Friday, February 21, 2025

Latest Posts

Chanakya Neeti: ಚಾಣಕ್ಯರ ಪ್ರಕಾರ ಮೂರ್ಖರು ಈ 5 ಗುಣಗಳನ್ನು ಹೊಂದಿರುತ್ತಾರೆ

- Advertisement -

Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಜೀವನ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಜೀವನ ನಡೆಸುವ ಬಗ್ಗೆ, ಶ್ರೀಮಂತಿಕೆ, ಹಣ ಗಳಿಸುವ, ಹಣ ಉಳಿಸುವ, ಹಣ ಖರ್ಚು ಮಾಡುವ ರೀತಿ ಎಲ್ಲವನ್ನೂ ಹೇಳಿದ್ದಾರೆ. ಅಷ್ಟೇ ಏಕೆ ಎಂಥವರ ಸಂಗ ಮಾಡಬೇಕು, ಎಂಥ ಜಾಗದಲ್ಲಿರಬೇಕು, ಮತ್ತು ಎಂಥ ಜಾಗದಲ್ಲಿರಬಾರದು ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಮೂರ್ಖರಲ್ಲಿ ಇರುವ 5 ಗುಣಗಳ ಬಗ್ಗೆಯೂ ವಿವರಿಸಿದ್ದಾರೆ.

ತಾವೇ ಬುದ್ಧಿವಂತರು ಅಂತಲೇ ಅವರಂದುಕೊಂಡಿರುತ್ತಾರೆ. ಮೂರ್ಖರು ಇನ್ನೊಬ್ಬರ ಮಾತನ್ನು ತಾಳ್ಮೆಯಿಂದ ಕೇಳುವ ಅರ್ಹತೆ ಹೊಂದಿರುವುದಿಲ್ಲ. ಏಕೆಂದರೆ ಅವರು ತಮ್ಮನ್ನು ತಾವು ಬುದ್ಧಿವಂತರು ಅಂತಲೇ ತಿಳಿದುಕೊಂಡಿರುತ್ತಾರೆ. ಹಾಗಾಗಿ ಜನ ಇವರ ಬಳಿ ಮಾತನಾಡವುದನ್ನೇ ಕಡಿಮೆ ಮಾಡಿ, ಇಂಥವರನ್ನು ಕಡೆಗಣಿಸುತ್ತಾರೆ.

ಯೋಚನೆ ಮಾಡದೇ ಥಟ್ ಎಂದು ಮಾತನಾಡುತ್ತಾರೆ. ಮೂರ್ಖರು ಯಾವಾಗಲೂ ಮುಂದೆ ಯಾವ ಸಮಸ್ಯೆ ಬರಬಹುದು ಎಂಬ ಬಗ್ಗೆ ಯೋಚಿಸದೇ, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ತಮಗೆ ಹೇಗೆ ಬೇಕೋ, ಹಾಗೆ ವರ್ತಿಸುತ್ತಾರೆ. ಇಂಥವರು ಮನೆಯಲ್ಲಿ ಒಬ್ಬರು ಇದ್ದರೆ ಸಾಕು. ಆ ಮನೆಯ ನೆಮ್ಮದಿ ಭಾರೀ ಸುಲಭವಾಗಿ ಹಾಳಾಗಿ ಹೋಗುತ್ತದೆ.

ತಮ್ಮನ್ನು, ತಮ್ಮ ಮನೆ ಜನರನ್ನು ಹೆಚ್ಚು ಹೊಗಳಿಕೊಳ್ಳುತ್ತಿರುತ್ತಾರೆ. ಮೂರ್ಖರು ಹೆಚ್ಚಾಗಿ ತಮ್ಮನ್ನು ತಾವು ಹೆಚ್ಚು ಹೊಗಳಿಕೊಳ್ಳುತ್ತಾರೆ. ಎಲ್ಲರೊಂದಿಗೆ ತಮ್ಮನ್ನು ತಾವು ಕಂಪೇರ್ ಮಾಡುತ್ತಾರೆ. ಇತರರ ಯಶಸ್ಸನ್ನು ನಿರ್ಲಕ್ಷಿಸಿ, ಅವರನ್ನು ಕೆಳಮಟ್ಟಕ್ಕಿಳಿಸಿ ಮಾತನಾಡುತ್ತಾರೆ. ಅವರು ಬೇರೆಯವರನ್ನು ಹೊಗಳಲು ಎಂದಿಗೂ ಇಷ್ಟಪಡುವುದಿಲ್ಲ.

ತಮ್ಮ ಮಾತಿನಿಂದ ಇತರರಿಗೆ ಅವಮಾನಿಸುತ್ತಾರೆ. ಮೂರ್ಖರಿಗೆ ಯಾವ ರೀತಿ ಮಾತನಾಡಬೇಕು ಎಂಬ ಅರಿವಿರುವುದಿಲ್ಲ. ಅವರು ತಮ್ಮ ಮಾತಿನಿಂದ ಇತರರ ಮನಸ್ಸು ನೋಯಿಸುತ್ತಾರೆ. ನಾವು ಮಾತನಾಡಿದಾಗ ಅವರ ಮನಸ್ಸು ನೋಯುವಂತೆ, ಅವರಿಗೆ ಬೇಸರವಾಗುವಂತೆ, ಅವರು ಬೈದಾಗಲೂ ಇನ್ನೊಬ್ಬರಿಗೆ ಬೇಸರವಾಗಬಹುದು ಅಂತಾ ಅವರಿಗೆ ಅನ್ನಿಸುವುದಿಲ್ಲ.

ಇನ್ನೊಬ್ಬರ ಬಗ್ಗೆ ಸದಾ ನಕಾರಾತ್ಮಕವಾಗಿಯೇ ಮಾತನಾಡುತ್ತಾರೆ. ಮೂರ್ಖರು ಎಂದಿಗೂ ಇನ್ನೊಬ್ಬರ ಏಳಿಗೆ ಸಹಿಸುವುದಿಲ್ಲ. ಹಾಗಾಗಿ ಯಾರಿಗಾದರೂ ಒಳ್ಳೆಯದಾದರೆ, ಯಾರಾದರೂ ಹೊಸ ವಸ್ತು ಖರೀದಿಸಿದರೆ, ಯಾರಾದರೂ ಬುದ್ಧಿವಂತರು, ಸುಂದರರಾಗಿದ್ದರೆ, ಅಂಥವರ ತಪ್ಪು ಕಂಡು ಹಿಡಿದೋ, ಅಥವಾ ಅಂಥವರನ್ನು ಕೀಳು ಮಟ್ಟಕ್ಕಿಳಿಸಿ ಮಾತನಾಡುತ್ತಾರೆ.

- Advertisement -

Latest Posts

Don't Miss