Thursday, July 31, 2025

Latest Posts

ನೀವು ಶ್ರೀಮಂತರಾಗಬೇಕು ಅಂದ್ರೆ, ಚಾಣಕ್ಯ ಹೇಳಿರುವ ಈ ನಿಯಮಗಳನ್ನು ಫಾಲೋ ಮಾಡಿ..

- Advertisement -

ನಾವು ಶ್ರೀಮಂತರಾಗಬೇಕು. ಧನಲಕ್ಷ್ಮೀ ನಮ್ಮ ಮೇಲೆ ಕೃಪೆ ತೋರಬೇಕು. ಐಶಾರಾಮಿ ಜೀವನ ನಮ್ಮದಾಗಬೇಕು ಅನ್ನೋ ಆಸೆ ಹಲವರಿಗಿರತ್ತೆ. ಆದ್ರೆ ಎಲ್ಲರೂ ಅಷ್ಟು ಸುಲಭವಾಗಿ ಶ್ರೀಮಂತರಾಗೋಕ್ಕೆ ಸಾಧ್ಯವಾಗಲ್ಲ. ಅದಕ್ಕೆ ಅದೃಷ್ಟ ಮತ್ತು ಪ್ರಯತ್ನ ಎರಡೂ ಬೇಕು. ಹಾಗಾಗಿ ನಾವಿಂದು ಮನುಷ್ಯ ಶ್ರೀಮಂತನಾಗಲು ಏನು ಮಾಡಬೇಕೆಂದು ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡಲಿದ್ದೇವೆ.

ಪೂಜೆಯ ಸಮಯದಲ್ಲಿ ಆರತಿಯನ್ನು ಯಾಕೆ ಮತ್ತು ಹೇಗೆ ಮಾಡಬೇಕು..?

ಮೊದಲನೇಯದಾಗಿ ಚಾಣಕ್ಯ ಹೇಳಿರುವ ಮಾತೆಂದರೆ, ನಾವು ಯಾರ ಬಗ್ಗೆಯೂ ಕೀಳಾಗಿ ಮಾತನಾಡಬಾರದು. ನಮ್ಮ ಬಗ್ಗೆ ನಾವೇ ಅಹಂಕಾರ ಪಡಬಾರದು. ಮನುಷ್ಯ ಜೀವನದಲ್ಲಿ ಕೊಂಚ ಯಶಸ್ಸು ಕಂಡರೆ ಸಾಕು, ಅದೇ ದೊಡ್ಡದು ಎಂಬಂತೆ ಅಹಂಕಾರ ಪಡುತ್ತಾನೆ. ಅದೇ ಭರದಲ್ಲಿ ಬೇರೆಯವರ ಬಗ್ಗೆ ಇಲ್ಲದ್ದನ್ನ ಮಾತನಾಡಲು ಶುರು ಮಾಡುತ್ತಾನೆ. ಅವನ ಅವನತಿಗೆ ಇದೇ ಸಾಕು. ನಾವು ಬೇರೆಯವರ ಬಗ್ಗೆ ಇಂದು ಕೀಳಾಗಿ ಮಾತನಾಡಿದರೆ, ನಾಳೆ ಅದೇ ಪರಿಸ್ಥಿತಿ ನಮಗೆ ಬರುತ್ತದೆ. ಹಾಗಾಗಿ ನೀವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಅಹಂಕಾರ ಪಡಬೇಡಿ, ಬೇರೆಯವರ ಬಗ್ಗೆ ಕೀಳಾಗಿ ಮಾತನಾಡಬೇಡಿ.

ಗಂಗಾ ಸ್ನಾನ ಮಾಡಿದ್ರೆ ಪುಣ್ಯ ಸಿಗುತ್ತಾ..? ನಿಜಕ್ಕೂ ಗಂಗಾ ಸ್ನಾನ ಎಂದರೇನು..?- ಭಾಗ1

ಎರಡನೇಯದಾಗಿ ಸಜ್ಜನರ ಸಂಗ ಹೆಜ್ಜೇನು ಸವಿದಂತೆ, ದುರ್ಜನರ ಸಂಗ ಹೆಜ್ಜೇನು ಕಡಿದಂತೆ ಅನ್ನೋ ಮಾತಿದೆ. ಈ ಮಾತಿನಂತೆ ನೀವು ಯಾರದ್ದಾದರೂ ಸ್ನೇಹ ಮಾಡಿದರೆ, ನಿಮಗೆ ಕೆಲ ದಿನಗಳಲ್ಲೇ ಅವರು ಎಂಥವರು ಎಂದು ಗೊತ್ತಾಗುತ್ತದೆ. ಸ್ನೇಹಿತ ಉತ್ತಮನಾಗಿದ್ದಲ್ಲಿ, ಸ್ನೇಹ ಮುಂದುವರಿಯಲಿ. ಆದ್ರೆ ಸ್ನೇಹಿತ ಉತ್ತಮನಲ್ಲ ಎಂದಾದಲ್ಲಿ ಸ್ನೇಹ ಮುರಿಯುವುದು ಒಳ್ಳೆಯದು. ಯಾಕಂದ್ರೆ ಅಂಥವರ ಸಂಗ ಮಾಡುವುದರಿಂದ ನಮ್ಮ ಅವನತಿ ನಾವೇ ಕಂಡುಕೊಂಡ ಹಾಗಾಗುತ್ತದೆ.

ಗಂಗಾ ಸ್ನಾನ ಮಾಡಿದ್ರೆ ಪುಣ್ಯ ಸಿಗುತ್ತಾ..? ನಿಜಕ್ಕೂ ಗಂಗಾ ಸ್ನಾನ ಎಂದರೇನು..?- ಭಾಗ 2

ಮೂರನೇಯದಾಗಿ ನೀವು ಶ್ರೀಮಂತರಾಗಬೇಕು ಅಂದ್ರೆ, ಮೊದಲು ದುಡ್ಡು ಕೂಡಿಡುವುದನ್ನ ಕಲಿಯಬೇಕು. ನಿಮ್ಮ ದುಡಿಮೆಯಲ್ಲಿ ಕೊಂಚ ಹಣವನ್ನಾದರೂ ನೀವು ಜಾಣ್ಮೆಯಿಂದ ಸೇವ್ ಮಾಡಿದ್ದಲ್ಲಿ, ಭವಿಷ್ಯದಲ್ಲಿ ಅದರಿಂದ ಲಾಭ ಕಂಡುಕೊಳ್ಳಬಹುದು. ದುಡ್ಡು ಕೂಡಿಡುವುದಕ್ಕೂ ಬುದ್ಧಿವಂತಿಕೆ ಬೇಕು. ಆ ಬುದ್ಧಿವಂತಿಕೆ ನಿಮ್ಮಲ್ಲಿದ್ದಲ್ಲಿ, ನೀವು ಶ್ರೀಮಂತರಾಗಬಹುದು.

ನಾಲ್ಕನೇಯದಾಗಿ ಜ್ಞಾನ ಪಡೆದುಕೊಳ್ಳಲು ಎಂದಿಗೂ ಹಿಜಂರಿಯಬೇಡಿ. ಕಲಿಯುವುದನ್ನು ನಿಲ್ಲಿಸಬೇಡಿ. ನೀವು ಯಾವುದಾದರೂ ಉದ್ಯಮ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆಗ ನೀವು ಅದರ ಬಗ್ಗೆ ಬೇಕಾದ ನಾಲೇಜನ್ನು ಪಡೆದುಕೊಳ್ಳಬೇಕು. ನಿಮ್ಮ ಬುದ್ಧಿ ಉಪಯೋಗಿಸಿ, ಉದ್ಯಮದಲ್ಲಿ ಯಶಸ್ಸು ಪಡೆಯೋದು ಹೇಗೆ ಅನ್ನೋದನ್ನ ಯೋಚಿಸಬೇಕು. ಆಗಲೇ ನೀವು ಉತ್ತಮ ಉದ್ಯಮಿಯಾಗಲು ಸಾಧ್ಯ. ಅದನ್ನು ಬಿಟ್ಟು ನನಗೆಲ್ಲ ಗೊತ್ತು, ನಾನ್ಯಾಕೆ ಇನ್ನೊಬ್ಬರ ಬಳಿ, ಇದರ ಬಗ್ಗೆ ಕೇಳಬೇಕು ಅಂತಾ ಅಹಂ ತೋರಿಸಿದರೆ, ನೀವು ಯಶಸ್ಸು ಪಡೆಯಲು ಸಾಧ್ಯವೇ ಇಲ್ಲ.

ಶಿವನ ಭಕ್ತರು ಅಘೋರಿಗಳಾಗುವುದಕ್ಕೆ ಯಾರ ಶಾಪ ಕಾರಣ..?

ಐದನೇಯದಾಗಿ ನೀವು ಉದ್ಯೋಗ ಮಾಡುತ್ತಿದ್ದಲ್ಲಿ, ಅದರಿಂದ ಬರುವ ಸಂಬಳದಲ್ಲಿ ಕೊಂಚ ಹಣವನ್ನಾದರೂ ಉಳಿಸಿ, ಯಾವುದಾದರೂ ಸಣ್ಣ ಉದ್ಯಮ ಮಾಡುವ ಪರಿಯನ್ನು ಕಂಡುಕೊಳ್ಳಿ. ಕೆಲವರು ಹೀಗೆ ಮಾಡುವ ಬದಲು, ಬೆಳಿಗ್ಗೆ ಕೆಲಸಕ್ಕೆ ಹೋಗಿ, ಸಂಜೆ ಮತ್ತೊಂದು ಕೆಲಸಕ್ಕೆ ಹೋಗುತ್ತಾರೆ. ಹೀಗೆ ಮಾಡಿದರೂ, ನೀವು ಹೆಚ್ಚು ಗಳಿಸಬಹುದು. ಆದರೆ ಒಂದು ಚಿಕ್ಕ ಸೈಡ್ ಬ್ಯುಸಿನೆಸ್ ಇದ್ದರೆ, ಉತ್ತಮ. ಅದರಲ್ಲಿ ನೀವು ಯಶಸ್ಸು ಕಂಡರೆ, ಮುಂದೆ ಕೆಲಸ ಬಿಟ್ಟು, ಅದೇ ಉದ್ಯಮ ದೊಡ್ಡದಾಗಿ ಆರಂಭಿಸಬಹುದು. ಇದೇ ಶ್ರೀಮಂತಿಕೆಯ ದಾರಿ.

- Advertisement -

Latest Posts

Don't Miss