೆ ಮಾಡಿ. ಯಾವುದಕ್ಕೂ ಹೆದರದಂತೆ ಮಾಡಿ. ನಿಮ್ಮ ಪ್ರತೀ ಮಾತು, ಆ ಮಗುವಿನಲ್ಲಿ ಧೈರ್ಯ ತುಂಬುತ್ತಿರಬೇಕು. ನಿಮ್ಮ ಪ್ರತೀ ಕೆಲಸ ಆ ಮಗುವಿನ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡಬೇಕು. ನಿಮ್ಮ ಮಕ್ಕಳು ಹೇಗಿರಬೇಕು ಎಂದರೆ, ಅದು ಎಲ್ಲಿ ಹೋದರೂ, ಅಲ್ಲಿ ತನ್ನ ಛಾಪು ಮೂಡಿಸುವಂತಿರಬೇಕು.
- ಹತ್ತನೇಯದಾಗಿ ಜೀವನ ಸಂಗಾತಿ, ದುಡ್ಡು ಮತ್ತು ಊಟ ಈ ಮೂರು ವಿಷಯದಲ್ಲಿ ಎಷ್ಟು ಬೇಕೋ ಅಷ್ಟು ಮಾತ್ರಕ್ಕೆ ಸಂತುಷ್ಟರಾಗಿರಬೇಕು. ಇದರ ಅರ್ಥ ನಿಮ್ಮ ಮಕ್ಕಳಿಗೆ ಅಗತ್ಯಕ್ಕೆ ತಕ್ಕಷ್ಟು ಉಣ್ಣಬೇಕು. ನಿಯತ್ತಿನಿಂದ ಹಣ ಗಳಿಸಬೇಕು. ಮತ್ತು ಜೀವನ ಸಂಗಾತಿಯೊಂದಿಗೆ ಉತ್ತಮ ರೀತಿಯಿಂದ ಇರಬೇಕು ಎಂಬುದನ್ನು ಹೇಳಿಕೊಡಿ. ಯಾಕಂದ್ರೆ ಮನುಷ್ಯ ಹೇಗೆ ದೊಡ್ಡವನಾಗುತ್ತಾನೋ, ಹಾಗೆ ಅವನಿಗೆ ದುಡ್ಡಿನ ಮೋಹ ಹೆಚ್ಚುತ್ತದೆ. ದುಡಿದಷ್ಟು ದುಡ್ಡು ಸಾಕಾಗಿಲ್ಲವೆಂದು ಕೆಲವರು ಅಡ್ಡದಾರಿ ಹಿಡಿಯುತ್ತಾರೆ. ಇನ್ನು ಜೀವನ ಸಂಗಾತಿಗೆ ಮೋಸ ಮಾಡುವವರು ಹೆಚ್ಚಿದ್ದಾರೆ. ಊಟದ ವಿಷಯಕ್ಕೆ ಬಂದ್ರೆ ಅಗತ್ಯಕ್ಕಿಂತ ಹೆಚ್ಚು ಉಂಡರೆ, ರೋಗ ಖಚಿತ. ಹಾಗಾಗಿ ಈ ಮೂರು ವಿಷಯದ ಬಗ್ಗೆ ನಿಮ್ಮ ಮಕ್ಕಳಿಗೆ ತಿಳಿಸಿಕೊಡಿ.
- ಹನ್ನೊಂದನೇಯದಾಗಿ ದಾನ, ಕಲಿಕೆ ಮತ್ತು ಉತ್ತಮ ಗುಣ. ಈ ಮೂರು ವಿಷಯ ಎಷ್ಟು ಕಲಿತರೂ ಸಾಲದು ಅನ್ನೋದನ್ನ ಕಲಿಸಿಕೊಡಿ. ಇದರ ಅರ್ಥ, ಹುಟ್ಟಿದಾಗಿನಿಂದ ಸಾಯುವವರೆಗೂ ಕಲಿಯಲು ಬೇಕಾದಷ್ಟಿರುತ್ತದೆ. ಹಾಗಾಗಿ ಎಂದಿಗೂ ಕಲಿಯುವುದನ್ನು ನಿಲ್ಲಿಸಬಾರದು. ಜೀವನ ಕೊನೆತನಕ ನಮಗೆ ಕಲಿಸಿಕೊಡುತ್ತಿರುತ್ತದೆ. ನಾವು ಕಲಿಯುತ್ತಿರಬೇಕು. ಜೀವನದಲ್ಲಿ ಉತ್ತಮ ಗುಣವನ್ನು ಅಳವಡಿಸಿಕೊಳ್ಳಬೇಕು. ಇನ್ನು ನಮ್ಮ ಕೈಲಾದಷ್ಟು ದಾನ ಮಾಡುತ್ತಿರಬೇಕು. ಹಾಗಂತ ದರಿದ್ರರಾಗುವಷ್ಟು ದಾನ ಮಾಡಬೇಡಿ. ಇದ್ದುದರಲ್ಲಿ ಕೊಂಚ ದಾನವೂ ಮಾಡುವ ಬುದ್ಧಿಯನ್ನ ನಿಮ್ಮ ಮಕ್ಕಳಿಗೆ ಕಲಿಸಿ.
- ನಿಮ್ಮ ಮಕ್ಕಳು ಸ್ವಾವಲಂಬಿಯಾಗಿ ಬದುಕುವ ಕಲೆ ಕಲಿಸಿಕೊಡಿ. ವಿದ್ಯೆಗಿಂತ ದೊಡ್ಡ ಮಿತ್ರ ಮತ್ತೊಬ್ಬನಿಲ್ಲ. ಹಾಗಾಗಿ ನಿಮ್ಮ ಮಕ್ಕಳಿಗೆ ವಿದ್ಯೆ ಕಲಿಸಿ. ವಿದ್ಯೆ ತಲೆಗೆ ಹತ್ತದಿದ್ದಲ್ಲಿ, ಬೇರೆ ಕೆಲಸ ಮಾಡುವುದನ್ನು ಕಲಿಸಿ. ನಿಯತ್ತಾಗಿ ಆ ಕೆಲಸ ಮಾಡಿ, ನಿಮ್ಮ ಮಕ್ಕಳು ಬದುಕುವಂತೆ ಮಾಡಿ. ಮುಂದೊಂದು ದಿನ ನಿಮ್ಮ ಮಕ್ಕಳು ಯಾರ ಮೇಲೂ ಅವಲಂಬಿಸದಂತೆ ಮಾಡಿ. ಒಟ್ಟಿನಲ್ಲಿ ನಿಮ್ಮ ಮಗು ತನಗೆ ಯಾರಿಲ್ಲದಿದ್ದರೂ ನಾನೇ ದುಡಿದು ನಾನೇ ಜೀವಿಸಬಲ್ಲೆ ಅನ್ನೋ ಆತ್ಮಸ್ಥೈರ್ಯದಲ್ಲಿರಬೇಕು. ಹಾಗೆ ಬೆಳೆಸಿ.
- Advertisement -