Tuesday, October 7, 2025

Latest Posts

ಗಂಡಿಗಿಂತ ಹೆಣ್ಣು ಈ 4 ವಿಷಯದಲ್ಲಿ ಮುಂದಿರುತ್ತಾಳಂತೆ…

- Advertisement -

ಇಂದಿನ ಕಾಲದಲ್ಲಿ ವಿದ್ಯಾಭ್ಯಾಸದಲ್ಲಿ, ಕೆಲಸ ಕಾರ್ಯಗಳಲ್ಲಿ, ಹಲವು ಕ್ಷೇತ್ರಗಳಲ್ಲಿ ಹೆಣ್ಣೇ ಮುಂದಿದ್ದಾಳೆ. ಎಷ್ಟೋ ಜನ ಹೆಣ್ಣು ಮಕ್ಕಳು ಪತಿಯ ಸಹಾಯವಿಲ್ಲದೇ, ಮನೆ ನಿರ್ವಹಿಸುವಷ್ಟು ಶಕ್ತಿವಂತರಾಗಿದ್ದಾರೆ. ಆರ್ಥಿಕವಾಗಿ ಬಲಶಾಲಿಗಳಾಗಿದ್ದಾರೆ. ಪ್ರೀತಿ, ವಾತ್ಸಲ್ಯ, ಮಮಕಾರದಲ್ಲಿ ಮುಂದಿರುವ ಹೆಣ್ಣು ಪುರುಷರಿಗಿಂತ 4 ವಿಷಯದಲ್ಲಿ ಯಾವಾಗಲೂ ಮುಂದು ಅನ್ನುತ್ತಾರೆ ಚಾಣಕ್ಯರು. ಹಾಗಾದರೆ ಆ 4 ವಿಷಯವಾದ್ರೂ ಏನು ಅಂತಾ ತಿಳಿಯೋಣ ಬನ್ನಿ..

ಮೊದಲನೇಯದ್ದು ಭಾವನೆ. ಗಂಡಿಗಿಂತ ಹೆಣ್ಣು ಭಾವನಾತ್ಮಕ ಜೀವಿ. ಕೆಲವರು ತಮ್ಮ ಭಾವನೆಯನ್ನ ತೋರಿಸಿಕೊಳ್ಳುತ್ತಾರೆ. ಕೆಲವರು ತೋರಿಸಿಕೊಳ್ಳುವುದಿಲ್ಲ. ಆದ್ರೆ ಹೆಚ್ಚು ದುಃಖ ತಡೆಯಲಾರದೇ, ಅತ್ತು ಬಿಡುವುದು ಹೆಣ್ಣು. ತಮ್ಮವರ ಖುಷಿ ಕಂಡು ತಾನೂ ಖುಷಿ ಪಡುವವಳು ಹೆಣ್ಣು. ತಮ್ಮವರಿಗೆ ತೊಂದರೆಯಾದಾಗ, ಮೊದಲು ಸಿಟ್ಟು ಬರುವುದು ಹೆಣ್ಣಿಗೆ. ಹಾಗಾಗಿ ಹೆಣ್ಣು ಭಾವನಾತ್ಮಕ ಜೀವಿ ಅಂತಾರೆ ಚಾಣಕ್ಯರು.

ಇನ್ನು ಎರಡನೇಯದಾಗಿ ನಾಚಿಕೆ. ಗಂಡಿಗಿಂತ ಹೆಚ್ಚು ಹೆಣ್ಣು ನಾಚಿಕೊಳ್ತಾಳೆ. ಗಂಡಿಗೂ ಕೂಡ ನಾಚಿಕೆಯ ಸ್ವಭಾವವಿರುತ್ತದೆ. ಆದ್ರೆ ಗಂಡಿಗಿಂತ ನಾಲ್ಕು ಪಟ್ಟು ಹೆಚ್ಚು ಹೆಣ್ಣಿಗೆ ನಾಚಿಕೆ ಜಾಸ್ತಿ ಅಂತಾರೆ ಚಾಣಕ್ಯರು.

ಮೂರನೇಯದಾಗಿ ಹಸಿವು. ಗಂಡಿಗಿಂತ ಹೆಣ್ಣಿಗೆ ಹಸಿವು ಜಾಸ್ತಿ. ಇದು ನಂಬಲಸಾಧ್ಯವಾದ್ರೂ ನಿಜ. ಹೆಣ್ಣಿಗೆ ಹೊಟ್ಟೆ ಹಸಿವು ಹೆಚ್ಚು. ಆಕೆ ಗಂಡಿನ ಹಾಗೆ ಒಂದೇ ಬಾರಿ ಹೆಚ್ಚು ತಿನ್ನದಿದ್ದರೂ, ಹೆಚ್ಚು ಸಲ ಸ್ವಲ್ಪ ಸ್ವಲ್ಪ ತಿನ್ನುತ್ತಾಳೆ. ಅಲ್ಲದೇ. ಹೆಣ್ಣಿಗೆ ಹೊಟ್ಟೆ ಹಸಿವು ತಡೆದುಕೊಳ್ಳುವ ಕ್ಯಾಪೆಸಿಟಿ ಗಂಡಿಗಿಂತ ಕೊಂಚ ಕಡಿಮೆ ಎನ್ನುಬಹುದು.

ನಾಲ್ಕನೇಯದಾಗಿ ಕಾಮದಲ್ಲಿ ಗಂಡಿಗಿಂತ ಹೆಣ್ಣು ಹೆಚ್ಚು ಉತ್ಸುಕಳು ಎನ್ನುತ್ತಾರೆ ಚಾಣಕ್ಯರು. ಆದರೆ ಹೆಣ್ಣು ಅದನ್ನು ತೋರ್ಪಡಿಸುವುದಿಲ್ಲ. ಬದಲಾಗಿ ಎಂಥ ಪರಿಸ್ಥಿತಿಯಲ್ಲೂ ಓರ್ವ ಉತ್ತಮ ಹೆಣ್ಣು ತನ್ನ ಕಾಮ ಇಚ್ಛೆಯನ್ನ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾಳೆ.

- Advertisement -

Latest Posts

Don't Miss