Spiritual: ಜೀವನವನ್ನು ಹೇಗೆ ನಿಭಾಯಿಸಬೇಕು..? ಜೀವನ ಸಂಗಾತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು..? ಹಣಕಾಸಿನ ಸಮಸ್ಯೆ ಬಾರದಿರಲು ಏನು ಮಾಡಬೇಕು..? ಹೀಗೆ ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಇಂದು ನಾವು ಎಂಥ ಜನರೊಂದಿಗೆ ಸ್ನೇಹ ಮಾಡಿದಾಗ, ನಾವು ಉದ್ಧಾರವಾಗಲು ಸಾಧ್ಯವಾಗೋದಿಲ್ಲವೆಂದು ಚಾಣಕ್ಯರು ಹೇಳಿದ್ದಾರೆಂಬ ಬಗ್ಗೆ ವಿವರಿಸಲಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ..
ಯಾವಾಗಲೂ ಕೊಂಕು ಮಾತನಾಡುವ, ತಪ್ಪು ಹುಡುಕುವ ಮಹಿಳೆಯರ ಸಹವಾಸ ಎಂದಿಗೂ ಮಾಡಬಾರದು ಅಂತಾರೆ ಚಾಣಕ್ಯರು. ಅಂಥ ಮಹಿಳೆಯರು ಎಂದಿಗೂ ತನ್ನ ಪತಿ, ಮಕ್ಕಳು ಸೇರಿ ಮನೆಯ ಯಾವ ಸದಸ್ಯರನ್ನೂ ನೆಮ್ಮದಿಯಿಂದ ಇರಲು ಬಿಡಲಾರರು. ಇವರ ಮಾತಿನಿಂದ ಎಲ್ಲರ ಮಾನಸಿಕ ನೆಮ್ಮದಿ ಹಾಳಾಗಿ ಹೋಗುತ್ತದೆ. ಇಂಥವರು ಎಂದಿಗೂ ಸುಖವಾಗಿ ಸಂಸಾರ ಮಾಡುವುದಿಲ್ಲ. ತಮ್ಮ ಸಂಗಾತಿಯನ್ನು ಸುಖವಾಗಿರಲು ಬಿಡುವುದಿಲ್ಲ.
ಮೂರ್ಖರ ಸಹವಾಸ ಎಂದಿಗೂ ಮಾಡಬಾರದು ಅಂತಾರೆ ಚಾಣಕ್ಯರು. ಮೂರ್ಖರ ಸಹವಾಸ ಮಾಡಿದರೆ, ನಮ್ಮಲ್ಲಿರುವ ಅಲ್ಪಸ್ವಲ್ಪ ಬುದ್ಧಿವಂತಿಕೆಯೂ ಹೊರಟು ಹೋಗುತ್ತದೆ. ಏಕೆಂದರೆ, ಮೂರ್ಖರ ಆಲೋಚನೆ ಸದಾ ಕೆಳಮಟ್ಟದ್ದಾಗಿರುತ್ತದೆ. ಇವರು ಮೂರ್ಖರಾಗಿದ್ದರು, ತಮಗೆಲ್ಲ ಗೊತ್ತು, ತಾವು ಉಚ್ಛರು ಎಂಬಂತಿರುತ್ತಾರೆ. ಇದರಿಂದ, ಇವರೊಂದಿಗೆ ಇರುವವರಿಗೂ ಮುಜುಗರ ಉಂಟಾಗುತ್ತದೆ. ಅಲ್ಲದೇ, ಮೂರ್ಖರು ಬರೀ ಇತರರ ತಪ್ಪು ಕಂಡು ಹಿಡಿದು ಮಾತತನಾಡುತ್ತಾರೆ ವಿನಃ, ಇವರಿಗೆ ಇನ್ನೊಬ್ಬರ ಬುದ್ಧಿವಂತಿಕೆ, ಉತ್ತಮ ಸ್ವಭಾವ ಹೊಗಳಿ ಅಭ್ಯಾಸವಿರುವುದಿಲ್ಲ.
ಸದಾ ಅಳುವ, ಸದಾ ಬೇಸರದಲ್ಲೇ ಇರುವ ಜನರ ಸಹವಾಸ ಮಾಡಬಾರದು ಅಂತಾರೆ ಚಾಣಕ್ಯರು. ಇವರು ಅತೃಪ್ತರು. ಇರುವುದರಲ್ಲೇ ಖುಷಿ ಪಡುವ ಸ್ವಭಾವ ಇವರದ್ದಾಗಿರುವುದಿಲ್ಲ. ಯಾವಾಗಲೂ ಬೇರೆಯವರ ಬಳಿ ಇರುವ ವಸ್ತು, ಸುಖಕ್ಕೆ ಹಾತೊರೆಯುತ್ತಾರೆ ಹೊರತು, ತಮ್ಮ ಬಳಿ ಇರುವುದನ್ನು ಖುಷಿಯಿಂದ ಅನುಭವಿಸುವ ಯೋಗ್ಯತೆ ಇವರಿಗೆ ಇರುವುದಿಲ್ಲ. ಹಾಗಾಗಿ ಇಂಥವರ ಸಹವಾಸ ಯಾರು ಮಾಡುತ್ತಾರೋ, ಅವರು ಕೂಡ ಜೀವನದಲ್ಲಿ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ.
ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಯಾರು..? ಗರುಡ ಪುರಾಣದಲ್ಲಿ ಹೀಗೆ ಹೇಳಿದ್ದಾರೆ ನೋಡಿ..
ಶ್ರೀಮಂತಿಕೆ ಇದ್ದಾಗಲೂ ಇಂಥ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ಚಾಣಕ್ಯ..