- Advertisement -
ಜೀವನದ ಬಗ್ಗೆ ನೀತಿ ಪಾಠವನ್ನು ಹೇಳಿರುವ ಚಾಣಕ್ಯರು, ಮನುಷ್ಯ ಕಲಿಯ ಬೇಕಾದ ಮತ್ತು ಕಲಿಯಬಾರದ ಗುಣಗಳ ಬಗ್ಗೆ ಹೇಳಿದ್ದಾರೆ. ಅದರಲ್ಲೂ ಮುಖ್ಯವಾಗಿ ತಂದೆ ತಾಯಿ ಎಂಥ ವಿಷಯಗಳನ್ನು ಕಲಿಸಬಾರದು ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾಗಿ ನಾವಿಂದು ಚಾಣಕ್ಯರು ಜೀವನದಲ್ಲಿ ಎಂಥ ಗುಣಗಳನ್ನು ಕಲಿಸಬಾರದು ಎಂದು ಹೇಳಿದ್ದಾರೆಂದು ತಿಳಿಯೋಣ..
- ಮೊದಲನೇಯದಾಗಿ ಮಕ್ಕಳು ಕೇಳಿದ್ದೆಲ್ಲ ಕೊಡಿಸಬೇಡಿ. ನೀವು ನಿಮ್ಮ ಮಗು ಶಾಲೆ, ಕಾಲೇಜಿಗೆ ಹೋಗಲಿ ಎಂದು ಒಳ್ಳೆಯ ಶಾಲೆಗೆ ಸೇರಿಸುತ್ತೀರಿ, ಕಾಲೇಜಿಗೆ ಹೋಗಲು ಬೈಕ್, ಮೊಬೈಲ್ ಕೊಡಿಸುತ್ತೀರಿ. ಆದ್ರೆ ಇದೆಲ್ಲದರ ಬದಲು, ಅವನಿಗೆ ಬದುಕುವ ದಾರಿ ಹೇಳಿಕೊಡಿ. ನೀವೇ ಅವನಿಗೆ ಎಲ್ಲವನ್ನೂ ಕೊಡಿಸಿದರೆ, ಅವನಿಗೆ ಜವಾಬ್ದಾರಿ ಅನ್ನೋದು ಹೇಗೆ ಬರಬೇಕು..? ಹಾಗಾಗಿ ದುಡ್ಡಿನ ಮಹತ್ವ ಕಲಿಸಿ. ಅವಶ್ಯಕತೆ ಇದ್ದರೆ ಮಾತ್ರ ಖರ್ಚು ಮಾಡುವುದನ್ನು ಹೇಳಿಕೊಡಿ. ನಿಮ್ಮ ಮಕ್ಕಳು ಹೇಗೆ ಬೆಳಿಯಬೇಕು ಅಂದ್ರೆ ತಮಗೆ ಬೇಕಾದ ವಸ್ತುವನ್ನು ತಾವು ದುಡಿದು ತೆಗೆದುಕೊಳ್ಳುವಷ್ಟು ಸ್ವಾಭಿಮಾನಿಯಾಗುವಷ್ಟು.
- ಎರಡನೇಯದಾಗಿ ನಿಮ್ಮ ಮಕ್ಕಳಿಗೆ ಹೆಚ್ಚು ಸಲುಗೆ ನೀಡಬೇಡಿ. ಮಗುವಿಗೆ ಬೈದರೆ ಅದು ಬೇಸರ ಮಾಡಿಕೊಳ್ಳುತ್ತದೆ. ಬಡಿದರೆ ಅದಕ್ಕೆ ನೋವಾಗುತ್ತದೆ ಅನ್ನೋ ಮನಸ್ಥಿತಿ ಇರಿಸಿಕೊಳ್ಳಬೇಡಿ. ಹಾಗಂತ ಮಾತು ಮಾತಿಗೂ ಬೈಯ್ಯಬೇಡಿ, ಹೊಡೆಯಬೇಡಿ. ಅವನು ತಪ್ಪು ಮಾಡಿದಾಗ ಬೈದು ಬುದ್ಧಿ ಹೇಳಿ. ನೀವು ಹೆಚ್ಚು ಸಲುಗೆ ಕೊಟ್ಟು ಬೆಳೆಸಿದಲ್ಲಿ ಮಗು ದೊಡ್ಡದಾದ ಮೇಲೂ ನಿಮಗೆ ಗೌರವ ನೀಡುವುದಿಲ್ಲ. ಅದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯವಿಲ್ಲ. ಹಾಗಾಗಿ 5 ವರ್ಷದ ತನಕ ಪ್ರೀತಿಸಿ, ಆರನೇ ವರ್ಷದಿಂದ 16ನೇ ವರ್ಷದವರೆಗೂ ಸ್ಟ್ರಿಕ್ಟ್ ಆಗಿರಿ. ಹತ್ತನೇ ತರಗತಿ ನಂತರ ಗೆಳೆಯನಂತಿರಿ.
- ಮೂರನೇಯದಾಗಿ ನಿಮ್ಮ ಮಕ್ಕಳಿಗೆ ಎದುರುತ್ತರ ನೀಡಲು ಬಿಡಬೇಡಿ. ಮಕ್ಕಳು ತಮ್ಮ ತೊದಲು ನುಡಿಯಲ್ಲಿ ನಿಮ್ಮನ್ನು ಬೈಯ್ಯುವುದು, ಎದುರುತ್ತರ ನೀಡುವುದು ನಿಮಗೆ ಖುಷಿ ಕೊಡಬಹುದು. ಆದ್ರೆ ಇದೇ ಗುಣ ಮುಂದುವರಿದು, ಆ ಮಗು ಬೇರೆಯವರಿಗೂ ಎದುರುತ್ತರ ನೀಡಿದರೆ, ನಿಮಗೆ ಅವಮಾನವಾಗುತ್ತದೆ. ಮತ್ತು ಅಂಥ ಮಕ್ಕಳು ಎಂದಿಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯವಿಲ್ಲ. ಅದರೊಂದಿಗೆ ಯಾರೂ ಉತ್ತಮ ಸಂಭಂಧವನ್ನೂ ಇರಿಸಿಕೊಳ್ಳುವುದಿಲ್ಲ. ಹಾಗಾಗಿ ನಿಮ್ಮ ಮಗು ಹಿರಿಯರಿಗೆ ಗೌರವಿಸುವ, ಎದುರುತ್ತರ ನೀಡದಿರುವ ಹಾಗೆ ನೋಡಿಕೊಳ್ಳಿ.
- ನಿಮ್ಮ ಮಗು ತಾನು ಮಾಡುವ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲು ಬಿಡಬೇಡಿ. ಉದಾಹರಣೆಗೆ ನಿಮ್ಮ ಮಗು ನಡೆಯಲು ಪ್ರಯತ್ನಿಸುತ್ತಿದೆ. ಅಥವಾ ಸೈಕಲ್ ತುಳಿಯಲು ಪ್ರಯತ್ನಿಸುತ್ತಿದೆ. ಆದ್ರೆ ಆ ಮಗುವಿಗೆ ಅದನ್ನ ಪೂರ್ಣಗೊಳಿಸಲು ಆಗುತ್ತಿಲ್ಲ. ಆಗ ನೀವು ಅದಕ್ಕೆ ನಡೆಯಲು ಅಥವಾ ಸೈಕಲ್ ತುಳಿಯಲು ಮತ್ತೆ ಮತ್ತೆ ಪ್ರಯತ್ನಿಸುವಂತೆ ಪ್ರೇರೇಪಿಸಿ. ನಾವು ಪ್ರಯತ್ನ ಪಟ್ಟಷ್ಟು ಉತ್ತುಂಗಕ್ಕೇರುತ್ತೇವೆ. ಹಾಗಾಗಿ ನಿಮ್ಮ ಮಕ್ಕಳಿಗೆ ಎಂದಿಗೂ ಪ್ರಯತ್ನಿಸುವುದನ್ನು ಬಿಡಬೇಡಿ ಎಂದು ಹೇಳಿ.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..
- Advertisement -