Chanakya Neeti: ಮನೆಗೆ ಅತಿಥಿಯನ್ನು ಕರೆದು ಉಣ ಬಡಿಸುವುದು ನಮ್ಮ ಭಾರತೀಯ ಪದ್ಧತಿ. ಹಾಗಾಗಿಯೇ ನಾವು ಅತಿಥಿ ದೇವೋಭವ, ವಸುದೈವ ಕುಟುಂಬಕಂ ಎಂದು ಹೇಳುತ್ತೇವೆ. ಆದರೆ ಚಾಣಕ್ಯರ ಪ್ರಕಾರ, ನಾವು ಯಾರನ್ನು ಮನೆಗೆ ಕರೆದರೂ, ಕೆಲವರನ್ನು ಮಾತ್ರ ಯಾವುದೇ ಕಾರಣಕ್ಕೂ ಮನೆಗೆ ಕರೆಯಬಾರದಂತೆ. ಹಾಗಾದ್ರೆ ನಾವು ಯಾರನ್ನು ಮನೆಗೆ ಕರೆಯಬಾರದು ಅಂತಾ ತಿಳಿಯೋಣ ಬನ್ನಿ..
ಸಮಯ ಸಾಧಕರು: ಕೆಲಸವಿದ್ದಾಗ ಮಾತ್ರ ಮಾತನಾಡಿಸಿ, ಬಳಿಕ ನಿಮ್ಮ ಉಪಕಾರವನ್ನು, ನಿಮ್ಮನ್ನು ಮರೆಯುವವರು. ಬಳಿಕ ನಿಮಗೇ ತಿರುಗುಬಾಣವಾಗುವವರನ್ನೆಲ್ಲ ಮನೆಗೆ ಕರೆಯಬೇಡಿ, ಅಂಥವರ ಜತೆ ಸಂಬಂಧ ಬೇಡ ಅಂತಾರೆ ಚಾಣಕ್ಯರು.
ಬೇರೆಯವರ ದುಃಖ ಕಂಡು ಖುಷಿಪಡುವವರು: ಬೇರೆಯವರಿಗೆ ಸಮಸ್ಯೆ ಬಂದಾಗ, ಅವರಿಗೆ ಸಹಾಯ ಮಾಡಲಾಗದಿದ್ದರೂ, ಧೈರ್ಯ ತುಂಬುವ ವ್ಯಕ್ತಿತ್ವ ಮನುಷ್ಯನಿಗಿರಬೇಕು. ಆದರೆ ಬೇರೆಯವರ ದುಃಖ ನೋಡಿ ಹಾಗೇ ಆಗಬೇಕು ಎಂದು ಖುಷಿ ಪಡುವವರ ಜತೆ ಎಂದಿಗೂ ಸಂಬಂಧ ಬೇಡ ಅಂತಾರೆ ಚಾಣಕ್ಯರು.
ಸ್ವಾರ್ಥಿಗಳು: ಸ್ವಾರ್ಥ ಸ್ವಭಾವದವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ತಮ್ಮ ಕೆಲಸಕ್ಕಾಗಿ ಮಾತ್ರ ನಿಮ್ಮ ಬಳಿ ಬರುತ್ತಾರೆ. ಅಂಥವರನ್ನು ಎಂದಿಗೂ ಸೇರಿಸಿಕ`ಳ್ಳಬೇಡಿ ಅಂತಾರೆ ಚಾಣಕ್ಯರು.
ದುರಾಸೆ ಉಳ್ಳವರು: ಆಸೆ ಅನ್ನೋದು ಮನುಷ್ಯನ ಜೀವನದ 1 ಭಾಗ ಮತ್ತು ಗುಣ. ಮನುಷ್ಯನಿಗೆ ಆಸೆ ಇದ್ದಾಗ ಮಾತ್ರ, ಆತ ಅದಕ್ಕಾಗಿ ದುಡಿಯುತ್ತಾನೆ ಮತ್ತು ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ. ಆದರೆ ದುರಾಸೆ ಇರುವ ವ್ಯಕ್ತಿ ತನ್ನ ಪರಿಶ್ರಮದಿಂದ ಏನನ್ನೂ ಪಡೆಯುವುದಿಲ್ಲ. ಬದಲಾಗಿ ಇನ್ನ`ಬ್ಬರಿಂದಲೇ ಬಯಸುತ್ತಾರೆ. ಅಂಥವರು ತಮ್ಮ ದುರಾಸೆ ಈಡೇರಿದ ಬಳಿಕ, ಅಪರಿಚಿತರ ಥರ ಇರುತ್ತಾರೆ. ಹಾಗಾಗಿ ಅಂಥವರಿಂದ ದೂರವಿರಿ ಎನ್ನುತ್ತಾರೆ ಚಾಣಕ್ಯರು.




