Life Lesson: ಅಪ್ಪ-ಮಗಳ ಸಂಬಂಧ ಎಷ್ಟು ಸುಂದರವೋ, ತಾಯಿ-ಮಗನ ಸಂಬಂಧ ಕೂಡ ಅಷ್ಟೇ ಉತ್ತಮವಾಗಿದೆ. ತಾಯಿಗೆ ಮಗ-ಮಗಳು ಎಲ್ಲರೂ ಸಮಾನರು. ಆದರೆ ಆಕೆಗೆ ಮಗನ ಮೇಲೆ ಪ್ರೀತಿ ಹೆಚ್ಚು. ಆದರೆ ಚಾಣಕ್ಯರ ಪ್ರಕಾರ, ತಾಯಿಯಾದವಳು ಅದೇ ರೀತಿ ಪ್ರೀತಿಯನ್ನು ಕಾದಿಡಬೇಕು ಅಂದರೆ, ಮಗನ ಎದುರು ಕೆಲ ಕೆಲಸಗಳನ್ನು ಮಾಡಬಾರದು.
ಮಗನನ್ನು ಅತೀಯಾಗಿ ಮುದ್ದು ಮಾಡಬಾರದು: ಮಗು ಗಂಡಾಗಲಿ, ಹೆಣ್ಣಾಗಲಿ ಮಕ್ಕಳನ್ನು ಅಗತ್ಯಕ್ಕಿಂತ ಹೆಚ್ಚು ಮುದ್ದಿಸಬಾರದು. ಬಳಿಕ ಅವರಿಗೆ ಅದೇ ಅಭ್ಯಾಸವಾಗಿ, ಸಲುಗೆ ಬೆಳೆಯುತ್ತದೆ. ಆಗ ಮಕ್ಕಳು ಅಪ್ಪ-ಅಮ್ಮನ ಮಾತು ಕೇಳುವುದಿಲ್ಲ. ಅಲ್ಲದೇ, ಚಿಕ್ಕಂದಿನಲ್ಲೇ ಮಕ್ಕಳಿಗೆ ಹಣದ ಬೆಲೆ ಹೇಳಿಕ“ಡಬೇಕು ಅಂತಾರೆ ಚಾಣಕ್ಯರು.
ಮಕ್ಕಳು ಏನು ಕಲಿಯುತ್ತೇನೆ ಅಂತಾರೆ ಅಡಕ್ಕೆ ಅಡ್ಡಿ ಮಾಡಬಾರದು: ಇನ್ನು ಕೆಲ ಪೋಷಕರು ಮಕ್ಕಳು ಏನಾದರೂ ತಮ್ಮಿಷ್ಟದ ಕಲಿಕೆ ಕಲಿಯುತ್ತಾರೆ ಎಂದರೆ, ಅದು ಬೇಡವೆಂದೇ ಹೇಳುತ್ತಾರೆ. ಆದರೆ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ, ಅದರಲ್ಲೇ ಮುಂದುವರಿಯಲು ಬಿಡುವುದು ಉತ್ತಮ.
ಹದಿಹರಿಯದ ವಯಸ್ಸಿಗೆ ಬಂದಾಗ ಚೆನ್ನಾಗಿ ನೋಡಿಕ“ಳ್ಳಿ: ಮಕ್ಕಳು ಹದಿಹರೆಯದ ವಯಸ್ಸಿಗೆ ಬಂದಾಗ ಪೋಷಕರು ಸ್ನೇಹಿತರಾಗಿರಬೇಕಂತೆ. ಹಾಗಂತ, ಸಲುಗೆ ನೀಡಬೇಕು ಎಂದಲ್ಲ. ಆ ವಯಸ್ಸಿನಲ್ಲಿ ಮಕ್ಕಳಿಗೆ ಬಡಿಯಬಾರದು, ಮಾತು ಮಾತಿಗೂ ಬೈಯ್ಯಬಾರದು, ಎಲ್ಲದಕ್ಕೂ ಸ್ಟ್ರೀಕ್ಟ್ ಆಗಬಾರದು. ಅವರ ದಿನಚರಿಯ ಬಗ್ಗೆ ವಿಚಾರಿಸಬೇಕು.
ಮಗನ ಮುಂದೆ ಜಗಳವಾಡಬಾರದು: ಮಗನಾಗಲಿ-ಮಗಳಾಗಲಿ ಅವರ ಮುಂದೆ ತಂದೆ ತಾಯಿ ಎಂದಿಗೂ ಜಗಳವಾಡಬಾರದು. ಏಕೆಂದರೆ, ಮಕ್ಕಳಿಗೆ ಅಪ್ಪ ಅಮ್ಮನ ಜಗಳ ನೋಡಿಯೇ, ಮದುವೆ ಮೇಲೆ ನಂಬಿಕೆ ಹೋಗುತ್ತದೆ. ಮದುವೆಯಾದರೆ, ಬರೀ ಜಗಳ ಅಂತಲೇ ಅವರು ಭಾವಿಸುತ್ತಾರೆ. ಹಾಗಾಗಿ ಮಕ್ಕಳಿಗೆ ಆದಷ್ಟು ಸಂಬಂಧಗಳ ಬಗ್ಗೆ ತಿಳುವಳಿಕೆ ನೀಡಿ.
ಮಕ್ಕಳ ಮುಂದೆ ತಂದೆ ತಾಯಿ ಹೀಗಿರಬಾರದು: ಮಕ್ಕಳ ಮುಂದೆ ತಂದೆ ತಾಯಿ ರೋಮ್ಯಾಂಟಿಕ್ ಆಗಿರಬಾರದು. ಇದರಿಂದ ಮಕ್ಕಳ ಮೇಲೆ ಅದರಲ್ಲೂ ಗಂಡುಮಗುವಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ನಿಮ್ಮ ಮೇಲಿನ ಗೌರವ ಕಡಿಮೆಯಾದರೂ ಆಗಬಹುದು.
ವಿವಾಹ ಮತ್ತು ವಿವಾಹದ ನಂತರ: ವಿವಾಹಕ್ಕೆ ಮಗನಿಗೆ ಹೆಣ್ಣು ಹುಡುಕುವಾಗ ಮಗನ ಅಭಿಪ್ರಾಯ ಕೇಳುವುದು ತುಂಬಾ ಮುಖ್ಯ. ಆತ ಓಕೆ ಎಂದರೆ ಮಾತ್ರ, ಮದುವೆ ಮಾಡಬೇಕು. ನೀವೇ ಎಲ್ಲಾ ಜವಾಾಬ್ದಾರಿ ತೆಗೆದುಕ“ಂಡು ಮಗನನ್ನು ಕಡೆಗಣಿಸಿದರೆ, ಅವನ ವೈವಾಹಿಕ ಜೀವನ ಚೆನ್ನಾಗಿರಲು ಸಾಧ್ಯವೇ ಇಲ್ಲ. ಅಲ್ಲದೇ ವಿವಾಹದ ನಂತರ, ಆತನಿಗೆ ಸಲಹೆ ನೀಡುವುದು ಉತ್ತಮ. ಹಾಗಂತ, ಅವನ ಜೀವನದ ಮೇಲೆ ಹಿಡಿತ ಸಾಧಿಸುತ್ತೇನೆ ಎನ್ನುವುದು ಭ್ರಮೆ. ಇಂಥ ಕೆಲಸ ಮಾಡಿದರೆ, ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ.

