ಮೊದಲ ಭಾಗದಲ್ಲಿ ನಾವು ಪೋಷಕರು ಎಂಥ ತಪ್ಪುಗಳನ್ನು ಮಾಡಬಾರದು ಎಂಬ ಬಗ್ಗೆ ಚಾಣಕ್ಯರು ಹೇಳಿದ ವಿಷಯದಲ್ಲಿ ನಾಲ್ಕು ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ ಇನ್ನೂ 4 ವಿಷಯಗಳ ಬಗ್ಗೆ ಹೇಳಲಿದ್ದೇವೆ.
- ಇನ್ನು ನಿಮ್ಮ ಮಕ್ಕಳಿಗೆ ಮೊಂಡು ವಾದ ಮಾಡಲು ಬಿಡಬೇಡಿ. ನಿಮ್ಮ ಮಕ್ಕಳ ಜೊತೆ ಯಾರಾದರೂ ಮೊಂಡು ವಾದ ಮಾಡಿದರೆ, ಅಥವಾ ನಿಮ್ಮ ಮಕ್ಕಳು ನಿಮ್ಮೊಂದಿಗೆ ಅಥವಾ ಬೇರೆಯವರೊಂದಿಗೆ ಮೊಂಡು ವಾದ ಮಾಡಲು ಶುರುಮಾಡಿದರೆ, ಅಂಥ ಸಮಯದಲ್ಲಿ ಮಗುವಿಗೆ ಬೈದು ಬುದ್ಧಿ ಹೇಳಿ. ತಿಳಿಸಿ ಹೇಳಿ. ಮೊಂಡು ವಾದ ಬುದ್ಧಿವಂತರ ಲಕ್ಷಣವಲ್ಲ, ಅದು ಮೂರ್ಖರ ಸ್ವಭಾವ ಎಂದು ಹೇಳಿ. ಆಗ ಮಗು ಇನ್ನೊಮ್ಮೆ ಇನ್ನೊಬ್ಬರ ಜೊತೆ ಮೊಂಡು ವಾದ ಮಾಡಲು ಹೋಗುವುದಿಲ್ಲ.
- ನೀವು ನಿಮ್ಮ ಮಗುವಿನ ಎದುರಿಗೆ ಬೇರೆಯವರ ಬಗ್ಗೆ ಹೀಯಾಳಿಸಬೇಡಿ. ಚಾಡಿ ಹೇಳುವುದೆಲ್ಲ ಮಾಡಬೇಡಿ. ನಿಮ್ಮ ಮಕ್ಕಳು ಕೂಡ ಇದೇ ಬುದ್ಧಿ ಕಲಿಯುತ್ತಾರೆ. ಉದಾಹರಣೆಗೆ ನಿಮ್ಮ ಮಗುವಿಗೆ ಯಾರಾದರೂ ಕಡಿಮೆ ಬೆಲೆಯ ಗಿಫ್ಟ್ ಕೊಡುತ್ತಾರೆ. ಆಗ ನೀವು ಆ ಮಗುವಿನ ಎದುರಿಗೆ ಇದು ಒಂದು ಗಿಫ್ಟಾ..? ಎಷ್ಟು ಕಡಿಮೆ ಬೆಲೆಯ ಗಿಫ್ಟ್ ಕೊಟ್ಟಿದ್ದಾರೆ. ನಾವು ಅವರ ಮಗುವಿಗೆ ಎಷ್ಟು ಕಾಸ್ಟ್ಲಿ ಗಿಫ್ಟ್ ಕೊಟ್ಟಿದ್ವಿ.
ಇದು ಬೇರೆ ಯಾರಿಗಾದ್ರೂ ಕೊಡೋಣ ಅಂತಾ ಹೇಳಿದ್ರಿ ಅಂತಿಟ್ಕೊಳ್ಳಿ. ಆಗ ಆ ಮಗು ಸಂಬಂಧಕ್ಕೆ ಬೆಲೆ ಕೊಡುವುದಕ್ಕಿಂತ ಹೆಚ್ಚು, ಗಿಫ್ಟ್, ದುಡ್ಡಿಗೆ ಬೆಲೆ ಕೊಡುತ್ತದೆ. ಅದು ಕೂಡ ಹೀಗೆ ಮಾತನಾಡಲು ಶುರು ಮಾಡತ್ತೆ. ಹಾಗಾಗಿ ಮಗುವಿನ ಎದುರಿಗೆ ಕಾಸ್ಟ್ಲಿ, ಕಡಿಮೆ ಬೆಲೆ ಅಂತಾ ಮಾತನಾಡುವ ಬದಲು, ಎಲ್ಲರಿಗೂ ಸಮನಾಗಿ ಕಾಣುವ ಬುದ್ಧಿ ಹೇಳಿಕೊಡಿ.
- ಬೇರೆಯವರ ಮಗುವಿನ ಎದುರಿಗೆ ನಿಮ್ಮ ಮಕ್ಕಳನ್ನ ಬೈಯ್ಯಬೇಡಿ. ಇದರಿಂದ ಮಗು ಕುಗ್ಗಿಹೋಗುತ್ತದೆ. ಬೇರೆಯವರು ಉತ್ತಮ ಅಂಕ ಗಳಿಸಿದರೆಂದು, ನೀನು ಕಡಿಮೆ ಅಂಕ ಗಳಿಸಿದೆ ಎಂದು ಬೈಯ್ಯುವುದೆಲ್ಲ ಮಾಡಬೇಡಿ. ಯಾಕಂದ್ರೆ ಅವರವರ ಯೋಗ್ಯತೆ ಅವರವರಿಗೆ. ಹಾಗಾಗಿ ನಿಮ್ಮ ಮಗುವನ್ನ ಬೇರೆಯವರೊಂದಿಗೆ ಹೋಲಿಸಿ ಮಾತನಾಡಿ, ನಿಮ್ಮ ಮಗುವಿನ ಆತ್ಮ ಸ್ಥೈರ್ಯವನ್ನ ಕುಗ್ಗಿಸಬೇಡಿ.
- ನಿಮ್ಮ ಮಕ್ಕಳು ಹೆಚ್ಚಾಗಿ ಬೇರೆಯವರು ಹೇಳಿದ್ದನ್ನೇ ಕೇಳುವ ಹಾಗೆ ಮಾಡಬೇಡಿ. ಆ ಮಗುವಿನ ಮನಸ್ಸಿನ ಮಾತನ್ನು ಆಲಿಸಿ. ಉದಾಹರಣೆಗೆ ಹತ್ತನೇ ತರಗತಿ ಮುಗಿಸಿದ ಬಳಿಕ, ನಿಮ್ಮ ಮಗು ಯಾವ ಸಬ್ಜೆಕ್ಟ್ ತೊಗೋಳ್ಳೋದು..? ಯಾವ ಕಾಲೇಜಿಗೆ ಹೋಗೋದು ಅನ್ನೋ ಗೊಂದಲದಲ್ಲಿರುತ್ತೆ. ನೀವು ಅದೇ ಗೊಂದಲದಲ್ಲಿರುತ್ತೀರಿ. ಆಗ ಹಲವರು ಹಲವು ರೀತಿಯ ಸಲಹೆ ಕೊಡ್ತಾರೆ.
ನೀವು ಎಲ್ಲರ ಸಲಹೆಯನ್ನ ತೆಗೆದುಕೊಳ್ಳಿ. ಹಾಗಂತ ನಿಮ್ಮ ಮಗುವಿಗೆ ಈ ಬಗ್ಗೆ ಒತ್ತಡ ಹೇರಬೇಡಿ. ಅವನು ಯಾವ ಕಾಲೇಜಿಗೆ ಹೋಗಲು ಇಚ್ಛಿಸುತ್ತಾನೆ. ಅವನಿಗೆ ಯಾವ ವಿಷಯದಲ್ಲಿ ಇಂಟ್ರೆಸ್ಟ್ ಇದೆ ಅನ್ನೋದನ್ನ ಕೇಳಿ. ಅವನಿಗೆ ಇಷ್ಟವಾಗೋ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಲು ಬಿಡಿ. ನೀವು ಇದನ್ನೇ ತಗೋ ಎಂದು ಒತ್ತಡ ಹೇರಿ, ಅವನಿಗೆ ಆ ವಿಷಯದಲ್ಲಿ ಪಾಸಾಗಲೂ ಆಗದೇ, ಸುಮ್ಮನೇ ಅವನ ಸಮಯ ವ್ಯರ್ಥವಾಗುವ ಹಾಗೆ ಮಾಡಬೇಡಿ.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..