Friday, December 5, 2025

Latest Posts

ಚಾಣಕ್ಯರ 8 ನೀತಿಗಳು ಭಾಗ 2: ರೋಗ, ಹಾವು, ಶತ್ರುವನ್ನು ಅರ್ಧಕ್ಕೆ ಬಿಡಬೇಡಿ…

- Advertisement -

ಮೊದಲ ಭಾಗದಲ್ಲಿ ನಾವು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ 8 ಪ್ರಮುಖ ವಿಷಯಗಳಲ್ಲಿ ನಾಲ್ಕು ವಿಷಯಗಳ ಬಗ್ಗೆ ಮಾಹಿತಿ ತಿಳಿದಿದ್ದೆವು. ಈಗ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ..

ಐದನೇಯದಾಗಿ ರೋಗವನ್ನು, ಹಾವನ್ನು ಮತ್ತು ಶತ್ರುವನ್ನು ಅರ್ಧಕ್ಕೆ ಬಿಡಬಾರದಂತೆ. ಅಂದ್ರೆ ರೋಗ ಬಂದಾಗ, ಅದಕ್ಕೆ ಅರ್ಧ ಚಿಕಿತ್ಸೆ ಕೊಟ್ಟು ಬಿಟ್ಟರೆ, ಅದು ಮುಂದೊಂದು ದಿನ ಮತ್ತೆ ಉಲ್ಬಣಿಸಿ, ನಿಮ್ಮ ಜೀವ ಹೋಗುವ ಸಂಭವವಿರುತ್ತದೆ. ಹಾಗಾಗಿ ರೋಗಕ್ಕೆ ಯಾವಾಗಲೂ ಪೂರ್ತಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇನ್ನು ಹಾವನ್ನು ಹೊಡೆದರೆ, ಪೂರ್ತಿ ಹೊಡೆದು ಮುಗಿಸಿ, ಇಲ್ಲವಾದಲ್ಲಿ ಅದು ನಿಮ್ಮ ಜೀವ ತೆಗೆಯುವ ಸಾಧ್ಯತೆ ಇರುತ್ತದೆ. ಇನ್ನು ಶತ್ರುವನ್ನು ಅರ್ಧಕ್ಕೆ ಸೋಲಿಸಿ ಬಿಡಬೇಡಿ. ಅವನನ್ನು ಹೇಗೆ ಸೋಲಿಸಬೇಕೆಂದರೆ, ಮತ್ತೆ ಅವನೆಂದೂ ನಿಮ್ಮ ವಿರುದ್ಧ ಸಂಚು ರೂಪಿಸಬಾರದು. ಹಾಗೆ ಸೋಲಿಸಬೇಕು.

ಆರನೇಯದಾಗಿ ನಿಮ್ಮ ಶತ್ರುಗಳೊಂದಿಗೆ ಎಂದಿಗೂ ಅಗೌರವವಾಗಿ ನಡೆದುಕೊಳ್ಳಬೇಡಿ. ಅವರೊಂದಿಗೆ ನಿಷ್ಠುರವಾಗಿ ಮಾತನಾಡುವುದು, ಶತ್ರುತ್ವ ತೋರಿಸುವುದೆಲ್ಲ ಮಾಡಬೇಡಿ. ಯಾಕಂದ್ರೆ ಅವನು ನಿಮ್ಮ ಶತ್ರುವಾದರೂ, ಅವನನ್ನು ನೀವು ನಿಮ್ಮ ಕೆಲಸದ ಮೂಲಕ ಮಣಿಸಬೇಕೇ ಹೊರತು, ದ್ವೇಷ ಮಾಡುವ ಮೂಲಕವಲ್ಲ. ಅಲ್ಲದೇ ನೀವು ನಿಮ್ಮ ಶತ್ರುತ್ವ ತೋರಿಸಿದ್ದಲ್ಲಿ, ನೀವು ಬಲಹೀನರೆನ್ನಿಸುತ್ತೀರಿ. ಯಾಕಂದ್ರೆ ನೀವು ಶತ್ರುವನ್ನು ದ್ವೇಷ ಮಾಡುವ ಭರದಲ್ಲಿ ಅವನ ಬಲಹೀನತೆಯನ್ನಷ್ಟೇ ಗಮನಿಸುತ್ತೀರಿ ವಿನಃ, ಅವನ ಬಲಿಷ್ಠತೆ ನಿಮಗೆ ಕಾಣುವುದಿಲ್ಲ. ಮತ್ತು ಆ ಬಲಿಷ್ಠತೆಯಿಂದಲೇ ಅವನು ನಿಮ್ಮನ್ನು ಸೋಲಿಸಬಹುದು.

ಏಳನೇಯದಾಗಿ ಬಲ ಪ್ರಯೋಗ ಮಾಡುವ ಜಾಗದಲ್ಲಿ ಬುದ್ಧಿ ಪ್ರಯೋಗ ಮಾಡಿರಿ. ಆಚಾರ್ಯ ಚಾಣಕ್ಯರ ಪ್ರಕಾರ, ಶತ್ರುವಿನ ಮೇಲೆ ಎಂದಿಗೂ ಅಸ್ತ್ರದಿಂದ ಬಲ ಪ್ರಯೋಗ ಮಾಡಬಾರದಂತೆ. ಬದಲಾಗಿ ಬುದ್ಧಿಯಿಂದ ಬಲ ಪ್ರಯೋಗ ಮಾಡಬೇಕು. ಉದಾಹರಣೆಗೆ ಒಂದು ಕಂಪನಿಯ ಓನರ್ ಬಳಿ, ಉತ್ತಮ ಕೆಲಸಗಾರರಿದ್ದಲ್ಲಿ, ಆ ಕಂಪೆನಿ ಒಳ್ಳೆಯ ಲಾಭ ಗಳಿಸುತ್ತದೆ. ಆ ಲಾಭ ಅವನ ಶತ್ರುವಿಗೆ ಬೇಕೆಂದಲ್ಲಿ, ಅವನು ಆ ಕಂಪೆನಿಯ ಉತ್ತಮಮ ಕೆಲಸಗಾರರನ್ನು ಹೆಚ್ಚಿನ ಸಂಬಳಕ್ಕೆ ತನ್ನ ಬಳಿ ಸೆಳೆದುಕೊಳ್ಳಬೇಕು. ಅವರೆಲ್ಲ ಆ ಕಂಪೆನಿಯಲ್ಲೇ ಇರುವಂತೆ, ನಿಮಗೆ ಲಾಭ ತಂದುಕೊಡುವಂತೆ ಮಾಡುವುದೇ ಬುದ್ಧಿ ಪ್ರಯೋಗ ಎನ್ನುವುದು.

ಎಂಟನೇಯದಾಗಿ ಹೇಳುವುದನ್ನು ಹೇಳಿಬಿಡಿ. ಇದರ ಅರ್ಥವೇನೆಂದರೆ, ನೀವು ಯಾರಿಗಾದರೂ ಏನಾದರೂ ಹೇಳಬೇಕೆಂದಲ್ಲಿ ಎದುರಿಗೆ ಹೇಳಿಬಿಡಿ. ಅದರ ಬದಲು ಅವರ ಹಿಂದೆ ಮಾತನಾಡುವುದು, ಅಥವಾ ಅವರ ಬಗ್ಗೆ ಬೇರೆಯವರ ಎದುರು ಮಾತನಾಡುವುದು ಹೇಡಿತನವಾಗುತ್ತದೆ. ಅಲ್ಲದೇ ಇದ್ದುದ್ದನ್ನ ಇದ್ದ ಹಾಗೆ ಹೇಳಿಬಿಡುವ ಸ್ವಭಾವ ಇರುವವರಿಗೆ ಎಂದಿಗೂ ಹೆದರಿಕೆ ಇರುವುದಿಲ್ಲ. ಅವರೆಂದೂ ಸೋಲುವುದಿಲ್ಲ.

- Advertisement -

Latest Posts

Don't Miss