Sunday, September 8, 2024

Latest Posts

ಭವಿಷ್ಯದ ವಿಪತ್ತಿನ ವಿರುದ್ಧ ಸಂಪತ್ತನ್ನು ಉಳಿಸಿ ಎಂದಿದ್ದಾರೆ ಚಾಣಕ್ಯರು.. ಏನಿದರ ಅರ್ಥ..?

- Advertisement -

Spiritual: ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಹಾಗಾಗಿ ನಮ್ಮ ಬಳಿ ಸ್ವಲ್ಪ ಸೇವಿಂಗ್ಸ್ ಇರಬೇಕು ಅಂತಾ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಯಾಕಂದ್ರೆ ಅವರು ಕೂಡ ಹಣವಿಲ್ಲದೇ, ಪರದಾಡಿ, ಸಾಲ ಮಾಡಿ, ಅವಮಾನ ಅನುಭವಿಸಿರಬಹುದು. ಹಾಗಾಗಿ ಹಣ ಉಳಿತಾಯ ಮಾಡುವ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ಹೇಳುತ್ತಾರೆ. ಚಾಣಕ್ಯರು ಕೂಡ ಭವಿಷ್ಯದ ವಿಪತ್ತಿನ ವಿರುದ್ಧ ಸಂಪತ್ತನ್ನು ಉಳಿಸಿ ಎಂದು ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಈಗ ಎರಡು ವರ್ಷಗಳ ಹಿಂದೆ ಕೊರೊನಾ ಬಂದು, ನಾವೆಲ್ಲ ಉಳಿತಾಯದ ಮಹತ್ವವನ್ನು ಅರಿತಿದ್ದೇವೆ. ಇಂಥ ಸಮಯ ಯಾವಾಗ ಬೇಕಾದರೂ ಬರಬಹುದು. ಹಾಗಾಗಿ ನೀವು ದುಡಿದ ಹಣದಲ್ಲಿ ದೊಡ್ಡ ಭಾಗವನ್ನು ಉಳಿತಾಯ ಮಾಡಿ ಎಂದು ಚಾಣಕ್ಯರು ಹೇಳಿದ್ದಾರೆ. ದುಡಿದ ಹಣದಲ್ಲಿ ಉಳಿತಾಯಕ್ಕೆ ಹಣ ಇಟ್ಟು, ಉಳಿದ ಹಣವನ್ನು ಅವಶ್ಯಕತೆ ಇರುವಷ್ಟು ಖರ್ಚು ಮಾಡಿ ಎಂದಿದ್ದಾರೆ ಚಾಣಕ್ಯರು.

ಕೆಲವರು ಸಂಬಳ ಚೆನ್ನಾಗಿ ಬರುತ್ತಿದೆ ಎಂದು ಕಂಡ ಕಂಡದ್ದನ್ನು ಖರೀದಿಸಿ, ಶೋಕಿ ಮಾಡುತ್ತಾರೆ. ಬಳಿಕ ಹಣದ ಅವಶ್ಯಕತೆ ಇದ್ದಾಗ, ಪಶ್ಚಾತಾಪ ಪಡುತ್ತಾರೆ. ಹಾಗಾಗಿ ಭವಿಷ್ಯದ ವಿಪತ್ತಿನ ವಿರುದ್ಧ ಸಂಪತ್ತನ್ನು ಉಳಿಸಿ ಎಂದು ಚಾಣಕ್ಯರು ಹೇಳಿದ್ದಾರೆ. ಏಕೆಂದರೆ, ಬರೀ ಬಡವರಿಗೆ ಅಥವಾ ಮಧ್ಯಮ ವರ್ಗದವರಿಗಷ್ಟೇ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂದು ಹೇಳಲಾಗುವುದಿಲ್ಲ. ಶ್ರೀಮಂತರ ಆರ್ಥಿಕ ಪರಿಸ್ಥಿತಿ ಹಾಳಾಗಬಹುದು. ಕೂಡಿಟ್ಟ ಹಣ ನದಿಯಂತೆ ಹರಿದು ಹೋಗಬಹುದು. ಹಾಗಾಗಿ ಶ್ರೀಮಂತಿಕೆ ಇದ್ದರೂ ಕೂಡ, ಉಳಿತಾಯ ಮಾಡುವ ಬುದ್ಧಿವಂತಿಕೆ ನಿಮ್ಮಲ್ಲಿರಬೇಕು ಎನ್ನುತ್ತಾರೆ ಚಾಣಕ್ಯರು.

ಹಾಗಾದ್ರೆ ನಾವು ಜೀವನವನ್ನು ಎಂಜಾಯ್ ಮಾಡುವುದೇ ಬೇಡವಾ, ಬರೀ ಹಣ ಕೂಡಿಟ್ಟುಕೊಂಡೇ ಇರಬೇಕಾ ಎಂಬ ಪ್ರಶ್ನೆಗೂ ಚಾಣಕ್ಯರು ಈ ರೀತಿಯಾಗಿ ಹೇಳಿದ್ದಾರೆ. ಜೀವನದ ಎಲ್ಲ ಕ್ಷಣಗಳಲ್ಲೂ ನಾವು ಖುಷಿಯಾಗಿರಬೇಕು. ಆದರೆ ಮಿತವಾಗಿ ಹಣ ಖರ್ಚು ಮಾಡಿ, ಆ ಖುಷಿಯನ್ನು ಪಡೆಯಬೇಕು. ಅದನ್ನು ಬಿಟ್ಟು ಎಲ್ಲ ಹಣವನ್ನು ಖುಷಿಗಂತಲೇ ಖರ್ಚು ಮಾಡಿದರೆ, ದುಃಖದ ಸಮಯದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ ಎನ್ನುತ್ತಾರೆ ಚಾಣಕ್ಯರು.

ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..

ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?

ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..

- Advertisement -

Latest Posts

Don't Miss