Spiritual Story: ಪತಿ-ಪತ್ನಿ ಸಂಬಂಧ ಅಂದ್ರೆ, ಪವಿತ್ರವಾದ ಸಂಬಂಧ. ಏಕೆಂದರೆ, ಪತಿ-ಪತ್ನಿ ಸೇರಿದಾಗ ಸಂಸಾರ ಶುರುವಾಗುತ್ತದೆ. ಮಕ್ಕಳು, ಮೊಮ್ಮಕ್ಕಳು, ಹೀಗೆ ವಂಶವೃಕ್ಷ ಬೆಳೆಯುತ್ತದೆ. ಹಾಗಾಗಿ ಪತಿ-ಪತ್ನಿ ಸಂಬಂಧವನ್ನು ಪವಿತ್ರ ಸಂಬಂಧವೆಂದು ಹೇಳಲಾಗುತ್ತದೆ. ಆದರೆ ಪತಿ- ಪತ್ನಿ ಮಧ್ಯೆ ಕೆಲವು ಗುಟ್ಟು ಗುಟ್ಟಾಗಿಯೇ ಇರಬೇಕು ಅಂತಾರೆ ಚಾಣಕ್ಯರು. ಹಾಗಾದ್ರೆ ಪತಿಯಾದವನು, ಪತ್ನಿಯ ಬಳಿ ಯಾವ ಯಾವ ಗುಟ್ಟುಗಳನ್ನು ಹೇಳಬಾರದು ಅಂತಾ ತಿಳಿಯೋಣ ಬನ್ನಿ..
ಯಶಸ್ಸಿನ ಗುಟ್ಟನ್ನು ಪತ್ನಿಗೂ ಹೇಳಬೇಡಿ. ಕೆಲವರು ಅವಳು ನನ್ನ ಪತ್ನಿ, ಆಕೆ ನನ್ನ ಕಷ್ಟವನ್ನು ಅರಿತು, ನನ್ನ ಯಶಸ್ಸಿಗೆ ಸಾಥ್ ಕೊಡುತ್ತಾಳೆಂದು ತಿಳಿದು, ತಾನು ಮಾಡಹೊರಟಿರುವ ಕೆಲಸವನ್ನುು ಆಕೆಯ ಬಳಿ ಹೇಳುತ್ತಾನೆ. ಆದರೆ ಕೆಲವೊಮ್ಮೆ ಪತ್ನಿಯಾದವಳು ಆ ಮಾತನ್ನು ಅಲ್ಲಗಳಿಯಬಹುದು. ಅಲ್ಲದೇ ಮುಂದೊಂದು ದಿನ ನೀವು ಆ ಕೆಲಸ ಮಾಡುವಲ್ಲಿ ಯಶಸ್ವಿಯಾಗಲಿಲ್ಲವೆಂದಲ್ಲಿ, ಆಕೆ ನಿಮ್ಮನ್ನು ಹೀಯಾಳಿಸಬಹುದು. ಹಾಗಾಗಿ ನಿಮ್ಮ ಕೆಲಸವನ್ನು ಮೌನವಾಗಿ ಮಾಡುತ್ತಲಿರಿ.
ಹಾಗಂತ ಎಲ್ಲ ಪತ್ನಿಯರೂ ಪತಿಗೆ ಯಶಸ್ಸು ಗಳಿಸಲು ಸಾಥ್ ಕೊಡುವುದಿಲ್ಲ ಎಂದರ್ಥವಲ್ಲ. ಕೆಲವರು ತಮ್ಮ ಜೀವನವನ್ನೇ ಪತಿಯ ಯಶಸ್ಸಿಗಾಗಿ ಮುಡಿಪಿಡುತ್ತಾರೆ. ಆದರೆ ಕೆಲವರು, ಪತಿಯ ಸಂಬಂಧಿಕರ ಮೇಲಿನ ದ್ವೇಷದಿಂದ ಪತಿಯ ಯಶಸ್ಸನ್ನು ಸಹಿಸುವುದಿಲ್ಲ. ಹಾಗಾಗಿ ನಿಮ್ಮ ಯಶಸ್ಸಿನ ಬಗ್ಗೆ ನಿಮಗಷ್ಟೇ ಗೊತ್ತಿರಲಿ.
ನಿಮ್ಮಲ್ಲಿರುವ ಸಮಸ್ಯೆ ಬಗ್ಗೆ ಪತ್ನಿಯಲ್ಲಿ ಹೇಳಿಕೊಳ್ಳಬೇಡಿ. ಕೆಲವರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದನ್ನು ತಾನು ಪತ್ನಿಯಲ್ಲಿ ಹೇಳಿಕೊಂಡರೆ, ಆಕೆ ತನ್ನನ್ನು ಸಮಾಧಾನ ಪಡಿಸುವಳು. ತನ್ನನ್ನು ಇನ್ನಷ್ಟು ಪ್ರೀತಿಸುವಳು ಎಂದು ತಿಳಿಯುತ್ತಾರೆ. ಆದರೆ ಎಲ್ಲ ಪತ್ನಿಯರು ಹಾಗಿರುವುದಿಲ್ಲ. ಕೆಲವರು ನಿಮ್ಮ ಸಮಸ್ಯೆಗಳನ್ನು, ಅಥವಾ ನೀವು ಎದುರಿಸಿದ ಸಮಸ್ಯೆಗಳನ್ನು ಕೇಳಿ, ಸಮಯ ಬಂದಾಗ, ಅದರ ಬಗ್ಗೆ ಹೀಯಾಳಿಸಬಹುದು. ಹಾಗಾಗಿ ನಿಮ್ಮ ಸಮಸ್ಯೆ, ನಿಮ್ಮ ವೀಕ್ನೆಸ್‌ನ್ನು ಪತ್ನಿಯ ಬಳಿ ಹೇಳಬೇಡಿ.
ನಿಮ್ಮ ಸಂಬಳದ ಬಗ್ಗೆ ಪೂರ್ತಿ ಮಾಹಿತಿ ಹೇಳುವುದು ಬೇಡ. ಕೆಲವರು ವಿವಾಹವಾಗುವ ಮುನ್ನ ಪತ್ನಿಯಾದವಳಿಗೆ ತನ್ನ ಸಂಬಳಕ್ಕಿಂತಲೂ ಹೆಚ್ಚು ಸಂಬಳವೆಂದು ಸುಳ್ಳು ಹೇಳುತ್ತಾರೆ. ಇನ್ನು ಕೆಲವರು ಸಂಬಳದ ಬಗ್ಗೆ ಪಕ್ಕಾ ವಿವರ ಕೊಡುತ್ತಾರೆ. ಇವೆರಡು ತಪ್ಪು. ನಿಮಗೆ ಎಷ್ಟು ಸಂಬಳ ಬರುತ್ತಿದೆಯೋ, ಅದಕ್ಕಿಂತ ಕೊಂಚ ಕಡಿಮೆಯೇ ಸಂಬಳವೆಂದು ಹೇಳಿ. ಆಗ ಆಕೆಯ ನಿಜವಾದ ಗುಣ ನಿಮಗೆ ಅರ್ಥವಾಗುತ್ತದೆ. ಆಕೆ ಹಣಕ್ಕೆ ಆಸೆ ಪಡುತ್ತಾಳೋ, ನಿಮ್ಮನ್ನು ಇಷ್ಟಪಡುತ್ತಾಳೋ ಅನ್ನೋದು ಗೊತ್ತಾಗುತ್ತದೆ.
ಅಲ್ಲದೇ ಬಂದ ಸಂಬಳದಲ್ಲಿ ನೀವು ಸ್ವಲ್ಪ ಹಣವನ್ನು ಪತ್ನಿಗೆ ತಿಳಿಯದಂತೆ ಉಳಿತಾಯ ಮಾಡಬೇಕು. ಮುಂದೆ ಕಷ್ಟಕಾಲ ಬಂದಾಗ, ಅದು ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಸಂಬಳದ ಬಗ್ಗೆ ಪೂರ್ತಿ ಮಾಹಿತಿಯನ್ನು ನೀವು ಯಾರಲ್ಲಿಯೂ ಹೇಳದಿದ್ದರೆ ಉತ್ತಮ.
ನೀವು ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಅನ್ನಪೂರ್ಣೆಯ ಅವಕೃಪೆಗೆ ಪಾತ್ರರಾಗುತ್ತೀರಿ